ಮನೆ ಉದ್ಯೋಗ ಮೈಸೂರಿನ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕದಲ್ಲಿದೆ ಉದ್ಯೋಗಾವಕಾಶ

ಮೈಸೂರಿನ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕದಲ್ಲಿದೆ ಉದ್ಯೋಗಾವಕಾಶ

0

ಭಾರತೀಯ ರಿಸರ್ವ್​ ಬ್ಯಾಂಕ್​ನ ನೋಟು ಮುದ್ರಣ ಪ್ರೈವೇಟ್​ ಲಿಮಿಟೆಡ್​ನ  ಮೈಸೂರು ಘಟಕದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಸಿಸ್ಟಂಟ್​ ಮ್ಯಾನೇಜರ್​, ಡೆಪ್ಯೂಟಿ ಮ್ಯಾನೇಜರ್​ ಸೇರಿದಂತೆ ಒಟ್ಟು 17 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಕೆಲಸದ ಹುದ್ದೆ ಆಕಾಂಕ್ಷಿ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​​​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 8 ಆಗಿದೆ.

ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಬ್ಯಾಂಕ್ ಹೆಸರು: ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಾಣ ಪ್ರೈವೇಟ್ ಲಿಮಿಟೆಡ್
ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕ, ಉಪ ವ್ಯವಸ್ಥಾಪಕ
ಹುದ್ದೆಗಳ ಸಂಖ್ಯೆ: 17
ಉದ್ಯೋಗ ಸ್ಥಳ: ಕರ್ನಾಟಕ – ಪಶ್ಚಿಮ ಬಂಗಾಳ
ವೇತನ: 56100-69700ರೂ. ಪ್ರತಿ ತಿಂಗಳು

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
ಪ.ಜಾ, ಪ.ಪಂ ಅಭ್ಯರ್ಥಿಗಳು: 5 ವರ್ಷಗಳು
ಅರ್ಜಿ ಸಲ್ಲಿಕೆ: ಆಫ್​ಲೈನ್​

ಅರ್ಜಿ ಶುಲ್ಕ: ವಿನಾಯಿತಿ

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವ ವಿಳಾಸ

ಸಿಎಫ್​ಒ ಮತ್ತು ಸಿಎಸ್​ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಾಣ ಪ್ರೈವೇಟ್ ಲಿಮಿಟೆಡ್, ನಂ.3  ಮತ್ತು  4, ಒಂದನೇ ಹಂತ, ಬಿಟಿಎಂ ಲೇಔಟ್, ಬನ್ನೇರುಘಟ್ಟ ರಸ್ತೆ, ಅಂಚೆ ಪೆಟ್ಟಿಗೆ ಸಂಖ್ಯೆ 2924, ಡಿ.ಆರ್. ಕಾಲೇಜು P. O., ಬೆಂಗಳೂರು – 560029.

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14 ಸೆಪ್ಟೆಂಬರ್​​ 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08 ಅಕ್ಟೋಬರ್ 2022

ಅಧಿಕೃತ ವೆಬ್‌ಸೈಟ್: brbnmpl.co.in

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ

ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.

ನಿಮ್ಮ ವರ್ಗಕ್ಕೆ ಅನುಸಾರವಾಗಿ ಅರ್ಜಿ ಶುಲ್ಕ ಪಾವತಿಸಿ, ಅದರ ಮಾಹಿತಿ ಅಪ್​ಡೇಟ್​ ಮಾಡಿ

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ.

ಹಿಂದಿನ ಲೇಖನಗುರುವಾರದಂದು ಈ ರೀತಿ ಮಾಡಿದ್ರೆ ಅದೃಷ್ಟ ಪ್ರಾಪ್ತಿ..!
ಮುಂದಿನ ಲೇಖನದೇವನಹಳ್ಳಿ: ಬಾಲಕಿ ಮೇಲೆ ಅತ್ಯಾಚಾರ- ದೂರು ದಾಖಲು