★ಮೂತ್ರ ಸಂಬಂಧಿತ ಸೋಂಕುಗಳನ್ನು ಗುಣಪಡಿಸಲು ಎಳನೀರು ಬಹಳ ಉಪಯುಕ್ತ.
★ಆದರೆ, ಎಳೆನೀರಿನಲ್ಲಿ ಪೊಟ್ಯಾಸಿಯಂ ಅತ್ಯಧಿಕ ಪ್ರಮಾಣದಲ್ಲಿರುವುದರಿಂದ,ಕಿಡ್ನಿ ಫೇಲ್ಯೂರ್ ನಿಂದ ತೊಂದರೆ ಪಡುವ ರೋಗಿಗಳು ಮಾತ್ರ ಇದನ್ನು ಕುಡಿಯಬಾರದು.
★ಇಂತಹ ರೋಗಿಗಳ ರಕ್ತದಲ್ಲಿ ಪೊಟ್ಯಾಸಿಯಂ ಅತಿ ಹೆಚ್ಚಾಗಿ ಸೇರಿಕೊಂಡರೆ ಸಮಸ್ಯೆಗಳು ಉದ್ಭವಿಸುತ್ತವೆ.
ಮಳೆಗಾಲದಲ್ಲಿ ಅಧಿಕ ಮೂತ್ರ ವಿಸರ್ಜನೆ!
ಮಳೆ ಬೀಳುತ್ತಿರುವ ಸಮಯದಲ್ಲೂ ಚಳಿಗಾಲದಲ್ಲೂ ಹವಾನಿಯಂತ್ರಿತ ಕೊಠಡಿಯಲ್ಲಿರುವಾಗಲೂ ಯಾರಿಗಾದರೂ ಪದೇ ಪದೇ ಮೂತ್ರಕ್ಕೆ ಹೋಗಬೇಕಾದ ಅಗತ್ಯ ಬರುತ್ತದೆ. ಹೀಗೇಕಾಗುತ್ತೆ?
ನಮ್ಮ ಶರೀರದಲ್ಲಿನ ನೀರಿನ ಎರಡು ರೀತಿಯಲ್ಲಿ ಹೊರ ಹಾಕಲ್ಪಡುತ್ತದೆ.
★ಒಂದು – ಕಿಡ್ನಿಗಳ ಮೂಲಕ ಅಂದರೆ ಮೂತ್ರವಿಸರ್ಜನೆಯ ಮೂಲಕ.
★ಎರಡು – ಚರ್ಮ, ಶ್ವಾಸಕೋಶಗಳ ಮೂಲಕ ಅಂದರೆ ಬೆವರು, ನಿಶ್ವಾಸಗಳ ಮೂಲಕ.
★ಬಿಸಿಗೆ ಕಾಲದಲ್ಲಿ ಶರೀರದ ಹೆಚ್ಚು ಭಾಗ ನೀರು ಬೆವರಿನ ರೂಪದಲ್ಲಿ ಚರ್ಮದ ಮೂಲಕ ಹೊರಹೋಗುತ್ತದೆ.
★ಆದರೆ ಮಳೆಗಾಲದಲ್ಲಿ, ಚಳಿಗಾಲದಲ್ಲಿ ಅಷ್ಟಾಗಿ ಬೆವರುವುದಿಲ್ಲ.ಕೆಲವರಿಗೆ ಸ್ವಲ್ಪವೂ ಬರದು. ಆದ್ದರಿಂದ ಆ ಸಮಯಗಳಲ್ಲಿ ನೀರು ಶರೀರದಿಂದ ಬೇರೆ ರೂಪದಲ್ಲಿ ಹೊರಬರಬೇಕಾಗುತ್ತದೆ ಅದೆಂದರೆ
★ಕಿಡ್ನಿಗಳ ಮೂಲಕ ಹೊರಗೆ ಹೋಗುವುದು! ಅಂದರೆ ಮುತ್ರ ವಿಸರ್ಜನೆಯ ಮೂಲಕ ಅದಾಕ್ಕಾಗಿಯೇ ಮೇಲೆ ಹೇಳಿದ ದಿನಗಳಲ್ಲಿ ನಮಗೆ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತದೆ.
★ ಏರ್ ಕಂಡೀಶನ್ ಇರುವ ಕೋಣೆಯಲ್ಲಿ ಕುಳಿತಿರುವರಿಗಾಗುವುದೂ ಹೀಗೆಯೇ! ಆ ಕೋಣೆಯಲ್ಲಿರುವವರಿಗೆ ಬೆವರು ಬರುವುದಿಲ್ಲವಾದ್ದರಿಂದ ಮೂತ್ರ ವಿಸರ್ಜನೆಯ ಮೂಲಕ ಶರೀರದ ಹೊರೆಗೆ ಹಾಕಬೇಕಾಗುತ್ತದೆ. ಆದ್ದರಿಂದ ಆಗಾಗ ಟಾಯ್ ಟ್ ಗೆ ಹೋಗಿ ಬರುತ್ತಿರುತ್ತಾರೆ.
ಕಿಡ್ನಿಯಲ್ಲಿ ಕಲ್ಲುಂಟಾಗದಂತೆ ವಹಿಸುವ ಮುಂಜಾಗೃತಾ ಕ್ರಮಗಳು
★ ಕಿಡ್ನಿ ಸ್ಟೋನ್ ಯಾವ ಬಗೆ ಯಾದಾದರೂ, ವಿಟಮಿನ್ ‘ಎ’ ಅಧಿಕವಾಗಿರುವ ಆಹಾರಗಳನ್ನು ತೆಗೆದುಕೊಂಡರೆ ಅದು ಲೈನಿಂಗ್ ನಲ್ಲಿ ಉಂಟಾ ಉಂಟುಮಾಡುವ ಮಾರ್ಪಾಡುಗಳಿಂದ ಮತ್ತಷ್ಟು ಕಲ್ಲುಗಳು ಏರ್ಪಡದಂತೆ ಉಪಕಾರ ಮಾಡುತ್ತವೆ. ಆದರೆ ವಿಟಮಿನ್ ‘ಎ’ ಇರುವ ಸಹಜವಾದ ಆಹಾರಗಳನ್ನು ತೆಗೆದುಕೊಳ್ಳಬೇಕೇ ಹೊರತು ಡಾಕ್ಟರ್. ಸಲಹೆಯಿಲ್ಲದೆ ವಿಟಮಿನ್ ‘ಎ’ ಇರುವ ಔಷಧಗಳನ್ನು ತೆಗೆದುಕೊಳ್ಳಬಾರದು.
★ ಶಾರೀರಿಕ ಶ್ರಮವಿಲ್ಲದೆ ಇರುವವರ ರಕ್ತ ಪರಿಚಲನೆಯಲ್ಲಿ ಕ್ಯಾಲ್ಸಿಯಂ ಶೇಖರಗೊಳ್ಳುವ ಅಪಾಯವಿದೆ.ಅದೇ ಯಾವುದಾದರೂ ಕೆಲಸದಲ್ಲಿ ತೊಡಗಿಕೊಂಡು ದೈಹಿಕವಾಗಿ ಚುರುಕಾಗದಿದ್ದರೆ.ರಕ್ತದಲ್ಲಿನ ಕ್ಯಾಲ್ಸಿಯಂ ಮೊಳಕೆ ಸೇರುತ್ತದೆ ಆದ್ದರಿಂದ ದಿನವೂ ವ್ಯಾಯಾಮದಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು.
★ನಾವು ಆಹಾರದಲ್ಲಿ ತೆಗೆದುಕೊಳ್ಳುವ ಸಸಾರಜನಕಗಳ ಪ್ರೋಟೀನ್ ಗಳ ಪ್ರಮಾಣಕ್ಕೂ, ಕಿಡ್ನಿ ಸ್ಟೋನ್ ಉಂಟಾಗುವುದಕ್ಕೂ ಹತ್ತಿರದ ಸಂಬಂಧವಿದೆ. ಪ್ರೋಟೀನ್ ಗಳು ಮೂತ್ರದಲ್ಲಿ ಯೂರಿಕ್ ಆಸಿಡ್,ಕ್ಯಾಲ್ಸಿಯಂ ಫಾಸ್ಪರಸ್ ಳನ್ನು ಹೆಚ್ಚಿಸುತ್ತವೆ. ಆದರಿಂದಾಗಿ ಕೆಲವರಲ್ಲಿ ಕಿಡ್ನಿ ಕಲ್ಲುಗಳುಂಟಾಗುವ ಸಂಭವವಿದೆ.
★ನಿಮ್ಮ ಶರೀರದಲ್ಲಿ ಕ್ಯಾಲ್ಸಿಯಂ ಸ್ಟೋನ್ ಮುಖ್ಯವಾಗಿ ಯೂರಿಕ್ ಆಸಿಡ್, ಇದ್ದರೆ ಮಾಂಸಹಾರದ ಮೂಲಕ ನೀವು ಸೇವಿಸುವ ಪ್ರೋಟಿನ್ ಪ್ರಮಾಣವನ್ನು ಕಡಿಮೆ ಮಾಡಿ.
★ವಿಟಮಿನ್ ‘ಸಿ ’Calcium Oxalate Stone ಗಳನ್ನು ಬೆಳೆಸುತ್ತದೆ. ವಿಟಮಿನ್ ಡಿ ಶರೀರದ ಎಲ್ಲಾ ಭಾಗಗಳಲ್ಲಿ ಯೂ ಕ್ಯಾಲ್ಸಿಯಂ ಹೆಚ್ಚಿಸುತ್ತದೆ ಆದ್ದರಿಂದ ಕಿಡ್ನಿ ರೋಗಿಗಳು ಈ ಎರಡು ವಿಟಮಿನ್ ಗಳನ್ನು ಡಾಕ್ಟರ್ ಸಲಹೆ ಮೇರೆಗೆ ನಿಯಮಿತವಾಗಿ ಮಾತ್ರ ತೆಗೆದುಕೊಳ್ಳಬೇಕು.
★ಮೂತ್ರ ಮಾಡುತ್ತಿರುವಾಗ ಕಲ್ಲು ಬಿದ್ದರೆ ಆ ಕಲ್ಲುಗಳನ್ನು ಸಂಗ್ರಹಿಸಿ ಡಾಕ್ಟರಿಗೆ ತೋರಿಸಿದರೆ, ಅವರು ಅದನ್ನು ಲ್ಯಾಬರೊಟ್ಟಿಗೆ ಕಳಿಸಿ ವಿಶ್ಲೇಷಣೆ ಮಾಡಿಸಿ, ಅಂತಹವು ಮತ್ತೆ ಏರ್ಪಡದಂತೆ ತಕ್ಕ ಚಿಕಿತ್ಸೆ ಮಾಡುತ್ತಾರೆ.
ಯೂರಿಕ್ ಆಸಿಡ್ ನಿಂದ ಕೂಡಿರುವ ಕಲ್ಲುಗಳು
★ ರಕ್ತದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಅಧಿಕವಾಗಿರುವವರಿಗೆ, ಮಾತ್ರ ಪಿಂಡಗಳಲ್ಲಿ ಯೂರಿಕ್ ಆಸಿಡ್ ಇರುವ ಕಲ್ಲುಗಳುಂಟಾಗುತ್ತವೆ.
★5ಆಹಾರದಲ್ಲಿ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು, ಔಷಧಗಳ ಮೂಲಕ ಯೂರಿಕ್ ಆಸಿಡ್ ಪ್ರಮಾಣವನ್ನು ನಿಯಂತ್ರಿಸಿಕೊಳ್ಳುವುದು, ಇಂತಹ ಜಾಗರೂಕತೆಗಳಿಂದ ಈ ಕಲ್ಲುಗಳುಂ ಟಾಗದಂತೆ. ನೋಡಿಕೊಳ್ಳಬಹುದು.
★ಕುರಿಯ ಮಾಂಸ, ಮಾಂಸದಲ್ಲಿನ ಲಿವರ್, ಕಿಡ್ನಿ ಬ್ರೇನ್ ಳಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಿ ಇರುತ್ತದೆ. ಇವರು ಈ ಆಹಾರವನ್ನು ವರ್ಜಿಸಿದರೆ ಉತ್ತಮ.
★ಹಾಗೆಯೇ ಮೀನುಗಳು, ಚಿಕನ್, ಬೀನ್ಸ್,ಸೀತಾಫಲ, ಅಣಬೆಗಳು, ಆಲ್ಕೋಹಾಲ್ ಗಳಲ್ಲಿಯೂ ಯೂರಿಕ್ ಆಸಿಡ್ ತಕ್ಕ ಪ್ರಮಾಣದಲ್ಲಿರುತ್ತದೆ. ಇವುಗಳನ್ನು ದಿನವೂ ತೆಗೆದುಕೊಳ್ಳದೆ,ಯಾವಾಗಲಾದರೂ ಒಮ್ಮೆ ಮಾತ್ರ ತೆಗೆದುಕೊಳ್ಳಬೇಕು.
★ಈ ಆಹಾರದಲ್ಲಿ ಎಚ್ಚರಿಕೆಗಳನ್ನು ವಹಿಸಿಕೊಂಡರೂ ರಕ್ತದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಕಡಿಮೆಯಾಗದಿದ್ದರೆ, ಔಷಧಗಳನ್ನು ಅವಲಂಬಿಸಬೇಕು.