ಮನೆ ಅಂತಾರಾಷ್ಟ್ರೀಯ ದೂರದ ನಕ್ಷತ್ರಪುಂಜದ ರೇಡಿಯೊ ಸಂಕೇತ ಪತ್ತೆ ಹಚ್ಚಿದ ಕೆನಡಾ, ಐಐಎಸ್‌’ಸಿ ವಿಜ್ಞಾನಿಗಳು

ದೂರದ ನಕ್ಷತ್ರಪುಂಜದ ರೇಡಿಯೊ ಸಂಕೇತ ಪತ್ತೆ ಹಚ್ಚಿದ ಕೆನಡಾ, ಐಐಎಸ್‌’ಸಿ ವಿಜ್ಞಾನಿಗಳು

0

ಬೆಂಗಳೂರು: ದೂರದ ನಕ್ಷತ್ರಪುಂಜದ ಪರಮಾಣು ಹೈಡ್ರೋಜನ್‌’ನಿಂದ ಹೊರಹೊಮ್ಮಿದ ರೇಡಿಯೊ ಸಂಕೇತಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಕೆನಡಾದ ಮ್ಯಾಕ್‌’ಗಿಲ್ ವಿಶ್ವವಿದ್ಯಾನಿಲಯ ಮತ್ತು ಇಂಡಿಯನ್ ಇನ್‌’ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌’ಸಿ) ಖಗೋಳ ಶಾಸ್ತ್ರಜ್ಞರು ಪುಣೆಯ ಜೈಂಟ್ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ (ಜಿಎಂಆರ್‌’ಟಿ) ದತ್ತಾಂಶದ ಮೂಲಕ ಪತ್ತೆ ಮಾಡಿದ್ದಾರೆ.

ಈವರೆಗೆ ಅತ್ಯಂತ ದೊಡ್ಡ ಅಂತರದ ಗ್ಯಾಲಕ್ಸಿಯಿಂದ ಬಂದ ರೇಡಿಯೊ ಸಂಕೇತ ಇದಾಗಿದ್ದು, ಪರಮಾಣು ಹೈಡ್ರೋಜನ್‌ನಿಂದ ಹೊರಸೂಸಲ್ಪಟ್ಟ ಈ ಸಂಕೇತವು 21 ಸೆಂ.ಮೀ ತರಂಗಾಂತರ ಹೊಂದಿದೆ ಎಂದು ಐಐಎಸ್‌’ಸಿ ಸೋಮವಾರ  ತಿಳಿಸಿದೆ.

ಸಂಶೋಧನೆಯ ಫಲಿತಾಂಶವನ್ನು ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಮಾಸಿಕ ಪ್ರಕಟಣೆಯಲ್ಲಿ ಪ್ರಕಟಿಸಲಾಗಿದೆ.

ಆಟೊಮಿಕ್ ಹೈಡ್ರೋಜನ್ ನಕ್ಷತ್ರಪುಂಜದಲ್ಲಿ ನಕ್ಷತ್ರ ರಚನೆಗೆ ಅಗತ್ಯವಾದ ಮೂಲ ಇಂಧನವಾಗಿದೆ. ಗ್ಯಾಲಕ್ಸಿಯ ಸುತ್ತಮುತ್ತಲಿನಿಂದ ಬಿಸಿ ಅಯಾನೀಕೃತ ಅನಿಲವು ನಕ್ಷತ್ರಪುಂಜದ ಮೇಲೆ ಬಿದ್ದಾಗ, ಅನಿಲವು ತಣ್ಣಗಾಗುತ್ತದೆ ಮತ್ತು ಪರಮಾಣು ಹೈಡ್ರೋಜನ್ ರೂಪುಗೊಳ್ಳುತ್ತದೆ. ಕ್ರಮೇಣ ಅದು ಆಣ್ವಿಕ ಹೈಡ್ರೋಜನ್ ಆಗುತ್ತದೆ ಮತ್ತು ಅಂತಿಮವಾಗಿ ನಕ್ಷತ್ರಗಳ ರಚನೆಗೆ ಕಾರಣವಾಗುತ್ತದೆ ಎಂದು ವಿವರಿಸಲಾಗಿದೆ.

ಮೆಕ್‌ಗಿಲ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಮತ್ತು ಟ್ರಾಟಿಯರ್ ಸ್ಪೇಸ್ ಇನ್‌ಸ್ಟಿಟ್ಯೂಟ್‌’ನ ಪೋಸ್ಟ್‌ಡಾಕ್ಟರಲ್ ಸಂಶೋಧಕ ಅರ್ನಾಬ್ ಚಕ್ರವರ್ತಿ ಹಾಗೂ ಐಐಎಸ್‌ಸಿಯ ಭೌತಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ನಿರುಪಮ್ ರಾಯ್, ನಕ್ಷತ್ರಪುಂಜದಲ್ಲಿನ ಪರಮಾಣು ಹೈಡ್ರೋಜನ್‌ನಿಂದ ರೇಡಿಯೊ ಸಿಗ್ನಲ್ ಅನ್ನು ಪತ್ತೆಹಚ್ಚಲು ಜಿಎಂಆರ್‌’ಟಿಯ ದತ್ತಾಂಶವನ್ನು ಬಳಸಿದ್ದಾರೆ.