ಮನೆ ಅಪರಾಧ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

0

ಬೀದರ್ : ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬಾಲ್ಕಿ ತಾಲೂಕಿನ ನಿಲಮನಹಳ್ಳಿ ತಾಂಡಾದಲ್ಲಿ ನಡೆದಿದೆ.

ಕೌಟುಂಬಿಕ ಕಲಹದಿಂದ ಬೇಸತ್ತ ಮೀರಾಬಾಯಿ(25), ತನ್ನ ಮಕ್ಕಳಾದ ನಚ್ಚುಬಾಯಿ(3) ಮತ್ತು ಗೋಲುಬಾಯಿ(2)ಗೆ ವಿಷ ಉಣಿಸಿದ್ದಾರೆ. ಮಕ್ಕಳು ಸಾವನ್ನಪ್ಪಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ದೌಡಾಯಿಸಿದ್ದಾರೆ. ಗಂಡನ ಮನೆಯವರ ಹಿಂಸೆ, ಮಾನಸಿಕ ಒತ್ತಡ ತಡೆಯಲಾಗದೆ ಮೀರಾಬಾಯಿ ಈ ಕೃತ್ಯ ನಡೆಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

 ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಬಿಜೆಪಿ ಹಾಗೂ ಜೆಡಿಎಸ್‌’ಗೆ ಸೈದ್ಧಾಂತಿಕ ನೆಲೆಗಟ್ಟಿಲ್ಲ: ಡಾ.ಎಚ್.ಸಿ.ಮಹದೇವಪ್ಪ
ಮುಂದಿನ ಲೇಖನದೂರದ ನಕ್ಷತ್ರಪುಂಜದ ರೇಡಿಯೊ ಸಂಕೇತ ಪತ್ತೆ ಹಚ್ಚಿದ ಕೆನಡಾ, ಐಐಎಸ್‌’ಸಿ ವಿಜ್ಞಾನಿಗಳು