ಮನೆ ಉದ್ಯೋಗ ಕೆನರಾ ಬ್ಯಾಂಕ್’ನಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ

ಕೆನರಾ ಬ್ಯಾಂಕ್’ನಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ

0

ಕೆನರಾ ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಜೂನಿಯರ್ ಆಫೀಸರ್, ಲೀಗಲ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಫೆಬ್ರವರಿ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ಪೋಸ್ಟ್ ಮುಖಾಂತರ ಅರ್ಜಿ ಹಾಕಿ. ಆಯ್ಕೆಯಾಗುವ ಅಭ್ಯರ್ಥಿಗಳಿಂದ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಹುದ್ದೆಯ ಮಾಹಿತಿ:

ಜೂನಿಯರ್ ಆಫೀಸರ್- 5

ಲೀಗಲ್ ಆಫೀಸರ್- 1

ವಿದ್ಯಾರ್ಹತೆ:

ಜೂನಿಯರ್ ಆಫೀಸರ್- ಪದವಿ

ಲೀಗಲ್ ಆಫೀಸರ್- ಎಲ್’ಎಲ್’ಬಿ, ಎಲ್’ಎಲ್’ಎಂ

ವಯೋಮಿತಿ:

ಜೂನಿಯರ್ ಆಫೀಸರ್- 21ರಿಂದ 30 ವರ್ಷ

ಲೀಗಲ್ ಆಫೀಸರ್- 21 ರಿಂದ 35 ವರ್ಷ

ವಯೋಮಿತಿ ಸಡಿಲಿಕೆ:

ಒಬಿಸಿ ಅಭ್ಯರ್ಥಿಗಳು- 3 ವರ್ಷ

SC/ST ಅಭ್ಯರ್ಥಿಗಳು- 5 ವರ್ಷ

ವೇತನ:

ಜೂನಿಯರ್ ಆಫೀಸರ್- ಮಾಸಿಕ ₹37,300

ಲೀಗಲ್ ಆಫೀಸರ್- ಮಾಸಿಕ ₹45,800

ಅರ್ಜಿ ಶುಲ್ಕ:

ಎಲ್ಲಾ ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಫೆಬ್ರವರಿ 17, 2023 ರೊಳಗೆ ಕಳುಹಿಸಬೇಕು.

ಹಿರಿಯ ಕಾರ್ಯನಿರ್ವಾಹಕರು

ಉಪಾಧ್ಯಕ್ಷರು

ಕ್ಯಾನ್ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್,

ನಂ. 67/1

ಕನಕಪುರ ಮುಖ್ಯ ರಸ್ತೆ (ಲಾಲ್ಬಾಗ್ ಪಶ್ಚಿಮ ಗೇಟ್ ಹತ್ತಿರ)

ಬಸವನಗುಡಿ

ಬೆಂಗಳೂರು – 560004

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/02/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 17, 2023