ಮನೆ ರಾಷ್ಟ್ರೀಯ ಸ್ಕೂಟಿಗೆ ಕಾರು ಡಿಕ್ಕಿ: ರಕ್ತಸಿಕ್ತವಾಗಿ ಕಾರಿನ ಮೇಲೆ ಸ್ಕೂಟಿ ಚಾಲಕ ಬಿದ್ದಿದ್ದರೂ 3 ಕಿ.ಮೀ ಕಾರು...

ಸ್ಕೂಟಿಗೆ ಕಾರು ಡಿಕ್ಕಿ: ರಕ್ತಸಿಕ್ತವಾಗಿ ಕಾರಿನ ಮೇಲೆ ಸ್ಕೂಟಿ ಚಾಲಕ ಬಿದ್ದಿದ್ದರೂ 3 ಕಿ.ಮೀ ಕಾರು ಓಡಿಸಿದ ಚಾಲಕ

0

ದೆಹಲಿ: ಕಾರು ಚಾಲಕನೊಬ್ಬ ಸ್ಕೂಟಿಗೆ ಗುದ್ದಿದ ರಭಸಕ್ಕೆ ಚಾಲಕ ಕಾರಿನ ಮೇಲೆ ಬಿದ್ದಿದ್ದರೂ 3 ಕಿಲೋಮೀಟರ್​ ಕಾರು ಚಲಾಯಿಸಿಕೊಂಡು ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.

Join Our Whatsapp Group

ಅಪಘಾತದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಡಿಯೋ ರೆಕಾರ್ಡ್​ ಮಾಡಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಗಾಂಧಿ ಮಾರ್ಗ ಮತ್ತು ಟಾಲ್‌ಸ್ಟಾಯ್ ಮಾರ್ಗದ ಛೇದಕದಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕನೊಬ್ಬ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಯುವಕರಲ್ಲಿ ಒಬ್ಬರ ದೇಹ ಹಲವಾರು ಅಡಿಗಳಷ್ಟು ದೂರ ಹೋಗಿ ಬಿದ್ದರೆ ಮತ್ತೊಬ್ಬರು ಕಾರಿನ ಛಾವಣಿಯ ಮೇಲೆ ಬಿದ್ದಿದ್ದರು.

ಘಟನೆಯ ಪ್ರತ್ಯಕ್ಷದರ್ಶಿ ಮೊಹಮ್ಮದ್ ಬಿಲಾಲ್, ಘಟನೆಯನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡುವಾಗ ಪರಾರಿಯಾಗುತ್ತಿದ್ದ ವಾಹನವನ್ನು ತನ್ನ ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದಾರೆ. ಕಾರ್ ಚಾಲಕನಿಗೆ ಹಾರ್ನ್ ಮಾಡಿ ಕೂಗಿ ಎಚ್ಚರಿಸಲು ಯತ್ನಿಸಿದರೂ ಕಾರು ನಿಲ್ಲಲಿಲ್ಲ.

ಸುಮಾರು 3 ಕಿಲೋಮೀಟರ್ ಓಡಿಸಿದ ನಂತರ ಶಂಕಿತರು ಗಾಯಗೊಂಡ ವ್ಯಕ್ತಿಯನ್ನು ದೆಹಲಿ ಗೇಟ್ ಬಳಿ ಕಾರಿನಿಂದ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಇದರ ಪರಿಣಾಮ 30 ವರ್ಷದ ದೀಪಾಂಶು ವರ್ಮಾ ಗಾಯಗೊಂಡು ಸಾವನ್ನಪ್ಪಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಆತನ 20 ವರ್ಷದ ಸೋದರ ಸಂಬಂಧಿ ಮುಕುಲ್ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ, ಆದರೆ ಪೊಲೀಸರು ಇನ್ನೂ ಅವರನ್ನು ಹೆಸರಿಸಿಲ್ಲ.