ಸುರತ್ಕಲ್: ಫಾರ್ಚುನರ್ ಕಾರೊಂದು ಟಿಪ್ಪರ್ ಮತ್ತು ಮರಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನಜ್ಜು ಗುಜ್ಜಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಜ್ಯೋತಿ ಸರ್ವಿಸ್ ಸ್ಟೇಷನ್ ಬಳಿ ಹೊಸಬೆಟ್ಟುವಿನಲ್ಲಿ ನಡೆದಿದೆ.
ಸುಮಾರು 2.30ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ತಮಿಳುನಾಡು ನೊಂದಣಿಯ ಕಾರು ಇದಾಗಿದೆ. ಪೊಲೀಸರ ಮತ್ತು ಸಾರ್ವಜನಿಕರು ಸಹಕಾರದಿಂದ ಎರಡು ಗಂಟೆಯ ಪರಿಶ್ರಮದಿಂದ ಶವವನ್ನು ಹೊರತೆಗೆಯಲಾಯಿತು ಎನ್ನಲಾಗಿದೆ.
ಕಾರಿನಲಿದ್ದ ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
Saval TV on YouTube