ಮನೆ ತಂತ್ರಜ್ಞಾನ ಫೈರ್ ಬೋಲ್ಟ್ ಟಾಕ್ ಅಲ್ಟ್ರಾ ನೂತನ ಸ್ಮಾರ್ಟ್‌’ವಾಚ್ ಬಿಡುಗಡೆ‌‌

ಫೈರ್ ಬೋಲ್ಟ್ ಟಾಕ್ ಅಲ್ಟ್ರಾ ನೂತನ ಸ್ಮಾರ್ಟ್‌’ವಾಚ್ ಬಿಡುಗಡೆ‌‌

0

ಬೆಂಗಳೂರು: ಭಾರತದ ಫಿಟ್ನೆಸ್ ಮತ್ತು ಗ್ಯಾಜೆಟ್ ಮಾರುಕಟ್ಟೆಗೆ ಫೈರ್ ಬೋಲ್ಟ್, ಟಾಕ್ ಅಲ್ಟ್ರಾ ಎನ್ನುವ ನೂತನ ಸ್ಮಾರ್ಟ್‌’ವಾಚ್ ಅನ್ನು ಬಿಡುಗಡೆ ಮಾಡಿದೆ.

ಹೊಸ ಫೈರ್ ಬೋಲ್ಟ್‌ ಟಾಕ್ ಅಲ್ಟ್ರಾ, 1.39 ಇಂಚಿನ ಎಲ್‌ಸಿಡಿ ಡಿಸ್‌’ಪ್ಲೇ, ಬ್ಲೂಟೂತ್ ಕಾಲಿಂಗ್ ಬೆಂಬಲ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಜತೆಗೆ, 123 ವಿವಿಧ ಬಗೆಯ ಫಿಟ್ನೆಸ್ ಮತ್ತು ಸ್ಪೋರ್ಟ್ಸ್ ಮೋಡ್ ಟ್ರ್ಯಾಕಿಂಗ್, ಹೃದಯ ಬಡಿತ ಮಾಪನ ಮತ್ತು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಅಳೆಯುವ ಸೆನ್ಸರ್‌ಗಳನ್ನು ಹೊಂದಿದೆ.

IP68 ವಾಟರ್ ಮತ್ತು ಡಸ್ಟ್ ರೆಸಿಸ್ಟನ್ಸ್ ರೇಟಿಂಗ್ ಫೈರ್‌ ಬೋಲ್ಟ್ ಸ್ಮಾರ್ಟ್‌’ವಾಚ್‌’ನ ವಿಶೇಷತೆಯಾಗಿದೆ. ಫೈರ್ ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್‌ವಾಚ್, ಕಂಪನಿಯ ಅಧಿಕೃತ ವೆಬ್‌’ಸೈಟ್ ಮತ್ತು ಫ್ಲಿಪ್‌’ಕಾರ್ಟ್ ಇಂಡಿಯಾ ಮೂಲಕ ದೊರೆಯುತ್ತದೆ ಎಂದು ಕಂಪನಿ ತಿಳಿಸಿದೆ.

ನೂತನ ಸ್ಮಾರ್ಟ್‌’ವಾಚ್ ಕಪ್ಪು, ನೀಲಿ, ಕೆಂಪು, ಗ್ರೇ, ಪಿಂಕ್ ಮತ್ತು ಟೀಲ್ ಎಂಬ 6 ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದೆ ಎಂದು ಫೈರ್ ಬೋಲ್ಟ್ ಹೇಳಿದ್ದು, ₹1,999 ದರಕ್ಕೆ ಲಭ್ಯವಾಗಲಿದೆ.

ಹಿಂದಿನ ಲೇಖನಮದ್ಯದ ಅಮಲಿನಲ್ಲಿ ಪತ್ನಿ, ಮಕ್ಕಳ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ನೇಣಿಗೆ ಶರಣಾದ ಪತಿ
ಮುಂದಿನ ಲೇಖನಕೇಂದ್ರ ಬಜೆಟ್: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ