ಮನೆ ಆರೋಗ್ಯ ಹೃದಯ ಸ್ತಂಭನ : ಭಾಗ ಎರಡು

ಹೃದಯ ಸ್ತಂಭನ : ಭಾಗ ಎರಡು

0

★ಹೃದಯಘಾತ ಆಗಿದೆ ಎಂದಕೂಡಲೆ,  ಗೋಡೆ ದಿಂಬಿಗೆ ಒರಗಿ ಕುಳಿತು ಕೊಳ್ಳುವುದು, ಒಳ್ಳೆಯದು ಆಗ ಹೃದಯದ ಮೇಲೆ ಒತ್ತಡ ಕಡಿಮೆಯಾಗುತ್ತದೆ.

Join Our Whatsapp Group

ಯಾರಿಗೆ ಆಗುತ್ತದೆ?

   ★ ಸ್ತ್ರೀಯರಿಗಿಂತ ಪುರುಷರಿಗೆ ಅಧಿಕ. ಅಂದರೆ ಸ್ತ್ರೀಯರಿಗೆ ಮೆನೋಪಾಸ್ ಶುರುವಾಗಿ ಅವರಲ್ಲಿ ಈಸ್ಟ್ರೊಜನ್ ಹಾರ್ಮೋನ್ ಉತ್ಪತ್ತಿಕಡಿಮೆಯಾದಂತೆ. ಅವರಿಗೂ  ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು. ಆಗ ಹೇಗಾದರೂ ಗಂಡಸರು ಈ ವಿಷಯದಲ್ಲಿ ಸರಿಸಮರು.

★ ಧೂಮಪಾನಿಗಳಲ್ಲದವರಿಗಿಂತ ಧೂಮಪಾನಿಗಳಲ್ಲಿ ಹೃದಯಯಾಘಾತ ಹೆಚ್ಚು.

★ ಹೃದಯಘಾತದಿಂದ ಮೃತರಾದವರ ಮಕ್ಕಳಿಗೂ ವಂಶಪಾರ್ಯವಾಗಿ ಬರುವ ಸಾಧ್ಯತೆ ಇದೆ.

★ 50 ದಾಟಿದವರಲ್ಲಿ ಹೃದಯಘಾತದ ಸಂಭವ ಅಧಿಕ. 30 ರಿಂದ 50ರ ನಡುವಿನವರೆಗೂ ಬರಬಹುದು.

 ★ಸ್ಥೂಲ ಶರೀರಗಳಿಗೆ,

 ★ಹೈಪರ್ ಟೆನ್ಷನ್  ಬೀಪಿ ನವರಿಗೆ

 ★ಡಯಾಬಿಟಿಸ್ ನವರಿಗೆ,

 ★ಮನೋವ್ಯಾಕುಲತೆಯವರಿಗೆ, ಮಾನಸಿಕ ತೊಂದರೆಯವರಿಗೆ ಒತ್ತಡದಿಂದ ನರಳುವವರಿಗೆ ಯಾವಾಗಲೂ ಕೋಪ, ತಾಪ, ದುಃಖ,ಚಿಂತೆಯಿಂದ ಖಿನ್ನತೆಯನ್ನು ಅನುಭವಿಸುವವರಿಗೆ

 ★ಥೆರಾಯಿಡ್ ನಿಂದ ಇರುವವರಿಗೆ, ಈ ಮೇಲಿನ ಲಕ್ಷಣದವರಿಗೆ ಹೃದಯಘಾತವಾಗುವ ಅವಕಾಶಗಳು ವಿಫಲವಾಗಿವೆ.

 ಅನರ್ಥಗಳು—ಗೊಂದಲಗಳು

 ★ಹೃದಯದ ಸ್ನಾಯುಗಳಿಗೆ ಹೆಚ್ಚಿನರೀತಿಯಲ್ಲಿ ಹಾನಿಯಾದರೆ ಹೃದಯ ಘಾತಕ್ಕೆ ಕಾರಣವಾಗುತ್ತದೆ. ಅದನ್ನು ಹಾರ್ಟ್ ಫೆಲ್ಯೂರ್( ಹೃದಯ ರಕ್ತವನ್ನು ಪಂಪ್ ಮಾಡುವ ಚೈತನ್ಯವನ್ನು ಕಳೆದುಕೊಳ್ಳುವುದು )ಎನ್ನುತ್ತಾರೆ.

  ★ ಹೃದಯದ ಬಡಿತ ಅಸ್ತವ್ಯಸ್ತವಾಗಬಹುದು. ಇದನ್ನು Arrhythmias ಎನ್ನುತ್ತಾರೆ ಇದು ಹೃದಯದ ಪಂಪಿಂಗ್ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ.ಹೃದಯಘಾತದಿಂದ ಸಾವನ್ನಪ್ಪುವ ಬಹಳ ಮಂದಿ ಸಾವಿನ ಮೊದಲು ಕೆಲವು ಗಂಟೆಗಳು Venticular Fibrillation ಎನ್ನುವ Arrhythmias ಹೃದಯದ ಬಡಿತದಿಂದ ನರಳುತ್ತಾರೆ. ರೋಗಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲು ಮಾಡಿದಲ್ಲಿ ಗುಣಪಡಿಸುತ್ತಾರೆ .

 ಹೃದಯಘಾತವಾದ ಕೆಲವು ದಿನಗಳ ನಂತರ Mitral Valveಎನ್ನುವ ಹೃದಯ ಕವಾಟ ಹಾನಿಯಾಗುವ ಸಂಭವವಿದೆ.

ಪ್ರತಃಕಾಲದ ಹೃದಯಘಾತ

★ತೀವ್ರ ಹೃದಯಘಾತ ಸಾಧಾರಣವಾಗಿ ಬೆಳಗಿನ 7 ಗಂಟೆಯಿಂದ  11 ಗಂಟೆಯ  ನಡುವೆ ಸಂಭವಿಸುವುದು.

★ ರಾತ್ರಿಯೆಲ್ಲಾ ವಿಶ್ರಾಂತಿ ಸ್ಥಿತಿಯಲ್ಲಿದ್ದ ಶರೀರ ಬೆಳಗಿನ ದೈನಂದಿನದ ಕಾರ್ಯಕ್ಕೆ ಅಣಿಯಾದಾಗ ಉಂಟಾದ ಒತ್ತಡದಿಂದ  ಹೀಗಾಗಬಹುದು.

 ★ಶಾಂತವಾಗಿದ್ದ ಬಿ.ಪಿ ಹೃದಯ ಚಾಲನೆ ತೀವ್ರಗೊಳ್ಳುವುದು. ಹಾಗೆಯೇ ರಕ್ತದಲ್ಲಿನ ಹೆಪ್ಪುಗಟ್ಟಿಸುವ ರಕ್ತಕಣಗಳು (Platelets)ಗರಣಿಗಳುಂಟಾಗುವ ಅವಕಾಶವು ಈ ಸಮಯದಲ್ಲಿ ಹೆಚ್ಚು.ಇದೇ ಮನುಷ್ಯನಿಗಾಗುವ ಹೃದಯಘಾತ!  

ಎದೆ ನೋವು ಹೃದಯಾಘಾತಕ್ಕೆ ಸಂಕೇತವೇ ?

   ★ ನೀವು 40ಕ್ಕೂ ಮೇಲ್ಪಟ್ಟ ವಯಸ್ಸಿನವರೇ?

★ ಎದೆಯಲ್ಲಿ ಜೀರ್ಣ, ಗ್ಯಾಸ್ ನಿಂದಾಗಿ ಒತ್ತಡವಿದೆಯೇ?

★ ಎದೆಯಾ ನೋವಿನಿಂದ ಭಾರವಾದಂತೆ,ಅಲ್ಲಿಂದ ಎಡಭುಜ ಮೊಣಕೈಯವರೆಗೂ ಹರಡುತ್ತಿದೆಯೇ?

 ★ಮೇಲಿನ ತೊಂದರೆ ಇದ್ದಲ್ಲಿ ನಿಮ್ಮ ಹೃದಯಕ್ಕೆ ರಕ್ತಪೂರೈಕೆಯ ಕೊರತೆಯಿಂದ ಉಂಟಾಗಿರಬಹುದು.

 ★40 ವರ್ಷಕ್ಕೂ ಮೀರಿದ ವಯಸ್ಸಿದಲ್ಲಿ,ಅಂತಹ ಕುಟುಂಬದಲ್ಲಿ ಬಿ.ಪಿ ಹೃದ್ರೋ ರೋಗಗಳು, ಸಕ್ಕರೆ ಕಾಯಿಲೆಯಂಹ ರೋಗಗಳು ಇದ್ದಲ್ಲಿ ಕೂಡಲೇ ಹೃದಯತಜ್ಞರನ್ನು ತಜ್ಞರನ್ನು ಸಂಪರ್ಕಿಸಿ  ECG ಮಾಡಿಸಿಕೊಳ್ಳುವುದು ಅವಶ್ಯಕ.

 ★GECG ಯು ನಾರ್ಮಲ್ ಇದ್ದು ಮೇಲಿನ ಲಕ್ಷಣಗಳು ಕಂಡು ಬಂದರೆ Stress ಮಾಡಿಸಿಕೊಳ್ಳುವುದು ಸೂಕ್ತ. 

ಮುಂದುವರೆಯುವುದು….

ಹಿಂದಿನ ಲೇಖನಮಂಡ್ಯ: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ
ಮುಂದಿನ ಲೇಖನಶಿಕ್ಷಣದೊಂದಿಗೆ ಸೇವಾ ಮನೋಭಾವ ಬೆಳಸಿಕೊಳ್ಳಿ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್