ಮನೆ ರಾಜ್ಯ ಸಿದ್ದರಾಮಯ್ಯ, ಸಿಂಧ್ಯಾ  ಸಂಸ್ಕಾರವನ್ನು ಕಲಿತಿದ್ದೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಂದ: ವಿ ಸೋಮಣ್ಣ

ಸಿದ್ದರಾಮಯ್ಯ, ಸಿಂಧ್ಯಾ  ಸಂಸ್ಕಾರವನ್ನು ಕಲಿತಿದ್ದೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಂದ: ವಿ ಸೋಮಣ್ಣ

0

ಬೆಂಗಳೂರು: ಸಿದ್ದರಾಮಯ್ಯ, ಸಿಂಧ್ಯಾ  ಮೊದಲಾದವರೆಲ್ಲ ಸಂಸ್ಕಾರವನ್ನು ಕಲಿತಿದ್ದೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಂದ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ ಸೋಮಣ್ಣ ತಿಳಿಸಿದರು.

Join Our Whatsapp Group

ಬುಧವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮತಾಡಿದ ಅವರು, ಅಶ್ಲೀಲ ವಿಡಿಯೋಗಳ ಪ್ರಕರಣಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ  ಬಗ್ಗೆ  ಮಾತಾಡಿ ಅವನಿಂದ ತಪ್ಪಾಗಿರುವುದು ನಿಜವಾದರೆ ಗಲ್ಲಿಗೇರಿಸಲಿ ಎಂದರು.

ಪ್ರಜ್ವಲ್ ಅವರ ಮೊಮ್ಮಗನಾಗಿರುವ ಕಾರಣಕ್ಕೆ ರಿಯಾಯಿತಿ ತೋರುವ ಅವಶ್ಯಕತೆ ಇಲ್ಲ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು ಎಂದು ಸೋಮಣ್ಣ ಹೇಳಿದರು.

ಶಿವಕುಮಾರ್ ಅವರಿಗೆ ಕಿವಿಮಾತನ್ನು ಹೇಳಿದ ಸೋಮಣ್ಣ, ಮುಖ್ಯಮಂತ್ರಿಯಾಗುವ ಅಸೆಗಾಗಿ ದುಡುಕುವುದು ಬೇಡ, ಆತುರದಲ್ಲಿ ನಿರ್ಣಯಗಳನ್ನು ತೆಗೆದುಕೊಂಡರೆ ಉಲ್ಟಾ ಹೊಡೆಯುವ ಸಾಧ್ಯತೆಗಳಿರುತ್ತವೆ, ಅವರು ಎಲ್ಲ ಕುರ್ಚಿಗಳ ಮೇಲೆ ಕೂತಾಗಿದೆ, ಒಂದು ಮಾತ್ರ ಬಾಕಿಯಿದೆ, ಅವರು ಸಿಎಂ ಆಗಲಿ ಅಂತ ನಾನೂ ಅಂದುಕೊಂಡಿದ್ದೆ ಅದರೆ ಅದನ್ನು ಪಡೆಯಲು ದುಡುಕುವುದು ಬೇಡ ಎಂದರು.

ಹಿಂದಿನ ಲೇಖನಧ್ರುವ್‌ ವಿಕ್ರಮ್‌ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ರಿಲೀಸ್‌
ಮುಂದಿನ ಲೇಖನಎಸ್‌ ಎಸ್‌ ಎಲ್‌ ಸಿ ಪರೀಕ್ಷೆ- 2ರ ವೇಳಾಪಟ್ಟಿ ಪ್ರಕಟ