ದೇಹಕ್ಕೆ ಹಾನಿಯುಂಟುಮಾಡುವ ಸೂಕ್ಷ್ಮಜೀವಿ (Pathogens)ಗಳು ಶರೀರವನ್ನು ಪ್ರವೇಶಿಸಿದಾಗ ಸೋಂಕು (Infection) ಉಂಟಾಗುತ್ತದೆ.
Pathogens ಈ ಸೂಕ್ಷ್ಮ ಜೀವಿಗಳು ಈ ಕೆಳಗಿನಂತಿರುತ್ತವೆ.
• ಬ್ಯಾಕ್ಟೀರಿಯಾ (Bacteria)
• ವೈರಸ್ (Viruses)
• ಪ್ರೋಟೋಜೋವ (Protozoa)
• ರಿಕೆಟ್ಸ್ ಯ್ (Reckttseia)
• ಫಂಗಸ್ (Fungi)
• ಹುಳುಗಳು (Worms)
ಈ ಎಲ್ಲಾ ಸೂಕ್ಷ್ಮ ಜೀವಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಲವು ರೀತಿಯಲ್ಲಿ ಸೋಂಕಿನ ರೂಪದಲ್ಲಿ ಹರಡುತ್ತವೆ. ಉದಾಹರಣೆಗೆ.
● ಒಬ್ಬ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಗಾಳಿಯಲ್ಲಿ ಹರಡುವ ತುಂತುರುಗಳು ಇನ್ನೊಬ್ಬ ವ್ಯಕ್ತಿಯನ್ನು ತಲುಪಿದಾಗ, ಅವನಿಗೆ ಈ ಸೋಂಕು ಉಂಟಾಗಬಹುದು.
● ಕೆಲವು ಜೀವನಗಳು ಮುತ್ತು ಕೊಟ್ಟಾಗ ಅಥವಾ ಸಂಭೋಗದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ.
● ಸೊಳ್ಳೆಗಳಿಂದ ಪ್ರೋಟೋಜೋವ ತರಹದ Plasmodium ಎಂದು ಕರೆಯಲ್ಪಡುವ ಮಲೇರಿಯಾ ರೋಗಾಣುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ.
● ಪಕ್ಷಿಗಳು, ಕೋಳಿಗಳಿಂದ Psittacosis ಎಂಬ ಬ್ಯಾಕ್ಟೀರಿಯಾ ಸೋಂಕು ಉಂಟಾಗುತ್ತದೆ.
● ಕಲುಷಿತ ಆಹಾರ, ನೀರು, ಮಣ್ಣುಗಳಲ್ಲಿ ಕೆಲವು ವಿಷಕಾರಿ ಜೀವಾಣುಗಳಿರುತ್ತವೆ. ಇವು ಬಾಯಿಂದ ಶರೀರದ ಹೊರ ಗಾಯಗಳಿಂದ ಪ್ರವೇಶಿಸುತ್ತದೆ.
● ಕೆಲವು ಜೀವಾಣುಗಳು ತಾಯಿಯಿಂದ ಗರ್ಭಧಾರಣೆ ಸಮಯದಲ್ಲೂ, ಪ್ರಸವದ ಸಮಯದಲ್ಲೂ ಮಕ್ಕಳಿಗೆ ಬರಬಹುದು.
● ಅಂಟುರೋಗಗಳು ಹರಡುವ ಮಾರ್ಗಗಳು: ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಂಟುರೋಗಗಳು ಲೈಂಗಿಕತೆಯಿಂದ, ಗಾಳಿಯಿಂದ, ರಕ್ತದಿಂದ ಅಥವಾ ಸ್ಪರ್ಶದಿಂದ ಹರಡುತ್ತವೆ.
● ಹಿಂದುಳಿದ ದೇಶಗಳಲ್ಲಿ ಕ್ರಿಮಿಕೀಟ, ಆಹಾರ, ನೀರು ಮತ್ತು ಇತರ ವಿಧಗಳಿಂದ ಹೊರಡುತ್ತವೆ.
ರೋಗಕ್ಕೆ ಪಕ್ವತೆಯ ಅವಧಿ (INCUBATION PERIOD)
● ಹಾನಿಕಾರಕ ಬ್ಯಾಕ್ಟೀರಿಯಗಳು ಒಂದು ಬಾರಿ ಶರೀರದಲ್ಲಿ ಪ್ರವೇಶಿಸಿದ ನಂತರ ಅವುಗಳ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿರುತ್ತದೆ. ಹೀಗೆ ವೃದ್ಧಿಯಾದ ನಂತರ ತಮ್ಮ ಪ್ರಭಾವ ಬೀರಲು ರೋಗ ಲಕ್ಷಣಗಳನ್ನು ತೋರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ.
● ಕ್ರಿಮಿಗಳು ಶರೀರ ಪ್ರವೇಶಿಸಿ ರೋಗದ ಲಕ್ಷಣಗಳ ಮುನ್ಸೂಚನೆಯನ್ನು ತಿಳಿಸುವ ಕಾಲವನ್ನು “ರೋಗ ಪಕ್ವತೆ ಅವಧಿ” ಎನ್ನುತ್ತಾರೆ.
● ರೋಗ ಪಕ್ವತೆಯ ಅವಧಿ ಕಾಲರಾದಂತಹ ವ್ಯಾಧಿಗಳಿಗೆ ಕೆಲವು ಗಂಟೆಗಳು ಬೇಕಾದರೆ, ಪಿತ್ತ ಜನಕಾಂಗದ ಮೇಲೆ ಪರಿಣಾಮ ಬೀರುವ ಹೆಪಟೈಟಿಸ್ ರೋಗಗಳಿಗೆ ಐದು ತಿಂಗಳು ಬೇಕು.
● ಅಂಟುರೋಗ ಸುಂಕದ ವ್ಯಕ್ತಿಯ ಸೋಂಕಿನ ಮೇಲೆ ದಾಳಿ ನಡೆಸಲು ಶರೀರವು ಆ್ಯಂಟಿಬಾಡೀಸ್ ಗಳನ್ನು ಉತ್ಪಾದಿಸುತ್ತದೆ.
● ಆ ವ್ಯಕ್ತಿ ರೋಗದಿಂದ ಮುಕ್ತನಾದರೂ, ರೋಗನಿರೋಧಕ ಶಕ್ತಿಯನ್ನು ನೀಡುವುದಲ್ಲದೆ, ಮತ್ತೆ ಕ್ರಿಮಿಗಳು ಆಕ್ರಮಿಸಿದರೆ ಹೋರಾಡುವ ಶಕ್ತಿಯನ್ನು ಹೊಂದಿರುತ್ತದೆ.
ಶರೀರದಲ್ಲಿ ಹಲವಾರು ರೋಗಗಳೊಂದಿಗೆ ಹೋರಾಡುವ ಆ್ಯಂಟಿಬಾಡಿಸ್ ಅನ್ನು ಕೃತಕವಾಗಿ ತಯಾರಿಸಿ ಲಸಿಕೆಗಳ(Vaccine) ಮೂಲಕ ನೀಡುತ್ತಾರೆ.
ಲಸಿಕೆಗಳ ಮೂಲ ತತ್ವಗಳು
● ನಿಶ್ಚಿತ ರೋಗಕ್ಕೆ ಸಂಬಂಧಿಸಿದ ಲಸಿಕೆಯು, ಅತಿ ಸ್ವಲ್ಪ ಪ್ರಮಾಣದಲ್ಲಿ ಚುಚ್ಚುಮದ್ದಿನ ಮೂಲಕ ಶರೀರ ತಲುಪಿದಾಗ, ಆ ರೋಗ ಬಾರದೆಯೇ ಆ ರೋಗದ ರೋಗಾಣುಗಳೊಂದಿಗೆ ಹೋರಾಡುವ ಶಕ್ತಿ ಆ್ಯಂಟಿಬಾಡೀಸ್ ಗೆ ಬರುತ್ತದೆ. ಹಾಗಾಗಿ ಮುಂದೆ ಆ ರೋಗಗಳು ದೇಹ ಪ್ರವೇಶಿಸಿದರು ಏನು ಮಾಡಲಾರವು.
● ವ್ಯಕ್ತಿಯ ದೇಹ ರೋಗನಿರೋಧಕ ಶಕ್ತಿಯಿಂದ ಕೂಡಿ, ರೋಗಾಣು ಸೋಂಕಿದರೂ ರೋಗ ರಹಿತನಾಗುತ್ತಾನೆ.
● ಎಲ್ಲಾ ತರಹದ ಸೋಂಕಿಗೂ ನಮ್ಮಲ್ಲಿ ಲಸಿಕೆಗಳು ಇಲ್ಲದಿದ್ದರೂ, ಈಗಿರುವ ಲಸಿಕೆಗಳಿಂದ ಎಷ್ಟೋ ಭಯಂಕರ ರೋಗಗಳಿಂದ ನಾವು ರಕ್ಷಿಸಿಕೊಳ್ಳಬಹುದು.
ಚಿಕಿತ್ಸೆ
● ಅಂಟುರೋಗಗಳಿಗೆ ಆಯಾ ರೋಗವನ್ನುಂಟು ಮಾಡುವ ಜೀವಾಣುಗಳ ಪ್ರಕಾರ ವೈದ್ಯಕೀಯ ಚಿಕಿತ್ಸೆ ಲಭ್ಯ. ಉದಾಹರಣೆಗೆ .
● ಡಿಫ್ತೀರಿಯ (ಗಂಟಲು ರೋಗ) ಗೊನ್ಹೋರಿಯ (Gonorrhoea) ನ್ಯೂಮೋನಿಯ, ಸಿಫಿಲಿಸ್, ಕ್ಷಯ, ಟೈಫಾಯ್ಡ್ ಮೊದಲಾದ ಬ್ಯಾಕ್ಟೀರಿಯ ಮೂಲಕ ಹರಡುವ ಕಾಯಿಲೆಗಳಿಗೆ (Pencilin) ಪೆನ್ಸಿಲಿನ್ ಅಂತಹ ಆ್ಯಂಟಿಬಯೋಟಿಕ್ಸ್ ಉಪಯೋಗಿಸುತ್ತೇವೆ.
ಅಂಟುರೋಗಗಳು ಯಾರಿಗೆ ಸೋಂಕುತ್ತವೆ?
● ಅಂಟು ರೋಗಗಳು ವ್ಯಾಪಿಸಿರುವ ಪ್ರದೇಶಗಳಲ್ಲಿ ವಾಸಿಸುವವರಿಗೆ ಮತ್ತು ಅಲ್ಲಿ ಪ್ರಯಾಣಿಸುವವರಿಗೆ.
● ಮೂರು ವರ್ಷದೊಳಗಿನ ಮಕ್ಕಳಿಗೆ ● ಅಂಟುರೋಗವುಳ್ಳ ವ್ಯಕ್ತಿಯ ಕುಟುಂಬದ ಸದಸ್ಯರಿಗೆ
● ಸೀತಾಳ ಸಿಡುಬು(Chicken pox) ನಂತಹ ಬಾಲ್ಯ ರೋಗವು ದೊಡ್ಡವರಿಗೆ ಬಂದಾಗ ಅದರ ಪರಿಣಾಮ ಬಹಳ ತೀವ್ರವಾಗಿ ಇರುತ್ತದೆ.
● ವೃದ್ದರು, ದುರ್ಬಲರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವಂತಹ ಜನರಿಗೆ.
●Protozoa ಕ್ರಿಮಿಗಳಿಂದ ಉಂಟಾಗುವ ಮಲೇರಿಯಾ, ಶಿಲೀಂಧ್ರ (Fungi) ಗಳಿಂದ ಉಂಟಾಗುವ ಮೈಸಿಲೋಮಾ ಫಂಗಸ್, ಕ್ಯಾಂಡಿಡಾ ಫಂಗಸ್ ಇವುಗಳಿಗೆ ಬೇರೆ ಔಷಧಿ ನೀಡಲಾಗುತ್ತದೆ.
ಸಾಂಕ್ರಮಿಕ ರೋಗಗಳ ನಿವಾರಣೋಪಾಯಗಳು:
● ವೈದ್ಯರು ಸೂಚಿಸುವ ಲಸಿಕೆಗಳನ್ನು ಮಕ್ಕಳಿಗೆ ಹಾಕಿಸುವುದು.
● ಹೊರದೇಶಗಳಿಗೆ ಹೋಗುವಾಗ ಅಲ್ಲಿ ವ್ಯಾಪಿಸಿರುವ ಸೋಂಕು ರೋಗಗಳ ಬಗ್ಗೆ ವೈದ್ಯರಿಂದ ತಿಳಿದುಕೊಂಡು, ತಕ್ಕ ಲಸಿಕೆ ಆ್ಯಂಟಿಬಯಾಟಿಕ್ ತೆಗೆದುಕೊಳ್ಳುವುದು.
● ಸಾಂಕ್ರಾಮಿಕ ರೋಗ ಹರಡುವ ಪ್ರದೇಶಗಳಲ್ಲಿ ಪ್ರಯಾಣಿಸುವಂತಿದ್ದರೆ ಅಲ್ಲಿ ಐಸ್ ಕ್ರೀಮ್, ಅಶುದ್ಧ ನೀರು, ತಣ್ಣನೆಯ ಮತ್ತು ಕೂಯ್ದು ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳ ಉಪಯೋಗಿಸಬಾರದು.
● ಸೋಂಕಿನ ಬಗ್ಗೆ ಅತಿ ಜಾಗ್ರತೆ ವಹಿಸುವುದು ಸೂಕ್ತ.
ಕೆಲವು ಅಂಟುರೋಗಗಳು
● ಏಡ್ಸ್
● ಹೆಪಟೈಟಿಸ್ ಎ ಬಿ ಮುಂತಾದವು
● ಶೀತ
● ಪ್ಲೂ
● ದಡಾರ
● ರೆಬಿಸ್
● ರುಬೆಲ್ಲಾ
● ಸಿಫಿಲಿಸ್, ಗನೋರಿಯದಂತಹ ಲೈಂಗಿಕ ರೋಗಗಳು
● ಮೆದುಳು ಜ್ವರ
● ಅತಿಸಾರ
● ಜ್ವರ
● ತಲೆನೋವು ಮೊದಲಾದವು
● ನ್ಯೂಮೋನಿಯಾ
● ಕ್ಷಯ
● ಟೈಫಾಯ್ಡ್
● ಅಮಿಬಿಯಾಸಿಸ್
● ಕಾಲರ
●ಮಲೇರಿಯಾ ಮೊದಲಾದವು…














