ಮನೆ ಮಾನಸಿಕ ಆರೋಗ್ಯ ಹೆರಿಗೆ ಸಮಯದ ಕಾರಣಗಳು

ಹೆರಿಗೆ ಸಮಯದ ಕಾರಣಗಳು

0

ಯಾವುದೇ ಕಾರಣದಿಂದ ಹೆರಿಗೆ ಕಷ್ಟವಾದರೆ, ನಿಧಾನವಾದರೆ ಮತ್ತು ಸಕಾಲಕ್ಕೆ ಸೂಕ್ತ ವೈದ್ಯಕೀಯ ನೆರವು ಸಿಗದಿದ್ದರೆ, ಮಗು ಸುಸ್ತಾಗುತ್ತದೆ. ಜನನ ದ್ವಾರದಲ್ಲಿ ಅದರ ತಲೆ ಸಿಕ್ಕಿ ಹಾಕಿಕೊಂಡರೆ, ಮಿದುಳಿನಲ್ಲಿ ರಕ್ತಸ್ರಾವವಾಗಿ ಮಿದುಳಿಗೆ ಹಾನಿಯಾಗಬಹುದು ಅಥವಾ ಹುಟ್ಟಿದ ತಕ್ಷಣ ಮಗು ಅಳದಿದ್ದರೆ, ಮಗುವಿನ ಉಸಿರಾಟ ಪ್ರಾರಂಭವಾಗುವುದಿಲ್ಲ. “ಆಗ ಅದರ ಮಿದುಳಿಗೆ ಆಮ್ಲಜನಕದ ಕೊರತೆಯಿಂದಾಗಿ, ಹಾನಿಗೀಡಾಗುತ್ತದೆ; ಬುದ್ದಿ ಮಾಂದ್ಯತೆ ಬರುತ್ತದೆ.

Join Our Whatsapp Group

ಹೆರಿಗೆ ನಂತರ, ಸಣ್ಣ ಕೂಸಿಗೆ ಬರುವ ತೊಂದರೆಗಳು :

ತೀವ್ರ ಜ್ವರ, ವಿಪರೀತ ವಾಂತಿಭೇದಿ, ಮಿದುಳಿನ ಜ್ವರ, ಮೂರ್ಛ ರೋಗ, ಕಾಮಾಲೆ ಮುಂತಾದ ಖಾಯಿಲೆಗಳಿಂದ ಬುದ್ದಿ ಮಾಂದ್ಯತೆ ಬರಬಹುದು. ಅಲ್ಲದೆ ಮಗುವಿಗೆ ಸರಿಯಾದ ಪೋಷಣೆ ಇಲ್ಲದೆ, ಪ್ರೋಟೀನ್ ಮತ್ತು ವಿಟಮಿನ್‌ಗಳ ಕೊರತೆಯಾದರೆ ಬುದ್ದಿ ಮಾಂದ್ಯತೆ ಬರುತ್ತದೆ. ಇಷ್ಟಲ್ಲದೆ ಪ್ರೀತಿಮಮತೆಗಳ ಕೊರತೆ, ಅತಿಶಿಸ್ತು, ಶಿಕ್ಷೆ, ಉದಾಸೀನತೆ, ಉತ್ತೇಜನವಿಲ್ಲದ ಬರಡು ವಾತಾವರಣ ಕೂಡ ಬುದ್ಧಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

 ಬುದ್ದಿ ಮಾಂದ್ಯತೆಯನ್ನು ಸರಿಪಡಿಸಲು ಔಷಧಗಳಿವೆಯೇ? :

       ಬಹುತೇಕ ತಂದೆ ತಾಯಿಗಳು ತಮ್ಮ ಮಗುವಿನ ಬುದ್ದಿ ಮಾಂದ್ಯತೆಯನ್ನು ಗುಣಪಡಿಸಬಲ್ಲ cಯಾವುದೋ ಒಂದು ಒಳ್ಳೆಯ ಮಾತ್ರೆ, ಟಾನಿಕ್, ಇನ್‌ಜೆಕ್ಷನ್ ಇದೆ, ದೊಡ್ಡ ತಜ್ಞ ವೈದ್ಯರಿದ್ದಾರೆ, ಮಿದುಳಿನ ಎಕ್ಸರೇ ತೆಗೆದು. ಯಾವುದೋ ಒಂದು ವಿಶೇಷ ಶಸ್ತ್ರಚಿಕಿತ್ಸೆ ನಡೆಸಿಬಿಟ್ಟರೆ. ಗುಣವಾಗಿಬಿಡುತ್ತೆ ಎಂದು ನಂಬುತ್ತಾರೆ ಹಾಗೂ ಆಶಿಸುತ್ತಾರೆ. ಆದರೆ ದುರದೃಷ್ಟದಿಂದ ಬುದ್ದಿ ಮಾಂದ್ಯತೆಯನ್ನು ಗುಣಪಡಿಸ ಬಲ್ಲ ಯಾವುದೇ ಔಷಧಿ, ಶಸ್ತ್ರಚಿಕಿತ್ಸೆ ಸದ್ಯಕ್ಕೆ ಲಭ್ಯವಿಲ್ಲ. ಮಾತ್ರೆ, ಟಾನಿಕ್, ಇನ್‌ಜೆಕ್ಷನ್‌ಗಳಿಂದ ಮಗುವಿನ ಬುದ್ಧಿಯನ್ನು ಜಾಸ್ತಿ ಮಾಡಲು, ಮಿದುಳಿನ ಹಾನಿ ಯನ್ನು ಸರಿಮಾಡಲು ಸಾಧ್ಯವಿಲ್ಲ ಎಂಬುದನ್ನು ತಂದೆ ತಾಯಿಗಳು ಅರಿಯಬೇಕು. ಬುದ್ದಿ ಮಾಂದ್ಯ ಮಗುವನ್ನು ಎತ್ತಿಕೊಂಡು, ಪವಾಡ ಮಾಡುವ ಔಷಧಿಗಾಗಿ, ವೈದ್ಯರಿಂದ ವೈದ್ಯರಿಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದನ್ನು ನಿಲ್ಲಿಸಬೇಕು. ಮಾರುಕಟ್ಟೆಯಲ್ಲಿ ಅಬ್ಬರದ ಪ್ರಚಾರದೊಂದಿಗೆ ಮಾರಲ್ಪಡುವ ಔಷಧಗಳಿಂದ ತಂದೆ ತಾಯಿಗಳ ಹಣ ಕರಗುವುದೇ ವಿನಾ ಮಗುವಿನ ಬುದ್ಧಿ ಬೆಳೆಯುವುದಿಲ್ಲ. ‘ಮಗುವನ್ನು ಸರಿಪಡಿಸಲು ಸಾಧ್ಯವಿಲ್ಲ. ಬೆಳೆದರೆ ಸರಿಹೋಗಬಹುದು. ನಮ್ಮ ದುರದೃಷ್ಟದಿಂದ, ಪಾಪಕರ್ಮದಿಂದ ಈ ಮಗು ಹುಟ್ಟಿದೆ’ ಮುಂತಾದ ತಪ್ಪು ಭಾವನೆಗಳಿಂದ ನಿಷ್ಕ್ರಿಯರಾಗಿ ಕೂಡಲೂಬಾರದು.

 ಬುದ್ಧಿಮಾಂದ್ಯತೆಗೆ ಚಿಕಿತ್ಸೆ ಏನು? :

ಬುದ್ದಿ ಮಾಂದ್ಯತೆಗೆ ಚಿಕಿತ್ಸೆ ಇದೆ. ಸೂಕ್ತ ತರಪೇತಿ ಮತ್ತು ಶಿಕ್ಷಣವೇ ಬುದ್ಧಿ ಮಾಂಧ್ಯತೆಗೆ ಚಿಕಿತ್ಸೆ ಮಗುವಿಗೆ ನೈಸರ್ಗಿಕವಾಗಿ ಬಂದಿರುವ ಬುದ್ಧಿಯನ್ನು, ಅದು ಎಷ್ಟೇ ಕಡಿಮೆ ಇರಲ್ಲಿ ಉಪಯೋಗಿಸಿಕೊಂಡು ಮಗುವಿಗೆ ಸರಿಯಾದ ತರಪೇತಿ ಮತ್ತು ಶಿಕ್ಷಣವನ್ನು ಕೊಡುವುದೇ ಇರುವ ಏಕೈಕ ಚಿಕಿತ್ಸಾವಿಧಾನ ಮಗುವಿಗೆ ಚಿಕ್ಕ ವಯಸ್ಸಿನಿಂದಲೇ, ಸಹನೆಯಿಂದ, ಪದೇಪದೇ ಹೇಳಿ, ಮಾಡಿ ತೋರಿಸಿ, ಅಭ್ಯಾಸ ಮಾಡಿಸಿ ಕಲಿಸಲು ಪ್ರಾರಂಭಿಸಿದರೆ, ನಿಧಾನವಾಗಿಯಾದರೂ ಈ ಮಕ್ಕಳು ಹೊಸ ಕೌಶಲಗಳನ್ನು ಕಲಿಯುತ್ತವೆ. ಸಾಕಷ್ಟು ಉತ್ತೇಜನ, ಪ್ರೋತ್ಸಾಹಗಳನ್ನು ಕೊಟ್ಟರೆ, ಸ್ವಾವಲಂಬಿಗಳಾಗುತ್ತವೆ.

ಕ್ರಮವಾದ ತರಪೇತಿ ಅಗತ್ಯ :

ಬುದ್ಧಿ ಮಾಂದ್ಯತೆಯನ್ನು ಆದಷ್ಟು ಬೇಗ ಗುರುತಿಸಬೇಕು. ಮನಶಾಸ್ತ್ರಜ್ಞರು- ಮನೋವೈದ್ಯರನ್ನು ಕಂಡು ಅವರ ಸಲಹೆ ಪಡೆದು ತರಪೇತಿಯನ್ನು ಪ್ರಾರಂಭಿಸ ಬೇಕು. ತರಪೇತಿಯನ್ನು ಮನೆಯಲ್ಲೇ, ತಂದೆ ತಾಯಿಗಳೇ ಕೊಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಕ್ರಮವಾಗಿ ಹಂತ ಹಂತವಾಗಿ ಕೌಶಲ ಮತ್ತು ಚಟುವಟಿಕೆಗಳನ್ನು ಕಲಿಸಬೇಕು.

ಮೊದಲ ಹಂತ : 1) ಅಂಗಾಂಗಗಳಿಗೆ ಶಕ್ತಿ ಬರುವಂತೆ, ಹೊಂದಾಣಿಕೆ ಯಿಂದ ಕೆಲಸ ಮಾಡುವಂತೆ ತರಪೇತಿ.

         ಮಗುವಿಗೆ ಕತ್ತು ನಿಲ್ಲದೇ ಇದ್ದರೆ, ಕೈ ಕಾಲುಗಳು ಹತ್ತಿಯಂತೆ ಮೃದುವಾಗಿ, ಕ್ರಮವಾದ ಚಲನೆ ಸಾಧ್ಯವಿಲ್ಲದಿದ್ದರೆ, ಮೊದಲು ಈ ಮಾಂಸ ಖಂಡಗಳಿಗೆ ಶಕ್ತಿ ಬರುವಂತೆ, ಚಲಿಸುವಂತೆ ಮಾಡಬೇಕು. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಈ ಅಂಗಾಂಗಗಳಿಗೆ ಎಣ್ಣೆ (ಕೊಬ್ಬರಿ ಎಣ್ಣೆ ಸಾಕು) ಬೆವರು ಮಾಡಿ ನೀವಬೇಕು. ನಂತರ ಕೈ, ಕಾಲುಗಳನ್ನು ಮಡಿಸಿ, ಉದ್ದ ಮಾಡಿ ವ್ಯಾಯಾಮ ಮಾಡಿಸಬೇಕು. ಹೀಗೆ ಕ್ರಮವಾಗಿ ಮಾಡಿಸುವ ವ್ಯಾಯಾಮದಿಂದ, ಮಾಂಸಖಂಡಗಳು ಬಲಗೊಂಡು, ಮಗು ಈ ಅಂಗಾಂಗಗಳನ್ನು ಸರಿಯಾಗಿ ಉಪಯೋಗಿಸಲು ಸಹಾಯವಾಗುತ್ತದೆ.

       ನಂತರ ಮಗು ಕುಳಿತುಕೊಳ್ಳಲು, ಎದ್ದುನಿಲ್ಲಲು, ನಡೆಯಲು ಕಲಿಸಬೇಕು. ತಾಯಿ ತಂದೆ ಮತ್ತು ಕುಟುಂಬದ ಇತರರು-ಎಲ್ಲರೂ ಮಗುವಿಗೆ ತರಪೇತಿ ಕೊಡುವ ಕಾಠ್ಯಕ್ರಮದಲ್ಲಿ ಭಾಗವಹಿಸಬೇಕು. ತಳ್ಳುವ ಗಾಡಿ ಅಥವಾ ಮಗು ಮಧ್ಯೆ ನಿಲ್ಲುವಂತಹ ಹಾಗೂ ನಾಲ್ಕು ಕಾಲುಗಳಿಗೂ ಚಕ್ರವಿರುವ ವಿಶೇಷ ಸ್ಕೂಲ್ ಮಾಡಿಸಿ. ಅದನ್ನು ಉಪಯೋಗಿಸಿಕೊಂಡು ಮಗು ನಿಲ್ಲಲು, ಮುಂದಕ್ಕೆ ನಡೆಯಲು ತರಪೇತಿ ಕೊಡಬೇಕು.ಮನಸ್ಸಿಗೇಕೆ ಕಾಯಿಲೆ? ಪರಿಹಾರವೇನು?

 ಪಂಚೇಂದ್ರಿಯಗಳಿಗೆ ಪ್ರಚೋದನೆ :

        ಮಗುವಿನ ಕಣ್ಣು, ಕಿವಿ, ಮೂಗು, ಚರ್ಮ ಮತ್ತು yನಾಲಿಗೆಗಳಿಗೆ ಪದೇಪದೇ ಪ್ರಚೋದನೆ ಕೊಡುವುದರಿಂದ ಮಿದುಳಿಗೆ ಉತ್ತೇಜನ ಸಿಗುತ್ತದೆ. ಮಗುವಿಗೆ ಬಣ್ಣ ಬಣ್ಣದ ವಸ್ತುಗಳನ್ನು ತೋರಿಸುವುದು. ತೊಟ್ಟಿಲಿಗೆ ಬರುವ ಬಟ್ಟೆ / ಕಾಗದ ಕಟ್ಟುವುದು, ಮಾತನಾಡಿ, ಸಂಗೀತ ಕೇಳಿಸಿ, ಶಬ್ದ ಮಾಡುವ ಆಟದ ಸಾಮಾನು ಗಳನ್ನು ಕೊಡುವುದು ಅಪೇಕ್ಷಣೀಯ. ಆಡುಗೆ ಮಾಡುವಾಗ ಮಗುವನ್ನು ಅಡುಗೆ ಮನೆಯಲ್ಲಿ ಮಲಗಿಸುವುದು, ತಾಯಿ ಪರಿಮಳ ಬೀರುವ ಹೂಗಳು, ಪೌಡರ್, ಸ್ಕೋ ಬಳಸುವುದು ಮಗುವನ್ನು ಚಾಪೆಯ ಮೇಲೆ, ಕಂಬಳಿಯ ಮೇಲೆ, ಹತ್ತಿ ಅಥವಾ ನೈಲಾನ್ ಬಟ್ಟೆಯ ಮೇಲೆ ಬೆತ್ತಲೆ ಮಲಗಿಸುವುದು. ಮಗುವನ್ನು ಮುದ್ದಿಸುವುದು, ಮೈದಡವಿ ಅಪ್ಪಿಕೊಳ್ಳುವುದು ಪ್ರಯೋಜನಕಾರಿ. ಮಗು ಸ್ವಲ್ಪ ದೊಡ್ಡದಾದಂತೆ ಚಿತ್ರಗಳು, ಬೊಂಬೆಗಳನ್ನು ತೋರಿಸಿ. ಅವುಗಳನ್ನು ಗುರುತಿಸಿ, ಹೇಳಿಸುವ ಅಭ್ಯಾಸ ಮಾಡುವುದರಿಂದ ಮಗು ಉತ್ತಮಗೊಳ್ಳುತ್ತದೆ.

      ಎರಡನೇ ಹಂತ : ಮಗುವಿಗೆ ತನ್ನ ಅಂಗಾಂಗಗಳ ಮೇಲೆ ಸಾಕಷ್ಟು uಹತೋಟಿ ಬಂದ ಮೇಲೆ, ದಿನನಿತ್ಯದ ಚಟುವಟಿಕೆಗಳನ್ನು ತಾನೇ ಮಾಡಲು ಕಲಿಸ ಬೇಕು. ಅಂದರೆ ಬೇರೆಯವರ ಸಹಾಯವಿಲ್ಲದೆ ತಾನೇ ತಿಂಡಿ ತಿನ್ನುವುದು, ಬಟ್ಟೆ ಹಾಕಿಕೊಳ್ಳುವುದು, ಹಲ್ಲುಜ್ಜುವುದು, ಮುಖ ತೊಳೆಯುವುದು, ಸ್ನಾನ ಮಾಡುವುದು, ಮಲಮೂತ್ರ ವಿಸರ್ಜನೆಗೆ ಕಕ್ಕಸುಮನೆಗೆ ಹೋಗುವುದು, ಚೊಕ್ಕಟವಾಗಿರುವುದು- ಇವನ್ನೆಲ್ಲಾ ಒಂದೊಂದಾಗಿ ಹೇಳಿ, ಮಾಡಿ ತೋರಿಸಿ ಕಲಿಸಬೇಕು.

‘      ಮಗುವಿಗೆ ಹೇಳಿ ಮಾಡಿಸುವುದಕ್ಕಿಂತ ನಾವು ಮಾಡುವುದೇ ಸುಲಭ ಹಾಗೂ ರಗಳೆ ಇಲ್ಲದ ಕೆಲಸ’ ಎಂದು ಅನೇಕ ತಂದೆ ತಾಯಿಗಳು ಮಗುವಿಗೆ ಏನನ್ನೂ ಮಾಡಲು ಬಿಡದೆ, ಎಲ್ಲವನ್ನೂ ತಾವೇ ಮಾಡಿಬಿಡುತ್ತಾರೆ. ಇದರಿಂದ ಮಗುವಿಗೆ ಕಲಿಯುವ ಅವಕಾಶವೇ ಇಲ್ಲದೆ, ಬೆಳೆದು ದೊಡ್ಡದಾದ ಮೇಲೂ, ಸಂಪೂರ್ಣವಾಗಿ ಪರಾವಲಂಬಿಯಾಗಿರುತ್ತದೆ. ಹೀಗಾಗಲು ಬಿಡಬಾರದು. ಮಗು ಊಟ ಮಾಡಲು ಪ್ರಯತ್ನಿಸುವಾಗ, ಅನ್ನವನ್ನು ಚೆಲ್ಲಿ vಗಲೀಜು ಮಾಡಬಹುದು. ಮುಖ ತೊಳೆಯುವಾಗ, ಸ್ನಾನ ಮಾಡುವಾಗ ಹೆಚ್ಚು ನೀರು ವ್ಯಯ ಮಾಡಿ, ಸ್ನಾನದ ಮನೆಯನ್ನು ಕೊಳಕು ಮಾಡಬಹುದು. ಪ್ರಾರಂಭದಲ್ಲಿ ಈ ಅವ್ಯವಸ್ಥೆ, ಗಲೀಜು, ಅನವಶ್ಯಕ ವ್ಯಯವನ್ನು ಸಹಿಸಿಕೊಂಡು, ಮಗುವಿಗೆ ತರಪೇತಿಕೊಡಿ. ಕ್ರಮೇಣ ನಿಮಗೆ ಆಶ್ಚರ್ಯವಾಗುವ ಹಾಗೆ. ಮಗು ಈ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ಕಲಿಯುತ್ತದೆ. ಮಗುವಿನ ಜೊತೆಯಲ್ಲೇ ಇದ್ದು, ಪ್ರತಿಯೊಂದು ಕೌಶಲವನ್ನು ಬಾಯಲ್ಲಿ ಹೇಳಿ, ನೀವು ಮಾಡಿ ತೋರಿಸಿ, ಮಗುವಿನಿಂದ ಮಾಡಿಸಿ, ಅದು ಮಾಡಿದಾಗ ಭೇಷ್ ಎಂದು ಪ್ರೋತ್ಸಾಹಿಸಿ ಕಲಿಸುವುದು ಮುಖ್ಯ.