ಮನೆ ಮನರಂಜನೆ ಜುಲೈ 29 ರಂದು ಒಟಿಟಿಯಲ್ಲಿ ʻಚಾರ್ಲಿʼಸಿನಿಮಾ ಬಿಡುಗಡೆ

ಜುಲೈ 29 ರಂದು ಒಟಿಟಿಯಲ್ಲಿ ʻಚಾರ್ಲಿʼಸಿನಿಮಾ ಬಿಡುಗಡೆ

0

ಬೆಂಗಳೂರು (Bengaluru): ನಟ ರಕ್ಷಿತ್‌ ಶೆಟ್ಟಿ ಅಭಿನಯದ ಸಿನಿಮಾ ‘777 ಚಾರ್ಲಿ’ ಒಟಿಟಿ ವೇದಿಕೆಗೆ ಬರಲು ದಿನಾಂಕ ನಿಗದಿಯಾಗಿದೆ. ಕಳೆದ ಜೂನ್‌ 10ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಜುಲೈ 29ರಿಂದ ವೂಟ್‌ ಸೆಲೆಕ್ಟ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಜುಲೈ 29ರಂದು ‘777 ಚಾರ್ಲಿ’ ಸಿನಿಮಾ 50 ದಿನಗಳನ್ನು ಪೂರೈಸಲಿದೆ. ಹೀಗಾಗಿ ಇದೇ ದಿನ ವೂಟ್ ಸೆಲೆಕ್ಟ್‌ನಲ್ಲಿ ‘777 ಚಾರ್ಲಿ’ ಬಿಡುಗಡೆಯಾಗುತ್ತಿದೆ.

ಕಿರಣ್‌ರಾಜ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲೇ ಕಿರಣ್‌ರಾಜ್‌ ಖ್ಯಾತಿ ಪಡೆದಿದ್ದರು. ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿಗೆ ಸಂಗೀತ ಶೃಂಗೇರಿ ಜೋಡಿಯಾಗಿ ಅಭಿನಯಿಸಿದ್ದಾರೆ.

777 ಚಾರ್ಲಿ ಚಿತ್ರೀಕರಣದ ಸಮಯದಲ್ಲಿ ಚಿತ್ರಿಸಿದ ಪ್ರತಿಯೊಂದು ಭಾವನೆಗಳು ಸಹಜ ಮತ್ತು ಹೃದಯಾಂತರಾಳದಿಂದ ಬಂದಂತವು, ಅದನ್ನು, ನಾನು ನನ್ನ ಮುಂದಿನ ಸಿನಿಮಾಗಳಲ್ಲಿಯೂ ಅಳವಡಿಸಿಕೊಂಡು ಹೋಗುತ್ತೇನೆ, ಚಾರ್ಲಿ ಸಿನಿಮಾ ವೂಟ್ ನಲ್ಲಿ ರಿಲೀಸ್ ಆಗುತ್ತಿರುವುದು ನನಗೆ ಅಪಾರ ಸಂತಸ ತಂದಿದೆ, ಈ ಚಿತ್ರ ನನಗೆ ಮರೆಯಲಾರದಂತ ಅನುಭವ ಕೊಟ್ಟಿದೆ ಎಂದು ನಾಯಕಿ ಸಂಗೀತ ಶೃಂಗೇರಿ ಹೇಳಿದ್ದಾರೆ.

ಹಿಂದಿನ ಲೇಖನಪ್ರವೀಣ್‌ ನೆಟ್ಟಾರು ಹತ್ಯೆ: ಪುತ್ತೂರು ಸಂಪೂರ್ಣ ಬಂದ್‌
ಮುಂದಿನ ಲೇಖನಆನ್‌ಲೈನ್ ನಿಂದನೆಯು ಕೂಡ SC/ST ಕಾಯಿದೆಗೊಳಪಡುತ್ತದೆ: ಕೇರಳ ಹೈಕೋರ್ಟ್‌