ಮನೆ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು: ಕರ್ನಾಟಕ ಪ್ರಜಾಪಾರ್ಟಿ ಪಕ್ಷದಿಂದ ಅಂಚೆ ಚಳವಳಿ

ತಮಿಳುನಾಡಿಗೆ ಕಾವೇರಿ ನೀರು: ಕರ್ನಾಟಕ ಪ್ರಜಾಪಾರ್ಟಿ ಪಕ್ಷದಿಂದ ಅಂಚೆ ಚಳವಳಿ

0

ಮೈಸೂರು: ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ CWRC ಆದೇಶ ಹೊರಡಿಸಿರುವ ಹಿನ್ನೆಲೆ ಮೈಸೂರಿನಲ್ಲಿ ಕಾವೇರಿಗಾಗಿ ಹೋರಾಟ ಮುಂದುರೆದಿದೆ ಕರ್ನಾಟಕ ಪ್ರಜಾಪಾರ್ಟಿ ವತಿಯಿಂದ ವಿನೂತನ ಪ್ರತಿಭಟನೆ ನಡೆಯುತ್ತಿದೆ.

Join Our Whatsapp Group

ಕರ್ನಾಟಕ ಪ್ರಜಾಪಾರ್ಟಿ ಪಕ್ಷದ ರಾಜ್ಯಾಧ್ಯಕ್ಷ ವಕೀಲ ಶಿವಣ್ಣ ರವರ ನೇತೃತ್ವದಲ್ಲಿ ಅಂಚೆ ಚಳುವಳಿ ನಡೆದಿದ್ದು, ಕಾರ್ಯಕರ್ತರೆಲ್ಲ ಸೇರಿಕೊಂಡು ದೆಹಲಿಯ ಪ್ರಧಾನಿಗಳ ಕಚೇರಿಗೆ ಅಂಚೆ ಪೋಸ್ಟ್ ಮಾಡಿದ್ದಾರೆ.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು. ಕಾವೇರಿ ವಿಚಾರದಲ್ಲಿ ಪ್ರಧಾನಿಗಳು ಮಧ್ಯ ಪ್ರವೇಶ ಮಾಡಬೇಕು. ಈ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ರಾಜ್ಯದಿಂದ ಮತ್ತೆ ನೀರು ಹರಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಪ್ರಾಧಿಕಾರದ ಆದೇಶ ಪಾಲನೆ ಮಾಡಬಾರದು. ಎಲ್ಲೋ ಎಸಿ ರೂಮಿನಲ್ಲಿ ಕುಳಿತು ಆದೇಶ ಮಾಡುವುದಲ್ಲ. ವಾಸ್ತವ ಸ್ಥಿತಿ ಅರಿತು ಆದೇಶ ಮಾಡಬೇಕು. ಈ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಸಂಸದರು ಒತ್ತಾಯ ಹೇರಬೇಕು. ಕಾವೇರಿ ವಿಚಾರದಲ್ಲಿ ಶ್ವಾಶತ ಪರಿಹಾರ ಸಿಗಬೇಕು. ೨೯ರ ಕರ್ನಾಟಕ ಬಂದ್ ಗೆ ನಮ್ಮ ಸಂಪೂರ್ಣ ಸಹಕಾರವಿದೆ.

ಮೈಸೂರಿನಲ್ಲೂ ಕರ್ನಾಟಕ ಬಂದ್ ಯಶಸ್ವಿ ಆಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನದ ಬಣದ ಜಗದೀಶ್ ಹೇಳಿದರು.

ಹಿಂದಿನ ಲೇಖನ25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ತಂಡ
ಮುಂದಿನ ಲೇಖನಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದವನ ಬಂಧನ