ಮನೆ ರಾಷ್ಟ್ರೀಯ ಸೈಬರ್ ಅಪರಾಧಿಗಳ ವಿರುದ್ಧ ರಾಜ್ಯ ಸೇರಿ ಹಲವು ಕಡೆಗಳಲ್ಲಿ ಸಿಬಿಐ ದಾಳಿ

ಸೈಬರ್ ಅಪರಾಧಿಗಳ ವಿರುದ್ಧ ರಾಜ್ಯ ಸೇರಿ ಹಲವು ಕಡೆಗಳಲ್ಲಿ ಸಿಬಿಐ ದಾಳಿ

0

ನವದೆಹಲಿ(Newdelhi) : ಹಣಕಾಸು ಅಪರಾಧಗಳಲ್ಲಿ ಭಾಗಿಯಾಗಿರುವ ಸೈಬರ್ ಅಪರಾಧಿಗಳ ವಿರುದ್ಧ ಸಿಬಿಐ ಮಂಗಳವಾರ ”ಆಪರೇಷನ್ ಚಕ್ರ”ವನ್ನು ಪ್ರಾರಂಭಿಸಿದ್ದು, ವಿವಿಧ ರಾಜ್ಯಗಳ 105 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳ ಸಹಯೋಗದಲ್ಲಿ ಶೋಧ ಕಾರ್ಯಗಳನ್ನು ನಡೆಸಲಾಗುತ್ತಿದ್ದು, 87 ಸ್ಥಳಗಳಲ್ಲಿ ಸಿಬಿಐ ಶೋಧಿಸಿದ್ದು, 18 ಸ್ಥಳಗಳಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸರು ಶೋಧಿಸುತ್ತಿದ್ದಾರೆ, ಇದರಲ್ಲಿ 300 ಕ್ಕೂ ಹೆಚ್ಚು ಶಂಕಿತರು ಹಗರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.

ಆರಂಭಿಕ ಮಾಹಿತಿಯ ಪ್ರಕಾರ, ಕರ್ನಾಟಕದ ಎರಡು ಕಡೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಲ್ಕು ಸ್ಥಳಗಳು, ದೆಹಲಿಯಲ್ಲಿ ಐದು, ಚಂಡೀಗಢದಲ್ಲಿ ಮೂರು ಮತ್ತು ಪಂಜಾಬ್, ಅಸ್ಸಾಂನಲ್ಲಿ ತಲಾ ಎರಡು ಸ್ಥಳಗಳಲ್ಲಿ ಕಾರ್ಯಾಚರಣೆಯ ಅಡಿಯಲ್ಲಿ ಶೋಧಿಸಲಾಗುತ್ತಿದೆ.

ಪುಣೆ ಮತ್ತು ಅಹಮದಾಬಾದ್‌ನಲ್ಲಿ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡ ಎರಡು ಕಾಲ್ ಸೆಂಟರ್‌ಗಳನ್ನು ಭೇದಿಸಲಾಗಿದ್ದು, ಈ ಕ್ರಮದ ಬಗ್ಗೆ ಸಿಬಿಐ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಗೆ ಮಾಹಿತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಒಂದು ಸ್ಥಳದಿಂದ 1.5 ಕೋಟಿ ರೂಪಾಯಿ ನಗದು ಮತ್ತು ಒಂದೂವರೆ ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಂಟರ್‌ಪೋಲ್, ಎಫ್‌ಬಿಐ, ರಾಯಲ್ ಕೆನಡಿಯನ್ ಮೌಂಟೇನ್ ಪೊಲೀಸ್ ಮತ್ತು ಆಸ್ಟ್ರೇಲಿಯನ್ ಫೆಡರಲ್ ಪೋಲಿಸ್‌ನ ಮಾಹಿತಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.

ಹಿಂದಿನ ಲೇಖನಯತ್ನಾಳ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ?: ದಿನೇಶ್ ಗುಂಡೂರಾವ್ ಪ್ರಶ್ನೆ
ಮುಂದಿನ ಲೇಖನಹಿಂದೂಗಳು ಶಸ್ತ್ರಗಳನ್ನು ಪೂಜೆ ಮಾಡುವುದು ಮಾತ್ರವಲ್ಲ, ಬಳಸುವುದು ಕಲಿಯಬೇಕು: ಗೋಪಾಲ್ ನಾಗರಕಟ್ಟೆ