ಮನೆ ಅಪರಾಧ ನಿಷೇಧಿತ ಇ ಸಿಗರೇಟ್, ಇ ಲಿಕ್ವಿಡ್ ಮಾರಾಟ ಮಾಡುತ್ತಿದ್ದ ಕಂಪನಿಯ ಮೇಲೆ ಸಿಸಿಬಿ ದಾಳಿ

ನಿಷೇಧಿತ ಇ ಸಿಗರೇಟ್, ಇ ಲಿಕ್ವಿಡ್ ಮಾರಾಟ ಮಾಡುತ್ತಿದ್ದ ಕಂಪನಿಯ ಮೇಲೆ ಸಿಸಿಬಿ ದಾಳಿ

0

ಬೆಂಗಳೂರು: ನಿಷೇಧಿತ ಇ ಸಿಗರೇಟ್, ಇ ಲಿಕ್ವೀಡ್ ಮಾರಾಟ ಮಾಡುತ್ತಿದ್ದ ಕುಂಬಾರಪೇಟೆಯ ಕಂಪನಿ ಗೋಡೌನ್ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ವಿಭಾಗದಿಂದ ದಾಳಿ ಮಾಡಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

Join Our Whatsapp Group

ಸಚಿನ್ ಮತ್ತು ಸಿದ್ದಲಿಂಗ ಎಂಬುವವರು ಬಂಧಿತರು.

ಈ ವೇಳೆ ಗೋಡೋನ್​ನಲ್ಲಿ ಸಂಗ್ರಹಿಸಿದ್ದ 1 ಕೋಟಿ 25 ಲಕ್ಷ ರೂ. ಮೌಲ್ಯದ ನಿಷೇಧಿತ ಲಿಕ್ವೀಡ್, 8 ಸಾವಿರ ವಿವಿಧ ಫ್ಲೇವರ್’​ನ ಇ‌-ಸಿಗರೇಟ್, 2227  ಇ-ಸಿಗರೇಟ್ ಲಿಕ್ವೀಡ್, ಇ-ಸಿಗರೇಟ್ ಪಾಡ್ ಹಾಗೂ ಕೆಲ ಬಿಡಿಭಾಗಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನು ಕೆಲವೊಂದು ಪಾರ್ಟಿ, ಇವೆಂಟ್​ಗಳಿಗೆ ಸರಬರಾಜು ಮಾಡಿರುವುದು ಬಯಲಿಗೆ ಬಂದಿದೆ. ಆದರೆ ಯಾವ ಯಾವ ಪಾರ್ಟಿ, ಇವೆಂಟ್ ಅನ್ನೋದು ತನಿಖೆ ಬಳಿಕ ಗೊತ್ತಾಗಬೇಕಿದೆ. ಜೊತೆಗೆ ಆನ್ ಲೈನ್ ಮೂಲಕವೂ ಇ-ಸಿಗರೇಟ್ ಮಾರಾಟ ಮಾಡುತ್ತಿರುವುದು ತಿಳಿದಿದೆ. ಈ ಇ-ಸಿಗರೇಟ್ ಆರೋಗ್ಯಕ್ಕೆ ಮಾರಕ ಎಂದು ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಆದರೂ ಇವರು ಬೇರೆ ಬೇರೆ ರಾಜ್ಯಗಳಿಂದ ತಂದು ಮಾರಾಟ ಮಾಡುತ್ತಿದ್ದರು. ಪ್ರಕರಣ ಸಂಬಂಧ ಗೋಡೌನ್ ಮಾಲೀಕನ ಮೇಲೆ ಕೇಸ್ ದಾಖಲು ಮಾಡಲಾಗಿದೆ.

ಹಿಂದಿನ ಲೇಖನUPI ದಾಖಲೆ: ಏಪ್ರಿಲ್‌’ನಲ್ಲಿ 14.07 ಲಕ್ಷ ಕೋಟಿ ವಹಿವಾಟು
ಮುಂದಿನ ಲೇಖನಕಾಂಗ್ರೆಸ್ ಪ್ರಣಾಳಿಕೆ ಸುಳ್ಳಿನ ಕಂತೆ: ಪ್ರಲ್ಹಾದ್ ಜೋಶಿ