ಮನೆ ಕಾನೂನು ಸಿಡಿ ಪ್ರಕರಣ : ಎಸ್ಐಟಿಯಿಂದ ಹೈಕೋರ್ಟ್ ಗೆ ಮಧ್ಯಂತರ ವರದಿ ಸಲ್ಲಿಕೆ

ಸಿಡಿ ಪ್ರಕರಣ : ಎಸ್ಐಟಿಯಿಂದ ಹೈಕೋರ್ಟ್ ಗೆ ಮಧ್ಯಂತರ ವರದಿ ಸಲ್ಲಿಕೆ

0

ಬೆಂಗಳೂರು : ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್‌ ಪಾರ್ಕ್​ ಪೊಲೀಸ್​​ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಹೈಕೋರ್ಟ್​ಗೆ ಮಧ್ಯಂತರ ವರದಿ ಸಲ್ಲಿಸಿದೆ.

ಪ್ರಕರಣದ ತನಿಖೆಯ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಎಸ್ಐಟಿ ತನಿಖೆ ಕೈಗೊಂಡಿದ್ದು, ದೂರು ನೀಡುವಾಗ ಆಕೆ ನೀಡಿದ ಹೇಳಿಕೆಗೂ ಹಾಗೂ ತನಿಖೆ ನಡೆಸುವಾಗ ನೀಡಿರುವ ಹೇಳಿಕೆಗಳು ವಿಭಿನ್ನವಾಗಿವೆ ಎಂದು ತಿಳಿದು ಬಂದಿದೆ. ಈಗಾಗಲೇ ಪ್ರಕರಣ ಸಂಬಂಧ ಹಲವು ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಪ್ರಕರಣದಲ್ಲಿ ಓರ್ವ ಮಾಜಿ ಶಾಸಕನನ್ನು ಸಾಕ್ಷಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅತ್ಯಾಚಾರ ಆರೋಪ ಸಂಬಂಧ ಎಸ್ಐಟಿ ಸಂತ್ರಸ್ತೆಯನ್ನ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ವೈದ್ಯರು ನೀಡಿದ ವರದಿಯನ್ನು ಸಹ ಮಧ್ಯಂತರ ವರದಿಯ ಜೊತೆ ಸಲ್ಲಿಕೆ ಮಾಡಲಾಗಿದೆ. ವೈದ್ಯರು ನೀಡಿದ ವರದಿಯಲ್ಲಿ ಅತ್ಯಾಚಾರ ಮಾಡಿರುವ ಯಾವ ಕುರುಹುಗಳಿಲ್ಲ.

ದೈಹಿಕವಾಗಿಯೂ ಯಾವುದೇ ಕುರುಹುಗಳು ಕಾಣಿಸಿಲ್ಲ. ಇದೇ ವರದಿಯನ್ನ ಆಧಾರವಾಗಿಟ್ಟುಕೊಂಡು ಮತ್ತಷ್ಟು ವಿಚಾರಣೆ ನಡೆಸಿದ ಅಧಿಕಾರಿಗಳು ಈ ಹಿಂದೆ ವ್ಯಕ್ತಿಯೋರ್ವನ ಜೊತೆ ದೈಹಿಕ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಪರಿಚಿತನನ್ನ ಕರೆಯಿಸಿ ವಿಚಾರಣೆ ನಡೆಸಿ ಎಸ್ಐಟಿ ಹೇಳಿಕೆ‌ ದಾಖಲಿಸಿದೆ.

ಎಸ್ಐಟಿಗೆ ವಿಚಾರಣೆ ವೇಳೆ ಹನಿಟ್ರ್ಯಾಪ್ ಮಾಡಲು ಪೂರ್ವನಿಯೋಜಿತವಾಗಿ ಪ್ಲ್ಯಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಹ್ಯಾಕರ್ ಸ್ನೇಹಿತೆಯನ್ನ ವಿಚಾರಣೆ ನಡೆಸಿರುವ ಎಸ್ಐಟಿ, ಆಕೆಗೆ ಹ್ಯಾಕರ್​​ ಒಂದು ದೊಡ್ಡ ಅಪರೇಷನ್ ಮಾಡುತ್ತಿದ್ದೇನೆ. ಹೀಗಾಗಿ, ನ್ಯೂಡ್ ಫೋಟೋಸ್ ಕಳಿಸುವಂತೆ‌ ಕೇಳಿದ್ದನಂತೆ. ಹ್ಯಾಕರ್​ಗೆ ಗೆಳತಿ ಬೆಂಬಲಿಸದೆ ಇರುವುದು ವರದಿಯಲ್ಲಿ ಉಲ್ಲೇಖವಾಗಿದೆ‌ ಎನ್ನಲಾಗಿದೆ.ಟ್ರ್ಯಾಪ್ ಮಾಡಲೆಂದೇ ಎಸ್ಪಿ ರೋಡಿನಲ್ಲಿ ಕ್ಯಾಮೆರಾ ಸಹ ಖರೀದಿ ಮಾಡಿದ್ದರು. ಲಾಕ್‌ಡೌನ್ ಇದ್ದ ಹಿನ್ನೆಲೆ ಕರೆ ಮಾಡಿ ಕ್ಯಾಮೆರಾ ಬೇಕೆಂದು ಕೇಳಿದ್ದರಿಂದ ಮೈಸೂರು ಬ್ಯಾಂಕ್ ಬಳಿ ಬಂದು ಅಂಗಡಿ ಮಾಲೀಕ ನೀಡಿದ್ದಾನೆ. ಆನ್‌ಲೈನ್ ಮೂಲಕ ಕ್ಯಾಮೆರಾಗೆ ಪೇಮೆಂಟ್ ಸಹ ಮಾಡಲಾಗಿದೆ. ‌ಪೇಮೆಂಟ್ ಮಾಡಿದ್ದಕ್ಕೆ ಎಸ್ಐಟಿ ದಾಖಲಾತಿಗಳನ್ನ ಕಲೆ ಹಾಕಿದೆ.