ಮನೆ ರಾಜಕೀಯ ಕುತೂಹಲಕ್ಕೆ ಕಾರಣವಾದ ಡಿಕೆಶಿ- ಸಚಿವ ಆನಂದ್ ಸಿಂಗ್ ಭೇಟಿ

ಕುತೂಹಲಕ್ಕೆ ಕಾರಣವಾದ ಡಿಕೆಶಿ- ಸಚಿವ ಆನಂದ್ ಸಿಂಗ್ ಭೇಟಿ

0

ಬೆಂಗಳೂರು:  ಕೆಪಿಸಿಸಿ  ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹಾಗೂ ಸಚಿವ ಆನಂದ್‌ ಸಿಂಗ್‌ ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಬಿಜೆಪಿಯ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು  ಹೇಳಿಕೆ ನೀಡಿದ್ದರು. ಇದೀಗ ಆನಂದ್ ಸಿಂಗ್ ಅವರು ಡಿ.ಕೆ ಶಿವಕುಮಾರ್ ಅವರನ್ನು ಮನೆಯಲ್ಲಿ ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ.

ಈ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಆನಂದ್ ಸಿಂಗ್,  ಇದೊಂದು ಸೌಜ್ಯನ್ಯಯುತ ಭೇಟಿ ಎಂದಿದ್ದಾರೆ. ಇನ್ನು ಡಿ.ಕೆ ಶಿವಕುಮಾರ್ ಮಾತನಾಡಿ, ಆನಂದ್ ಸಿಂಗ್ ಭೇಟಿಗೂ ರಾಜಕೀಯಕ್ಕೂ ಸಂಬಂಧಿವಿಲ್ಲ. ಮನೆಯಲ್ಲಿ ನೇರವಾಗಿ ಬಂದು ರಾಜಕೀಯ ಮಾತನಾಡಲ್ಲ.  ರಾಜಕೀಯ ಮಾತನಾಡೋದಾದ್ರೆ ರೆಸಾರ್ಟ್ ಹೋಟೆಲ್ ಗೆ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಲೇಖನದಿ. ಮಾದೇಗೌಡರ ಬಗ್ಗೆ ಅವಹೇಳನ ಮಾಡಿರುವ ಶಿವರಾಮೇಗೌಡರನ್ನು ಪಕ್ಷದಿಂದ ಹೊರಹಾಕಲು ಹೆಚ್​​ಡಿಕೆ ಸೂಚನೆ
ಮುಂದಿನ ಲೇಖನಸಿಡಿ ಪ್ರಕರಣ : ಎಸ್ಐಟಿಯಿಂದ ಹೈಕೋರ್ಟ್ ಗೆ ಮಧ್ಯಂತರ ವರದಿ ಸಲ್ಲಿಕೆ