ನವದೆಹಲಿ(New delhi): ಕರ್ನಾಟಕದ ಬೆಟ್ಟ ಕುರುಬ ಸಮುದಾಯದ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಬೆಟ್ಟ ಕುರುಬ ಜಾತಿ ಸೇರಿದಂತೆ 5 ರಾಜ್ಯಗಳ ವಿವಿಧ ಜಾತಿಗಳನ್ನು ಎಸ್ಟಿಗೆ ಸೇರಿಸಲು ಒಪ್ಪಿಗೆ ಸೂಚಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕುರುಬ ಸಮುದಾಯದ ಒಳ ಪಂಗಡವಾದ ಹಿಂದುಳಿದ ಬೆಟ್ಟ ಕುರುಬ ಜಾತಿಯನ್ನು ಎಸ್ಟಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೆ ಅನುಮೋದನೆ ನೀಡಲಾಯಿತು.
ಇದಲ್ಲದೇ, ಛತ್ತೀಸ್ಗಢ, ಹಿಮಾಚಲಪ್ರದೇಶ, ತಮಿಳುನಾಡು, ಉತ್ತರಪ್ರದೇಶದ ಜಾತಿಗಳಿಗೂ ಎಸ್ಟಿ ಪಟ್ಟಿಗೆ ಸೇರಿಸಲು ಸಂಪುಟ ಅನುಮತಿ ನೀಡಿದೆ. ಈಗಾಗಲೇ ಕುರುಬ ಸಮುದಾಯದ ಜೇನು ಕುರುಬ, ಕಾಡು ಕುರುಬ ಜಾತಿಗಳು ಎಸ್ಟಿ ಪಟ್ಟಿಯಲ್ಲಿವೆ.