ಶ್ರೀರಂಗಪಟ್ಟಣ: ಉಪತಹಶೀಲ್ದಾರ್ ರೊಬ್ಬರು ವೃದ್ಯಾಪ್ಯ, ವಿಧವಾ ವೇತನ, ವಿಕಲಚೇತನರ ಪ್ರಮಾಣ ಪತ್ರ ನೀಡಲು ಹಣದ ಬೇಡಿಕೆ ಇಡುತ್ತಿದ್ದು ಅವರನ್ನ ಬದಲಾವಣೆ ಮಾಡುವಂತೆ ದರಸಗುಪ್ಪೆ ಗ್ರಾಮದ ಮಂಜುನಾಥ್ ಎಂಬುವವರು ತಾಲೂಕು ಆಡಳಿತಕ್ಕೆ ದೂರು ನೀಡಿದ್ದಾರೆ.
ತಾಲೂಕಿನ ಕಿರಂಗೂರು ನಾಡಕಚೇರಿಯಲ್ಲಿರುವ ಉಪತಹಸೀಲ್ದಾರ್ ಸುಧಾಮಣಿ ಎಂಬುವವರು ವಿಧವಾ ವೇತನ (ಓಎಪಿ) (ಪಿಹೆಚ್‌ಪಿ) ಸೇರಿದಂತೆ ಇತರೆ ಪ್ರಮಾಣ ಪತ್ರ ಜೊತೆಗೆ ಕೈ ಬರಹದ ಆರ್‌ಟಿಸಿ, ಎಂಆರ್‌ಗಳನ್ನ ನೀಡಲು ಹಣದ ಬೇಡಿಕೆ ಇಡುತ್ತಿದ್ದಾರೆ.
ಅಲ್ಲದೆ ನಾಡಕಚೇರಿಗೆ ಬರುವ ಫಲಾನುಭವಿಗಳಿಗೆ ಹಣಕ್ಕಾಗಿ ಕಿರುಕುಳ ನೀಡುವುದು, ಜನಸಾಮಾನ್ಯರನ್ನು ಅಲೆಸುವುದು ಹಾಗೂ ಸಾರ್ವಜನಿಕರ ಜೊತೆ ಸರಿಯಾದ ನಡವಳಿಕೆ ತೋರುತ್ತಿಲ್ಲ. ಸಾರ್ವಜನಿಕ ಹಿತದೃಷ್ಠಿಯಿಂದ ಇವರನ್ನು ಬೇರೆಡೆ ವರ್ಗಾವಣೆ ಮಾಡಿ, ಬೇರೆಯವರನ್ನ ಆ ಸ್ಥಾನಕ್ಕೆ ನೇಮಕ ಮಾಡುವಂತೆ ತಾಲೂಕು ಆಡಳಿತಕ್ಕೆ ಮಂಜುನಾಥ್ ದೂರು ನೀಡಿ, ಮನವಿ ಮಾಡಿದ್ದಾರೆ.