ಮನೆ ರಾಜಕೀಯ ಕೇಂದ್ರ ಸರಕಾರ ಅಕ್ಕಿ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ: ನಳಿನ್ ಕುಮಾರ್ ಕಟೀಲ್

ಕೇಂದ್ರ ಸರಕಾರ ಅಕ್ಕಿ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ: ನಳಿನ್ ಕುಮಾರ್ ಕಟೀಲ್

0

ಕಲಬುರಗಿ: ರಾಜ್ಯದ ಜನತೆಯ ವಿಚಾರದಲ್ಲಿ, ಕನ್ನಡಿಗರ ಅಸ್ಮಿತೆ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ. ಕೇಂದ್ರ ಸರಕಾರ ಅಕ್ಕಿ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಿಎಂ ಸಿದ್ರಾಮಣ್ಣಾ ಅವರೇ ಹೇಳಿದ್ದಾರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

Join Our Whatsapp Group

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಅಕ್ಕಿ ನೀಡುವ ನಿಟ್ಟಿನಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಎಲ್ಲ ರಾಜ್ಯಗಳಿಗೆ ಕೊಟ್ಟಂತೆ ಕರ್ನಾಟಕಕ್ಕೂ ಕೊಡ್ತಾ ಇದ್ದೇವೆ. ಈಗ ನಾವು ಕೇಳ್ತಾ ಇರೋದು ಕೇಂದ್ರ ಕೊಡುವ 5 ಕೆಜೆ, ಚುನಾವಣೆ ಗ್ಯಾರಂಟಿಯಲ್ಲಿ ಘೋಷಣೆ ಮಾಡಿರುವಂತೆ 10 ಕೆಜಿ ಸೇರಿದಂತೆ ಜನತೆಗೆ ಒಟ್ಟು 15 ಕೆಜಿ ಕೊಡಿ ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.

ಎಫ್ ಸಿ ಐ ಅಧಿಕಾರಿಗಳ ಬದಲು ಕೇಂದ್ರ ಆಹಾರ ಮಂತ್ರಿಗಳ ಬಳಿಯಲ್ಲಿ ಮನವಿ ಮಾಡಬೇಕಿತ್ತು. ಅದು ಬಿಟ್ಟು ಮಾಧ್ಯಮ ಮುಂದೆ ಹೇಳುಕೊಂಡು ರಾಜ್ಯದಲ್ಲಿ ಪ್ರತಿಭಟನೆ ಮಾಡಿದರೆ ಹೇಗೆ? ಯಾವ ಆಧಾರದಲ್ಲಿ ಗ್ಯಾರಂಟಿ ಘೋಷಣೆ ಮಾಡಿದಿರಿ? ಹಿಂದೆಯೂ ನೀವು ಕೇಂದ್ರ ಅಕ್ಕಿಯ ಜತೆ ಎರಡು ಕೆಜಿ ಕೊಟ್ಟು ನೀವು ಪ್ರಚಾರ ತಗೊಂಡ್ರಿ. ಈಗ ಪುನಃ ಹತ್ತು ಕೆಜಿ ಕೊಡ್ತಿನಿ ಅಂತಾ ಹೇಳಿದ್ದಿರಿ ಕೊಡ್ರಿ… ಇದರಲ್ಲಿ ಕೇಂದ್ರ ಸರಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಅಗತ್ಯವಿಲ್ಲ ಎಂದರು.

ಈಗ ಸಿಎಂ ಸಿದ್ಧರಾಮಯ್ಯನವರು ಕೇಂದ್ರ ಮಂತ್ರಿಗಳನ್ನು ಭೆಟಿ ಮಾಡಿದ್ದಾರೆ. ಸಕಾರಾತ್ಮಕ ವಾಗಿ ಸ್ಪಂದನೆ ಸಿಕ್ಕಿದೆ ಎಂದಿದ್ದಾರಲ್ಲ ಎಂದರು.

ಮೋದಿ ನೇತೃತ್ವದ ಸರಕಾರ 9 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮನೆ ಮನೆಗೆ ಮುಖಂಡರು ಹೋಗಿ ಫಲಾನುಭವಿಗಳಿಗೆ ದೊರಕದ ಯೋಜನೆ ಫಲ ದೊರಕುವಂತೆ ಮಾಡಲಾಗುವುದು ಎಂದರು.

ಮಾಲಿಕಯ್ಯ ಗುತ್ತೇದಾರ, ಶಾಸಕ ಬಸವರಾಜ ಮತ್ತಿಮಡು, ಅಮರನಾಥ ಪಾಟೀಲ ಮಹಾಗಾಂವ್, ಶರಣಪ್ಪ ತಳವಾರ ಇತರರು ಇದ್ದರು.