ಮನೆ ರಾಜ್ಯ ರಾಜ್ಯದಲ್ಲಿ 1,053 ಕೋವಿಡ್‌ ಪ್ರಕರಣಗಳು ದೃಢ: 6,454 ಕ್ಕೇರಿದ ಸಕ್ರಿಯ ಪ್ರಕರಣ

ರಾಜ್ಯದಲ್ಲಿ 1,053 ಕೋವಿಡ್‌ ಪ್ರಕರಣಗಳು ದೃಢ: 6,454 ಕ್ಕೇರಿದ ಸಕ್ರಿಯ ಪ್ರಕರಣ

0

ಬೆಂಗಳೂರು (Bengaluru): ರಾಜ್ಯದಲ್ಲಿ ಕೋವಿಡ್ ಏರಿಳಿತ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 1,053 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,76,053ಕ್ಕೆ ಏರಿಕೆಯಾಗಿದೆ.

1,080 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಇದುವರೆಗೂ ಗುಣಮುಖರಾದವರ ಸಂಖ್ಯೆ 39,29,477ಕ್ಕೆ ತಲುಪಿದೆ. ರಾಜ್ಯದಲ್ಲಿ ಸದ್ಯ 6,454 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 966 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ದಕ್ಷಿಣ ಕನ್ನಡದಲ್ಲಿ 15 ಮತ್ತು ಮೈಸೂರಿನಲ್ಲಿ 10 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಂದು ರಾಜ್ಯದಲ್ಲಿ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.

27,086 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ದೈನಂದಿನ ಕೋವಿಡ್ ದೃಢ ಪ್ರಮಾಣ ಶೇ.3.88ರಷ್ಟಿದ್ದು, ವಾರದ ಕೋವಿಡ್ ದೃಢ ಪ್ರಮಾಣ ಶೇ.3.84ರಷ್ಟಿದೆ. ಮರಣ ಪ್ರಮಾಣ ಶೂನ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹಿಂದಿನ ಲೇಖನಲಕ್ಷ್ಮೀ ದೇವಿಯನ್ನು ಈ ಮಂತ್ರಗಳಿಂದ ಆರಾಧಿಸಿ
ಮುಂದಿನ ಲೇಖನಮಕ್ಕಳು ಯಾವ ವಯಸ್ಸಿನಲ್ಲಿ ಯೋಗಾಸನ ಆರಂಭಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ