ಮನೆ ರಾಜ್ಯ ಹಾವೇರಿ, ಗದಗಕ್ಕೆ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ – ಕೃಷಿ ಯೋಜನೆಗೆ ಜಿಲ್ಲೆಗಳ ಸೇರ್ಪಡೆ..!

ಹಾವೇರಿ, ಗದಗಕ್ಕೆ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ – ಕೃಷಿ ಯೋಜನೆಗೆ ಜಿಲ್ಲೆಗಳ ಸೇರ್ಪಡೆ..!

0

ಹಾವೇರಿ/ಗದಗ : ದೇಶದ 100 ಜಿಲ್ಲೆಗಳಲ್ಲಿ ಜಾರಿಯಾಗುತ್ತಿರುವ ಪ್ರಧಾನ ಮಂತ್ರಿ ಧನ್‌ ಧಾನ್ಯ ಕೃಷಿ ಯೋಜನೆಗೆ ಹಾವೇರಿ ಮತ್ತು ಗದಗ ಜಿಲ್ಲೆಗಳು ಸೇರ್ಪಡೆಗೊಂಡಿವೆ. ಉಭಯ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ ನೀಡಿದೆ.

ಕೃಷಿ ಉತ್ಪಾದನೆ ಹೆಚ್ಚಳ, ನೀರಾವರಿ ಸೌಲಭ್ಯ, ಅಲ್ಪಾವಧಿ ಹಾಗೂ ದೀರ್ಘಾವಧಿ ಹಣಕಾಸು ನೆರವು ನೀಡುವ ಯೋಜನೆ ಇದಾಗಿದೆ. ಪಂಚಾಯತ್‌ ಮತ್ತು ಬ್ಲಾಕ್‌ ಕೇಂದ್ರಗಳಲ್ಲಿ ದಾಸ್ತಾನು ಘಟಕಗಳ ನಿರ್ಮಾಣವಾಗಲಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕೃಷಿ ವಿದ್ಯಾಲಯ ಕೇಂದ್ರ, ಹನುಮನಹಟ್ಟಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯ ಧನ ದಾನ್ಯ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.