ಮನೆ ಶಿಕ್ಷಣ ಸಿಇಟಿ: ಮೇ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟ

ಸಿಇಟಿ: ಮೇ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟ

0

ಬೆಂಗಳೂರು: ಸಿಇಟಿಯಲ್ಲಿನ ಪಠ್ಯಕ್ಕೆ ಹೊರತಾದ ಪ್ರಶ್ನೆಗಳ ಗೊಂದಲಕ್ಕೆ ತೆರೆ ಎಳೆದಿರುವ ಉನ್ನತ ಶಿಕ್ಷಣ ಇಲಾಖೆ, ತ್ವರಿತವಾಗಿ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿ ಮೇ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಸೂಚಿಸಿದೆ.

Join Our Whatsapp Group

ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ತಲಾ 60 ಅಂಕಗಳಿಗೆ ಇದೇ ಏ.18 ಮತ್ತು 19ರಂದು ಪರೀಕ್ಷೆ ನಡೆಸಲಾಗಿತ್ತು. ನಾಲ್ಕು ವಿಷಯಗಳ ‍ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ಕೆ ಹೊರತಾದ 50 ಪ್ರಶ್ನೆಗಳು ಸೇರಿವೆ ಎನ್ನುವ ಕುರಿತು ತಜ್ಞರ ಸಮಿತಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದವು. ಈ 50 ಪ್ರಶ್ನೆಗಳನ್ನು ಹೊರತುಪಡಿಸಿ ಉಳಿದ ಪ್ರಶ್ನೆಗಳನ್ನು ಮಾತ್ರ ಸಿಇಟಿ ಫಲಿತಾಂಶಕ್ಕೆ ಪರಿಗಣಿಸಲು ಆದೇಶಿಸಿ ಭಾನುವಾರ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.

ಪರೀಕ್ಷೆ ನಡೆಸಿದ್ದ ಒಟ್ಟು 240 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳನ್ನು ಕೈಬಿಟ್ಟಿರುವ ಕಾರಣ 190 ಪ್ರಶ್ನೆಗಳಷ್ಟೇ ಉಳಿಯುತ್ತವೆ. ಅವುಗಳಲ್ಲಿ ಎರಡು ಪ್ರಶ್ನೆಗಳು ಗೊಂದಲದಿಂದ ಕೂಡಿದ್ದು, ಸಮರ್ಪಕವಾಗಿಲ್ಲ ಎನ್ನುವ ತಜ್ಞರ ಸಲಹೆ ಆಧಾರದ ಮೇಲೆ ಎರಡು ಕೃಪಾಂಕ ನೀಡಲು ನಿರ್ಧರಿಸಲಾಗಿದೆ. ಉಳಿದ 188 ಪ್ರಶ್ನೆಗಳನ್ನು ಮೌಲ್ಯಮಾಪನ ಮಾಡಿ, ಒಟ್ಟು 190 ಅಂಕಗಳಿಗೆ ಅಂತಿಮ ಫಲಿತಾಂಶ ಪ್ರಟಿಸಬೇಕು ಎಂದು ಸೂಚಿಸಲಾಗಿದೆ.

ಹಿಂದಿನ ಲೇಖನಮೊಬೈಲ್ ಅಂಗಡಿ ಮಳಿಗೆಯಲ್ಲಿ ಅಗ್ನಿ ಅವಘಡ: ವಸ್ತುಗಳು ಭಸ್ಮ
ಮುಂದಿನ ಲೇಖನಹುಬ್ಬಳ್ಳಿಯಲ್ಲಿ ನಾಳೆ ಅಮಿತ್ ಶಾ ತಮ್ಮ ಪರ ಪ್ರಚಾರ: ಪ್ರಲ್ಹಾದ್ ಜೋಶಿ