ಮನೆ ಮನೆ ಮದ್ದು ಚಕ್ರ ಮುನಿ

ಚಕ್ರ ಮುನಿ

0

Join Our Whatsapp Group

1. ಜೀವಶತ್ವದ ಕೊರತೆ ಪೋಷಕಾಂಶಗಳ ಕೊರತೆ ಅದರಲ್ಲಿಯೂ ಜೀವ ಸತ್ವ ಎ,ಬಿ,ಸಿ,ಗಳ ನ್ಯೂನತೆಯಿಂದ ಬಳಲುವವರು ಪ್ರತಿದಿನ ಚಕ್ರಮುನಿ ಸೊಪ್ಪನ್ನು ಹಸಿಯಾಗಿ ತಿನ್ನುವುದು ಉತ್ತಮವಾದದು, ಎರಡು ಚಮಚೆ ಚಕ್ರಮುನಿ ಸೊಪ್ಪಿನ ರಸಕ್ಕೆ ಒಂದು ಚಮಚೆ ಜೇನು ಬೆರೆಸಿ ಬೆಳಿಗ್ಗೆ ಖಾಲಿಹೊಟ್ಟೆಗೆ ಕುಡಿಯುವುದರಿಂದ ಉತ್ತಮ ಪರಿಣಾಮ ಉಂಟಾಗುತ್ತದೆ.

2. ಮಲಬದ್ಧತೆಯಿಂದ ಬಳಲುವವರು ಆಹಾರದಲ್ಲಿ ಚಕ್ರಮುನಿ ಸೊಪ್ಪನ್ನು ಹೆಚ್ಚು ಬಳಸಬೇಕು.

3. ಕಣ್ಣಿನ ಕಾಯಿಲೆಗಳಲ್ಲಿ ಚಕ್ರಮುನಿ ಎಳೆಯ ರಸವನ್ನು ದುಂಡುಮಲ್ಲಿಗೆ ಎಲೆಯ ರಸ ಮತ್ತು ದಾಳಿಂಬೆ ಬೇರುಗಳೊಂದಿಗೆ ಸೇರಿಸಿ ಜಜ್ಜಿ ಹಿಂಡಿ ತೆಗೆದ ರಸವನ್ನು ತೆಳುವಾದ ಸ್ವಚ್ಛವಾದ ಬಟ್ಟೆಯಲ್ಲಿ ಶೋಧಿಸಿ, ಈ ರಸವನ್ನು ಕಣ್ಣು ಕೆಂಪಗಾಗಿದ್ದಲ್ಲಿ ಎರಡು ಹನಿ ಕಣ್ಣಿಗೆ ಹಾಕುವುದರಿಂದ ಉರಿ, ನೋವು ಶಮನವಾಗುತ್ತದೆ.

 ಅಡಿಗೆ  :

 ಪಲ್ಯ  : ಚಕ್ರಮುನಿ ಸೊಪ್ಪನ್ನು ಸ್ವಚ್ಛವಾಗಿ ನೀರಿನಲ್ಲಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಒಗ್ಗರಣೆಗೆ ಹಾಕಿ ಬಾಡಿಸಿ. ಅದಕ್ಕೆ ಉಪ್ಪು, ತೆಂಗಿನ ತುರಿ ಬೆರೆಸಿ ಒಣಮೆಣಸಿನಕಾಯಿ ಪುಡಿ ಸ್ವಪ ಉದುರಿಸಬಹುದು.

 ತೊವ್ವೆ : ತೊಗರಿಬೇಳೆಯನ್ನು ಬೇಯಿಸಿ ನಂತರ ಅದಕ್ಕೆ ಬೇಯಿಸಿದ ಚಕ್ರಮುನಿ ಸೊಪ್ಪ, ಹಸಿಮೆಣಸಿನಕಾಯಿ ಬೆರೆಸಿ ಒಗ್ಗರಣೆ ಕೊಟ್ಟು ತೊವ್ವೆ ತಯಾರಿಸಬಹುದು. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು

. ಮೆಂತ್ಯ, ದಂಟಿನ ಸೊಪ್ಪು,ಪಾಲಕ್ ಮುಂತಾದವುಗಳನ್ನು ಚಕ್ರಮುನಿ ಸೊಪ್ಪನ್ನು ಬೆರೆಸಿ ಪಲ್ಯ ತಯಾರಿಸಬಹುದು. ಹಾಗೆಯೇ ಬೇಳೆಯೊಂದಿಗೆ ಇತರೆ ಸೊಪ್ಪು ಬೆರೆಸಿಯು  ಪಲ್ಯ ತಯಾರಿಸಿದಲ್ಲಿ ರುಚಿಕರ ಮತ್ತು ಆರೋಗ್ಯಕರ

 ಸಾರು : ಬೇಯಿಸಿದ ತೊಗರಿಬೇಳೆ, ಹುಣಸೆ ರಸ ಇಲ್ಲವೇ ಟಮೊಟೊ, ಚಕ್ರಮುನಿ ಸೊಪ್ಪು,ಸಾರಿನ ಪುಡಿ, ಉಪ್ಪು ಬೆರೆಸಿ ಸಾರು ತಯಾರಿಸಿ ಹಿಂಗಿನ ಒಗ್ಗರಣೆ ಕೊಟ್ಟಲ್ಲಿ ರುಚಿಕರ ಸಾರು ಸಿದ್ದ.

 ಇಡ್ಲಿ ದೋಸೆ ರೊಟ್ಟಿ: ತಯಾರಿಸುವ* ಹಿಟ್ಟಿನಲ್ಲಿ ಚಕ್ರಮುನಿ ಸೊಪ್ಪನ್ನು ಬೆರೆಸಿ ತಯಾರಿಸಬಹುದು.

 ಪಾನೀಯ : ಚಕ್ರಮುನಿ ಸೊಪ್ಪಿನ ರಸ ತೆಗೆದು ಬೆಲ್ಲ ಅಥವಾ ಸಕ್ಕರೆಯೊಂದಿಗೆ ಬೆರೆಸಿ.ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ನೀರು ಬೆರೆಸಿ ಪಾನಕ ತಯಾರಿಸಬಹುದು.

 ಚಟ್ನಿ :  ಒಣಮೆಣಸಿನಕಾಯಿ ಕಡಲೆ ಬೇಳೆ,ಉದ್ದಿನ ಬೇಳೆ, ಜೀರಿಗೆಯನ್ನು ಹುರಿದು ಪುಡಿ ಮಾಡಿಟ್ಟುಕೊಂಡು,ಚಕ್ರಮುನಿ ಸೊಪ್ಪನ್ನು ಎಣ್ಣೆಯಲ್ಲಿ ಬಾಡಿಸಿ, ಹುಣಸೆರಸ, ತೆಂಗಿನ ತುರಿ,ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು ಬೇಕೆನಿಸಿದ್ದಲ್ಲಿ ಬೆಲ್ಲ ಬೆಳೆಸಬಹುದು.

 ತಂಬುಳಿ : ಚಕ್ರಮುನಿ ಸೊಪ್ಪನ್ನು ಸ್ವಲ್ಪ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಹುರಿದುಕೊಳ್ಳಬೇಕು. ತೆಂಗಿನ ತುರಿಯೊಂದಿಗೆ ರುಬ್ಬಿಕೊಂಡ ಮೊಸರನ್ನು ಇಲ್ಲವೇ ಮಜ್ಜಿಗೆಯಲ್ಲಿ ಬೆರೆಸಬೇಕು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಬೇಕೆನಿಸಿದ್ದಲ್ಲಿ ಒಗ್ಗರಣೆ ಕೊಡಬಹುದು.

ಶಂಕರ ಪೋಳೇ :  ಮೈದಾಹಿಟ್ಟು ಅಥವಾ ಗೋಧಿಹಿಟ್ಟು ಒಂದು ಬಟ್ಟಲು ತೊಳೆದು ಸ್ವಚ್ಛಗೊಳಿಸಿ ಹೆಚ್ಚಿದ ಚಕ್ರಮುನಿ ಸೊಪ್ಪು ಒಂದು ಬಟ್ಟಲು ಹಸಿಮೆಣಸಿನಕಾಯಿ 4 ತುಪ್ಪ 4 ಚಮಚೆ ಉಪ್ಪು ರುಚಿಗೆ ತಕ್ಕಷ್ಟು ಕರಿಯಲು ಎಣ್ಣೆ.

          ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹಚ್ಚಿಕೊಳ್ಳಬೇಕು. ಮೈದಾ ಅಥವಾ ಗೋಧಿ ಹಿಟ್ಟಿಗೆ ತುಪ್ಪ, ಚಕ್ರಮುನಿ ಸೊಪ್ಪು, ಹಸಿಮೆಣಸಿನಕಾಯಿ ಉಪ್ಪು ಎಲ್ಲವನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಳಿಸಿಕೊಳ್ಳಬೇಕು. ನಂತರ ಉಂಡೆಗಳನ್ನಾಗಿ ಮಾಡಿಕೊಂಡು ಲಟ್ಟಿಸಲ್ಬೇಕು ಹಾಳೆ ಸ್ವಲ್ಪ ದಪ್ಪಗಿರಬೇಕು ಚೌಕಕಾರ, ತ್ರಿಕೋನಾಕಾರ, ವಜ್ರಾಕೃತಿ ಹೀಗೆ ನಮಗೆ ಬೇಕೆನಿಸಿದ ಆಕಾರದಲ್ಲಿ ಕತ್ತರಿಸಿಕೊಂಡು ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಅರಿದ ನಂತರ ಡಬ್ಬಿಯಲ್ಲಿ ತುಂಬಿಡಬೇಕು ಮಕ್ಕಳಿಗೆ ಸಂಜೆ ಹೊತ್ತು ಶಾಲೆಯಿಂದ ಬಂದ ತಕ್ಷಣ ತಿನ್ನಲು ಕೊಡಲು ಉತ್ತಮ ತಿಂಡಿ.

 ವಡೆ : ಒಂದು 100 ಗ್ರಾಂ ಚಕ್ರಮುನಿ ಸೊಪ್ಪು, ಒಂದು ಬಟ್ಟಲು ಸಣ್ಣ ರವೆಲ ಒಂದು ಬಟ್ಟಲು ಕಡಲೆಹಿಟ್ಟು, ನಾಲ್ಕು ಚಮಚೆ  ಜೀರಿಗೆ, ಒಂದು ಚಮಚ ಮೆಣಸಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು ಎಣ್ಣೆ

     ಕಡಲೆ ಹಿಟ್ಟು,ರವೆ, ಮೆಣಸಿನ ಹುಡಿ, ಉಪ್ಪು, ನೀರು, ಸೇರಿಸಿ ಹದವಾಗಿ ಬೆರೆಸಿಕೊಳ್ಳಬೇಕು.ಅದಕ್ಕೆ ತೊಳೆದು ಸ್ವಚ್ಛಗೊಳಿಸಿ ಸಣ್ಣಗೆ ಹಚ್ಚಿಟ್ಟು ಕೊಂಡಿರುವ ಚಕ್ರಮುನಿ ಸೊಪ್ಪನ್ನು ಬೆರೆಸಿ ತಟ್ಟಿ ಎಣ್ಣೆಯಲ್ಲಿ ಹಾಕಿ ಕರೆಯಬೇಕು.

        ವಡೆ  : ಎರಡು ಕಡಲೆ ಬೆಳೆಯನ್ನು ನೆನೆಸಿಟ್ಟು ಒಂದು ಗಂಟೆಯ ನಂತರ ತರಿತರಿಯಾಗಿ ರುಬ್ಬಿಕೊಂಡು ಅದಕ್ಕೆ ಉಪ್ಪು ಜೀರಿಗೆ, ಸಣ್ಣಗೆ ಹೆಚ್ಚಿದ ಚಕ್ರಮುನಿ ಸೊಪ್ಪು, ಹಸಿಮೆಣಸಿನಕಾಯಿ ಉಪ್ಪು ಬೆರೆಸಿ ತಟ್ಟಿ ಎಣ್ಣೆಯಲ್ಲಿ ಹಾಕಿ ಕರಿಯಬೇಕು ರುಚಿಕರ ಒಡೆ ತಯಾರು