ನವದೆಹಲಿ: ಚಲ್ಲಾ ಶ್ರೀನಿವಾಸಲು ಶೆಟ್ಟಿ (ಸಿ.ಎಸ್.ಶೆಟ್ಟಿ) ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶಿಸಿದೆ.
ಎಸ್‌ಬಿಐನ ಹಾಲಿ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಅವರ ಅವಧಿ ಇದೇ ಆಗಸ್ಟ್ 28ಕ್ಕೆ ಕೊನೆಗೊಳ್ಳಲಿದೆ.
ಸಿ.ಎಸ್.ಶೆಟ್ಟಿ ಅವರ ಅಧಿಕಾರಾವಧಿ ಮೂರು ವರ್ಷ ಇರಲಿದೆ. ಪ್ರಸ್ತುತ ಅವರು ಎಸ್‌ಬಿಐನಲ್ಲಿ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
1988 ರಲ್ಲಿ ಎಸ್‌ಬಿಐ ಸೇರಿದ್ದ ಶೆಟ್ಟಿ ಅವರು ಬ್ಯಾಂಕ್ ಡಿಜಿಟಲೀಕರಣ ಕುರಿತಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಎಸ್‌ಬಿಐ ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕ್ ಆಗಿದೆ.