ಮನೆ ಅಪರಾಧ ಚಾಮರಾಜನಗರ: ಕೆನರಾ ಬ್ಯಾಂಕ್’ನಲ್ಲಿ 5 ಲಕ್ಷ ರೂ. ಕಳವು

ಚಾಮರಾಜನಗರ: ಕೆನರಾ ಬ್ಯಾಂಕ್’ನಲ್ಲಿ 5 ಲಕ್ಷ ರೂ. ಕಳವು

0

ಚಾಮರಾಜನಗರ: ನಗರಾ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಯನ್ನು ವಂಚಿಸಿ ನಗದು ಕೌಂಟರ್ ನಲ್ಲಿ ಇಟ್ಟಿದ್ದ 5 ಲಕ್ಷ ರೂ. ಕಳವು ಮಾಡಲಾಗಿದೆ.

ಬುಧವಾರ ಬೆಳಗ್ಗೆ 11.10 ಗಂಟೆ ಸಮಯದಲ್ಲಿ ಕಳ್ಳರು ತಮ್ಮ ಚಾಣಾಕ್ಷತನ ತೋರಿ ನಗದು ಕೌಂಟರ್ ಗೆ ತೆರಳಿ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಒಬ್ಬ ಕಿಡಿಗೇಡಿ ಕೌಂಟರ್ ಒಳಗೆ ನುಗಿದ್ದು, ಇವನಿಗೆ ಮೂವರು ಸಹಕರಿಸಿದ್ದಾರೆ.

ನಾಲ್ವರು ಬ್ಯಾಂಕ್ ಗೆ ಬಂದಿದ್ದು, ಇಬ್ಬರು ಸಿಬ್ಬಂದಿ ಜೊತೆಯೇ ಮಾತನಾಡುವಂತೆ ನಟಿಸಿದ್ದಾರೆ. ಒಬ್ಬ ಎಲ್ಲರ ಬಗ್ಗೆ ಸನ್ನೆ ಮಾಡುತ್ತಿದ್ದರೆ, ಮತ್ತೊರ್ವ ಕೌಂಟರ್ ಒಳಗಡೆಗೆ ತೆರಳಿ 5 ಲಕ್ಷ ರೂ. ಬಂಡಲ್ ನ್ನು ತೆಗೆದುಕೊಂಡು ತನ್ನ ಬ್ಯಾಗ್ ಗೆ ಹಾಕಿಕೊಂಡು ಹೊರಬಂದಿದ್ದಾನೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಂತರ ಬ್ಯಾಂಕ್ ಶಾಖೆಯಿಂದ ನಾಲ್ವರು ಒಟ್ಟಿಗೆ ಹೊರಬಂದು, ಭುವನೇಶ್ವರ ವೃತ್ತದ ಕಡೆಗೆ ತೆರಳಿದ್ದಾರೆ.

ಕೆಲ ಸಮಯದ ಸಮಯದ ಬಳಿಕ ಹಣ ಇಲ್ಲದಿರುವುದನ್ನು ಅರಿತ ಬ್ಯಾಂಕ್ ಸಿಬ್ಬಂದಿ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ.

ಈ ಬಗ್ಗೆ ತಕ್ಷಣವೇ ಪಟ್ಟಣ ಠಾಣೆ ಪೋಲಿಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ವಹಿಸಿದ್ದಾರೆ.