ಮನೆ ಅಪರಾಧ ಬೈಕ್-ಕಾರು ಅಪಘಾತ: ಪತಿ, ಪತ್ನಿ, ತಾಯಿ ಸ್ಥಳದಲ್ಲೇ ಸಾವು

ಬೈಕ್-ಕಾರು ಅಪಘಾತ: ಪತಿ, ಪತ್ನಿ, ತಾಯಿ ಸ್ಥಳದಲ್ಲೇ ಸಾವು

0

ಚಾಮರಾಜನಗರ: ಬೈಕ್ ​ಗಳು ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಅಸುನೀಗಿ, ಓರ್ವ ತೀವ್ರವಾಗಿ ಗಾಯಗೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.

Join Our Whatsapp Group

ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ‌ ಬೈಕ್ ಸವಾರ ಶಶಿಧರ್ (28), ಪತ್ನಿ ಶಾಲಿನಿ (22) ಹಾಗೂ ತಾಯಿ ಭಾಗ್ಯಮ್ಮ (50) ಮೃತಪಟ್ಟಿದ್ದಾರೆ. ಇವರ ಹಿಂದೆ ಬೈಕ್​ನಲ್ಲಿ ಬರುತ್ತಿದ್ದ ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದ ರಾಜಣ್ಣ(40) ಎಂಬವರಿಗೂ ಕಾರು ತಗುಲಿ ತೀವ್ರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

ಮೈಸೂರು ಜಿಲ್ಲೆಯ ಚಿಕ್ಕದೇವಮ್ಮನ ಬೆಟ್ಟಕ್ಕೆ ತೆರಳಿ ವಾಪಸ್ ಸ್ವಗ್ರಾಮಕ್ಕೆ ಬೈಕ್​​ನಲ್ಲಿ ತೆರಳುತ್ತಿದ್ದಾಗ ನಂಜನಗೂಡು ಕಡೆಯಿಂದ ವೇಗವಾಗಿ ಬಂದ ಕಾರಿಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಮಾಹಿತಿ ಅರಿತ ಬೇಗೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೂವರ ಮೃತದೇಹಗಳನ್ನು ಬೇಗೂರು ಆಸ್ಪತ್ರೆಗೆ ರವಾನಿಸಿದ್ದಾರೆ. ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.