ಚಾಮರಾಜನಗರ ಜಿಲ್ಲಾ ಕೋರ್ಟ್’ನಲ್ಲಿ 11 ಟೈಪಿಸ್ಟ್, ಟೈಪಿಸ್ಟ್-ಕಾಪಿಯಿಸ್ಟ್ ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.ಆಸಕ್ತರು ನವೆಂಬರ್ 30, 2022ಕ್ಕೆ ಮುನ್ನ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ districts.ecourts.gov.in ಗೆ ಭೇಟಿ ನೀಡಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2022
ಅರ್ಜಿ ಶುಲ್ಕ ಕಟ್ಟಲು ಕಡೇ ದಿನ: ಡಿಸೆಂಬರ್ 1, 2022
ಹುದ್ದೆಯ ಮಾಹಿತಿ:
ಟೈಪಿಸ್ಟ್-ಕಾಪಿಯಿಸ್ಟ್-04
ಟೈಪಿಸ್ಟ್- 07
ಒಟ್ಟು 11 ಹುದ್ದೆಗಳು
ವಿದ್ಯಾರ್ಹತೆ :
ಚಾಮರಾಜನಗರ ಜಿಲ್ಲಾ ಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಚಾಮರಾಜನಗರ ಜಿಲ್ಲಾ ಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 30, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಎಸ್ಸಿ/ಎಸ್ಟಿ/ ಪ್ರವರ್ಗ-1: 5 ವರ್ಷ
ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು : 3 ವರ್ಷ
PwD & ವಿಧವೆಯರಿಗೆ: 10 ವರ್ಷ
ವೇತನ:
ತಿಂಗಳಿಗೆ ₹ 21,400- 42,000 ವೇತನ ಕೊಡಲಾಗುತ್ತದೆ.
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ಪ್ರವರ್ಗ-1 & ಅಂಗವಿಕಲ ಅಭ್ಯರ್ಥಿಗಳು- ಯಾವುದೇ ಶುಲ್ಕ ಇಲ್ಲ
ಸಾಮಾನ್ಯ/ ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 200 ರೂ.
ಶುಲ್ಕ ಪಾವತಿ ಮಾಡುವ ವಿಧಾನ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಟೈಪಿಂಗ್ ಟೆಸ್ಟ್
ಕನ್ನಡ ಭಾಷಾ ಪರೀಕ್ಷೆ
ಕಂಪ್ಯೂಟರ್ ಪರೀಕ್ಷೆ














