Saval TV on YouTube
ಚಾಮರಾಜನಗರ(Chamarajanagar): ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡುವ ಚಾಮರಾಜನಗರ ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ಕಬ್ಬು ಫಸಲಿನ ನಡುವೆ 15-20 ದಿನಗಳ ಅವಧಿಯ ಎರಡು ಚಿರತೆ ಮರಿಗಳು ಪತ್ತೆಯಾಗಿವೆ.
ಕಟ್ನವಾಡಿ ಗ್ರಾಮದ ಗುರು ಎಂಬವರು ಕಬ್ಬಿನ ಫಸಲನ್ನು ಕಟಾವು ಮಾಡುವಾಗ ಎರಡು ಚಿರತೆ ಮರಿಗಳು ಪತ್ತೆಯಾಗಿದೆ.
ವಿಚಾರ ತಿಳಿದ ಚಾಮರಾಜನಗರ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಮರಿಗಳನ್ನು ಜಮೀನಿನಲ್ಲೆ ಬಿಟ್ಟು ನಿಗಾ ವಹಿಸಿದ್ದಾರೆ. ತಾಯಿ ಚಿರತೆ ತನ್ನಮರಿಗಳನ್ನು ಕರೆದೊಯ್ಯಲಿದೆ ಎಂದು ಅರಣ್ಯ ಇಲಾಖೆಯು ಕ್ಯಾಮರಾಗಳನ್ನು ಅಳವಡಿಸಿ ನಿಗಾ ಇರಿಸಿದೆ.
ತೋಟದ ಮನೆಯ ಸಮೀಪದಲ್ಲೇ ಜನ ಓಡಾಟವಿರುವ ಪ್ರದೇಶದಿಂದ 70-100 ಮೀಟರ್ ಅಂತರದಲ್ಲೇ ಚಿರತೆ ಮರಿಹಾಕಿರುವುದು ಜನರನ್ನು ನಿಬ್ಬೆರಗಾಗಿಸಿದೆ. ಅಲ್ಲದೇ ಆತಂಕಕ್ಕೂ ಕಾರಣವಾಗಿದೆ.