ಮನೆ ಆರೋಗ್ಯ ಕೊರೊನಾ: 196 ಹೊಸ ಪ್ರಕರಣಗಳು ದೃಢ

ಕೊರೊನಾ: 196 ಹೊಸ ಪ್ರಕರಣಗಳು ದೃಢ

0

ನವದೆಹಲಿ(Newdelhi):  ದೇಶದಾದ್ಯಂತ ಕೊರೊನಾ ಒಮೈಕ್ರಾನ್ ಉಪ ತಳಿ ಬಿ.ಎಫ್.7 ಭೀತಿ ಎದುರಾಗಿದ್ದು, ಈ ಬೆನ್ನಲ್ಲೆ ಕಳೆದ 24 ಗಂಟೆಗಳ ಅವಧಿಯಲ್ಲಿ  ದೇಶದಲ್ಲಿ ಹೊಸದಾಗಿ 196 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,428ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಈವರೆಗೆ ಕೋವಿಡ್ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,77,302) ರಷ್ಟಾಗಿದೆ.

24 ಗಂಟೆಗಳಲ್ಲಿ ಕೇರಳದಲ್ಲಿ ಇಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,30,695ಕ್ಕೆ ಏರಿದೆ.

ದೈನಂದಿನ ಪಾಸಿಟಿವಿಟಿ ದರ ಶೇಕಡ 0.56ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇಕಡ 0.16 ರಷ್ಟಿದೆ. 24 ಗಂಟೆಗಳಲ್ಲಿ 35,173 ಕೋವಿಡ್ ಮಾದರಿ ಪರೀಕ್ಷೆ ನಡೆಸಲಾಗಿದೆ.

ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇಕಡ 0.01ರಷ್ಟು ಸಕ್ರಿಯ ಪ್ರಕರಣಗಳಿದ್ದು, ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇಕಡ 98.80ರಷ್ಟಾಗಿದೆ.

ಹಿಂದಿನ ಲೇಖನಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಜಾಮೀನು ಮಂಜೂರು
ಮುಂದಿನ ಲೇಖನಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಪತ್ತೆ