ಮನೆ ಅಪರಾಧ ಚಾಮರಾಜನಗರ​: ಬಾಗಿಲ ಮೇಲೆ ನೆರೆಯವರ ಹೆಸರು ಬರೆದು ಯುವತಿ ಆತ್ಮಹತ್ಯೆ

ಚಾಮರಾಜನಗರ​: ಬಾಗಿಲ ಮೇಲೆ ನೆರೆಯವರ ಹೆಸರು ಬರೆದು ಯುವತಿ ಆತ್ಮಹತ್ಯೆ

0

ಚಾಮರಾಜನಗರ: ಬಾಗಿಲಿನ ಮೇಲೆ ನೆರೆಮನೆಯವರ ಹೆಸರು ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಚೆನ್ನಮಲ್ಲಿಪುರ ಗ್ರಾಮದ ಕವನಾ (24) ಮೃತ ಯುವತಿ.

ಮನೆಯಲ್ಲಿ ಅವರೆ ಕಾಳಿಗೆ ಹಾಕಲು ತಂದಿಟ್ಟಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಡೆತ್ ನೋಟ್ ಮತ್ತು ಬಾಗಿಲಿನ ಮೇಲೆ ನೆರೆಮನೆಯವರ ಹೆಸರು ಬರೆದಿಟ್ಟದ್ದಾರೆ.

ಮೆಸೇಜ್ ಮಾಡದಿದ್ದರೂ ನೆರೆಮನೆಯವರ ಅಪಮಾನ ಆರೋಪ: ನೆರೆಮನೆಯ ಯುವತಿಗೆ ಯುವಕನೊಬ್ಬ ನನ್ನ ಮಗಳ ಹೆಸರಿನಲ್ಲಿ ಮೆಸೇಜ್​ ಮಾಡಿದ್ದನು. ಇದರಿಂದ ನೆರೆಮನೆಯಲ್ಲಿ ಕಲಹ ಉಂಟಾಗಿತ್ತು. ನನ್ನ ಮಗಳೇ ಮೆಸೇಜ್ ಮಾಡಿದ್ದಾಳೆಂದು ನೆರೆಯವರು ಅಪಮಾನ ಮಾಡಿದ್ದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೃತಳ ತಾಯಿ ದೂರು ಕೊಟ್ಟಿದ್ದಾರೆ.

“ತನ್ನ ಮಗಳು ಡೆತ್​ನೋಟ್​ ಮತ್ತು ಮನೆಯ ಬಾಗಿಲಿನ ಮೇಲೂ ತನ್ನ ಸಾವಿಗೆ ಕಾರಣರಾದ ನಾಲ್ವರು ನೆರೆಯವರ ಹೆಸರು ಬರೆದಿದ್ದಾಳೆ. ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ” ಮೃತಳ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

“ಘಟನೆ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಯುವತಿ ಆತ್ಮಹತ್ಯೆಗೂ ಮುನ್ನ ತನ್ನ ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ತನಗೆ ಅಪಮಾನ ಆಗಿದೆ, ತಾನು ಮೆಸೇಜ್ ಮಾಡಿಲ್ಲ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆಂದು ಮೃತಳ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.