ಮನೆ ರಾಜಕೀಯ ಯುಪಿ ಚುನಾವಣೆ: ಯೋಗಿ- ಕೇಜ್ರಿವಾಲ್ ಟ್ವೀಟ್ ವಾರ್!

ಯುಪಿ ಚುನಾವಣೆ: ಯೋಗಿ- ಕೇಜ್ರಿವಾಲ್ ಟ್ವೀಟ್ ವಾರ್!

0

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ,  ನಾಯಕರ ನಡುವಿನ ಜಟಾಪಟಿ ತಾರಕಕ್ಕೇರಿದೆ. ಸೋಮವಾರ ಮಧ್ಯರಾತ್ರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಟ್ವೀಟ್ ವಾರ್ ನಡೆದಿದೆ.

ಟ್ವೀಟರ್ ಫೋಸ್ಟ್ ನಲ್ಲಿ ಯೋಗಿ ಆದಿತ್ಯನಾಥ್, ಕೇಳು ಕೇಜ್ರಿವಾಲ್ ಇಡೀ ಮಾನವೀಯತೆಯು ಕೊರೋನಾ ನೋವಿನಿಂದ ನರಳುತ್ತಿರುವಾಗ, ನೀವು ಉತ್ತರ ಪ್ರದೇಶದ ಕಾರ್ಮಿಕರು ದೆಹಲಿ ತೊರೆಯುವಂತೆ ಒತ್ತಾಯಿಸಿದ್ದೀರಿ. ಮಧ್ಯರಾತ್ರಿಯಲ್ಲಿ ಉತ್ತರ ಪ್ರದೇಶ ಗಡಿಯಲ್ಲಿ ಚಿಕ್ಕ ಮಕ್ಕಳು ಮತ್ತು ಮಹಿಳೆಯರನ್ನು ಅಸಹಾಯಕರನ್ನಾಗಿಸುವಂತಹ ಅಪ್ರಜಾಸತ್ತಾತ್ಮಕ ಮತ್ತು ಅಮಾನವೀಯ ಕೃತ್ಯವನ್ನು ನಿಮ್ಮ ಸರ್ಕಾರ ಮಾಡಿದೆ. ನಿಮ್ಮನ್ನು ಮಾನವ ವಿರೋಧಿ ಎಂದು ಕರೆಯಬಹುದು ಎಂದು ಕೇಜ್ರಿವಾಲ್ ರನ್ನು ಟೀಕಿಸಿದ್ದಾರೆ.

ಈ ಟೀಕೆಗೆ ಪ್ರತಿಕ್ರಯಿಸಿರುವ ಕೇಜ್ರಿವಾಲ್, ಕೇಳು ಯೋಗಿ, ಯುಪಿಯ ಜನರ ಮೃತದೇಹಗಳು ನದಿಯಲ್ಲಿ ಹರಿಯುತ್ತಿದ್ದಂತೆಯೇ, ನೀವು ಕೋಟಿಗಟ್ಟಲೆ ಹಣ ವ್ಯಯಿಸಿ ಟೈಮ್ಸ್ ಪತ್ರಿಕೆಯಲ್ಲಿ ನಿಮ್ಮ ಸುಳ್ಳು ಚಪ್ಪಾಳೆಗಳ ಜಾಹೀರಾತು ನೀಡುತ್ತಿದ್ದಿರಿ. ನಿನ್ನಂತಹ ಕ್ರೂರಿ ಮತ್ತು ಕ್ರೂರ ಆಡಳಿತಗಾರನನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ. 

ಹಿಂದಿನ ಲೇಖನಮೈಸೂರಿಗರೇ ಎಚ್ಚರ: ನಗರದಲ್ಲಿ ಹರಿದಾಡುತ್ತಿವೆ 50, 100ರ ನಕಲಿ ನೋಟುಗಳು!
ಮುಂದಿನ ಲೇಖನ2008ರ ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣ​: 28 ಆರೋಪಿಗಳು ಖುಲಾಸೆ