ಮೈಸೂರು : ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಇಂದು (ಸೆ.9) ʻಚಾಮುಂಡಿ ಬೆಟ್ಟ ಚಲೋʼ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ನಗರದ ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿ ಬೆಟ್ಟಕ್ಕೆ ಯಾತ್ರೆ ಹಮ್ಮಿಕೊಳ್ಳಲಾಗಿದೆ. ʻನಮ್ಮ ನಡಿಗೆ ತಾಯಿ ಚಾಮುಂಡೇಶ್ವರಿʼ ಸನ್ನಿಧಿಗೆ ಹೆಸರಿನಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ವಿಪಕ್ಷ ನಾಯಕ ಆರ್. ಅಶೋಕ್ , ʻಚಾಮುಂಡೇಶ್ವರಿ ದೇವಾಲಯದ ಪಾವಿತ್ರ‍್ಯತೆಗೆ ಧಕ್ಕೆಯಾದರೆ ‘ಧರ್ಮಸ್ಥಳ ಚಲೋ’ ಮಾದರಿಯಲ್ಲಿ ‘ಚಾಮುಂಡೇಶ್ವರಿ ಚಲೋ’ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಚಾಮುಂಡೇಶ್ವರಿ ತಾಯಿ ಒಳ್ಳೆಯ ಬುದ್ಧಿಯನ್ನು ನೀಡಲಿ.
ಹಿಂದೂಗಳ ಶ್ರದ್ಧಾ ಕೇಂದ್ರವನ್ನು ಟಾರ್ಗೆಟ್ ಮಾಡುವ ಮನಸ್ಥಿತಿಯನ್ನು ನಿವಾರಿಸಲಿ. ಹಿಂದೂಗಳ ಧಾರ್ಮಿಕ ಕೇಂದ್ರ ಯಾವಾಗಲೂ ರಕ್ಷಣೆಯಾಗಬೇಕು, ಪವಿತ್ರವಾಗಿ ಇರಬೇಕು. ಹಿಂದೂಗಳ ಭಾವನೆಗೆ ಧಕ್ಕೆಯಾಗಬಾರದು ಎಂದು ಮನವಿ ಮಾಡಿದ್ದರು. ಆದ್ರೆ ಬಿಜೆಪಿ ಯಾತ್ರೆಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯು ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದೆ
ಇತ್ತೀಚೆಗಷ್ಟೇ ದಸರಾ ಉದ್ಘಾಟನೆಗೆ ಮುಷ್ತಾಕ್‌ರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದ್ದು, ಹಾಸನ ನಗರದ ಅಮಿರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ್ ಅವರ ನಿವಾಸಕ್ಕೆ ದಸರಾ ವಿಶೇಷಧಿಕಾರಿ ಆಗಿರುವ ಮೈಸೂರು ಡಿಸಿ ಲಕ್ಷ್ಮಿಕಾಂತರೆಡ್ಡಿ ಹಾಗೂ ಎಡಿಸಿ ಶಿವರಾಜ್ ಅವರು ತೆರಳಿದ್ದರು. ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಆನೆ ವಿಗ್ರಹದ ಜೊತೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿದ್ದಾರೆ.














