ಮನೆ ರಾಜಕೀಯ ಬಜೆಟ್ ಅಧಿವೇಶನ: ಮೋದಿ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿದ ರಾಷ್ಟ್ರಪತಿ

ಬಜೆಟ್ ಅಧಿವೇಶನ: ಮೋದಿ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿದ ರಾಷ್ಟ್ರಪತಿ

0

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಲ್ಯಾಣ ಯೋಜನೆಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದರು.

ಬಜೆಟ್ ಅಧಿವೇಶನ ಆರಂಭದ ದಿನವಾದ ಸೋಮವಾರ ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ಲಸಿಕಾ ಅಭಿಯಾನದ ಯಶಸ್ಸು, ಆರೋಗ್ಯ ಮೂಲಸೌಕರ್ಯ ವೃದ್ಧಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

ತಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿ ಭಾರತದ ಹಕ್ಕುಗಳಿಗಾಗಿ ಹೋರಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ತಲೆಬಾಗುತ್ತೇನೆ. ಸ್ವಾತಂತ್ರ್ಯದ 75 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಪಯಣಕ್ಕೆ ಕೊಡುಗೆ ನೀಡಿದ ಗಣ್ಯರನ್ನು ಗೌರವದಿಂದ ಸ್ಮರಿಸುತ್ತೇನೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಈ ವರ್ಷದಿಂದ ಕೇಂದ್ರ ಸರ್ಕಾರವು ನೇತಾಜಿಯವರ ಜನ್ಮದಿನವಾದ ಜನವರಿ 23ರಿಂದ ಗಣರಾಜ್ಯೋತ್ಸವ ಆಚರಣೆ ಆರಂಭಿಸಿದೆ. ದೇಶದ ಸುರಕ್ಷಿತ ಭವಿಷ್ಯಕ್ಕಾಗಿ ಇತಿಹಾಸವನ್ನು ನೆನಪಿಟ್ಟುಕೊಳ್ಳುವುದು ಮತ್ತು ಅದರಿಂದ ಕಲಿಯುವುದು ಬಹಳ ಎಂದು ನಮ್ಮ ಸರ್ಕಾರವು ನಂಬುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಸಾಂಕ್ರಾಮಿಕ ರೋಗ ಮಹಾಮಾರಿ ಕೊರೋನಾ ವಿರುದ್ಧ ಭಾರತ ಯಶಸ್ವಿಯಾಗಿ ಹೋರಾಟ ನಡೆಸುತ್ತಿದ್ದು, ಕೊರೋನಾ ವಾರಿಯರ್ಸ್​ಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.

ಆಯುಷ್ಮಾನ್ ಭಾರತ್ ಕಾರ್ಡ್ ಬಡವರಿಗೆ ಅನುಕೂಲವಾಗಿದೆ. ಜನೌಷಧಿ ಕೇಂದ್ರದಲ್ಲಿ ಕಡಿಮೆ ಬೆಲೆಯಲ್ಲಿ ಔಷಧಿ ಲಭ್ಯತೆಯೂ ಉತ್ತಮ ಕ್ರಮವಾಗಿದೆ. 

ಡಾ.ಬಿ.ಆರ್.ಅಂಬೇಡ್ಕರ್ ಆದರ್ಶ ಸಮಾಜವು ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆಯನ್ನು ಆಧರಿಸಿದ ಸಮಾಜವಾಗಿದೆ ಎಂದು ಹೇಳಿದ್ದರು. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ, ಪ್ರಜಾಪ್ರಭುತ್ವದ ಮೂಲವು ಜನರನ್ನು ಗೌರವಿಸುವುದು ಆಗಿದೆ. ನನ್ನ ಸರ್ಕಾರ ಬಾಬಾಸಾಹೇಬರ ಆದರ್ಶಗಳನ್ನು ತನ್ನ ಮಾರ್ಗದರ್ಶಿ ತತ್ವವೆಂದು ಪರಿಗಣಿಸುತ್ತದೆ. 

ಯಾರೂ ಹಸಿವಿನಿಂದ ಇರಬಾರದು ಎಂಬ ನಿಟ್ಟಿನಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಭಾಗವಾಗಿ ಪ್ರತಿ ತಿಂಗಳು ಬಡವರಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ. ಇಂದು ಭಾರತವು ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವಾಗಿದೆ. ಪಡಿತರ ವಿತರಣೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ. 

ನಮ್ಮ ಸರ್ಕಾರ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ 44 ಕೋಟಿ ಬಡ ನಾಗರಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಪರಿಚಯಿಸಿದೆ. ಈ ಮೂಲಕ ಕೋಟಿಗಟ್ಟಲೆ ಫಲಾನುಭವಿಗಳು ನೇರ ನಗದು ವರ್ಗಾವಣೆಯ ಪ್ರಯೋಜನವನ್ನು ಕಲ್ಪಿಸಿದೆ. 

ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯನ್ನೂ ನಡೆಸಲಾಗುತ್ತಿದೆ. ಇಲ್ಲಿಯವರೆಗೆ 28 ಲಕ್ಷ ಬೀದಿಬದಿ ವ್ಯಾಪಾರಿಗಳು 2900 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಸರ್ಕಾರ ಈಗ ಈ ಮಾರಾಟಗಾರರನ್ನು ಆನ್‌ಲೈನ್ ಕಂಪನಿಗಳೊಂದಿಗೆ ಸಂಪರ್ಕಿಸುತ್ತಿದೆ.

ಮಹಿಳೆಯರು ಈಗ ಎನ್‌ಡಿಎಗೆ ಪ್ರವೇಶ ಪಡೆಯುತ್ತಿದ್ದಾರೆ. ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. 

ಮಹಿಳಾ ಸಬಲೀಕರಣವು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಉಜ್ವಲ ಯೋಜನೆಯ ಯಶಸ್ಸಿಗೆ ನಾವೇ ಸಾಕ್ಷಿಯಾಗಿದ್ದೇವೆ. ಮುದ್ರಾ ಯೋಜನೆಯ ಮೂಲಕ, ಮಹಿಳೆಯರ ಉದ್ಯಮಶೀಲತೆ ಮತ್ತು ಕೌಶಲ್ಯಕ್ಕೆ ಉತ್ತೇಜನ ನೀಡಲಾಗಿದೆ. ‘ಬೇಟಿ ಬಚಾವೋ, ಬೇಟಿ ಪಢಾವೋ’ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡಲಾಗಿದೆ. 

ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲಾಗುತ್ತಿದೆ. ಪ್ರಮುಖ ಪರೀಕ್ಷೆಗಳಲ್ಲೂ ಭಾರತೀಯ ಭಾಷೆಗಳಲ್ಲಿ ನಡೆಸಲು ಒತ್ತು ನೀಡಲಾಗುತ್ತಿದೆ. ಈ ವರ್ಷ 10 ರಾಜ್ಯಗಳಲ್ಲಿ 19 ಎಂಜಿನಿಯರಿಂಗ್ ಕಾಲೇಜುಗಳು 6 ಭಾರತೀಯ ಭಾಷೆಗಳಲ್ಲಿ ಇರಲಿದೆ. 

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಯುವ ಶಕ್ತಿಯ ಸಾಮರ್ಥ್ಯವನ್ನು ನಾವು ನೋಡಿದ್ದೇವೆ. ಭಾರತ ಅತ್ಯುತ್ತಮ ಪ್ರದರ್ಶನ ನೀಡಿ 7 ಪದಕಗಳನ್ನು ಗೆದ್ದಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲೂ ಭಾರತ 19 ಪದಕ ಗೆದ್ದು ದಾಖಲೆ ನಿರ್ಮಿಸಿದೆ.

ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸುವ ಮೂಲಕ ಸರ್ಕಾರವು ಮುಸ್ಲಿಂ ಮಹಿಳೆಯರ ಜೊತೆ ನಿಂತಿದೆ. ಮುಸ್ಲಿಮ್ ಮಹಿಳೆಯರು ಮೆಹ್ರಾಮ್ (ಪುರುಷರು) ಜೊತೆ ಹಜ್‌ಗೆ ತೆರಳುವ ನಿಷೇಧವನ್ನು ಸರ್ಕಾರ ತೆಗೆದುಹಾಕಿದೆ. 

ಗಂಡು-ಹೆಣ್ಣು ಮಕ್ಕಳಿಗೆ ಸಮಾನ ಸ್ಥಾನಮಾನ ಕಲ್ಪಿಸಿ ಸರ್ಕಾರವು ಹೆಣ್ಣು ಮಕ್ಕಳಿಗೆ ವಿವಾಹವಾಗಲು ಕನಿಷ್ಠ 18 ವರ್ಷವನ್ನು ಹೆಚ್ಚಿಸಿ 21 ವರ್ಷಕ್ಕೆ ತರುವ ಮಸೂದೆಯನ್ನು ಮಂಡಿಸಿದೆ. 

ನಮ್ಮ ರೈತರು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ. ಸರ್ಕಾರ ಎಂದಿಗೂ ಸಣ್ಣ ಪ್ರಮಾಣದ ರೈತರಿಗೆ ಅಧಿಕ ಆದ್ಯತೆ ನೀಡಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ 11 ಕೋಟಿ ರೈತರ ಕುಟುಂಬಗಳು ಪ್ರಯೋಜನ ಪಡೆದಿವೆ ಎಂದು ಹೇಳಿದರು.

ಹಿಂದಿನ ಲೇಖನವಿವಾಹಿತೆ ಜೊತೆ ಅಕ್ರಮ ಸಂಬಂಧ: ಯುವಕನ ಕುಟುಂಬದವರ ಮೇಲೆ ಹಲ್ಲೆ
ಮುಂದಿನ ಲೇಖನಧಾರ್ಮಿಕ ಮತಾಂತರಕ್ಕೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಹಸ್ತಾಂತರ