ಮನೆ ದೇಶ ಧ್ವಜ ಸಂಹಿತೆ ಬದಲಾವಣೆ: ರಾತ್ರಿಯೂ ರಾಷ್ಟ್ರಧ್ವಜ ಹಾರಿಸಬಹುದು

ಧ್ವಜ ಸಂಹಿತೆ ಬದಲಾವಣೆ: ರಾತ್ರಿಯೂ ರಾಷ್ಟ್ರಧ್ವಜ ಹಾರಿಸಬಹುದು

0

ನವದೆಹಲಿ (New Delhi): ಕೇಂದ್ರ ಸರ್ಕಾರವು ಧ್ವಜ ಸಂಹಿತೆಯಲ್ಲಿ ಬದಲಾವಣೆ ಮಾಡಿದೆ. ಇದರಿಂದ ಇನ್ನು ಮುಂದೆ ರಾಷ್ಟ್ರಧ್ವಜವನ್ನು ರಾತ್ರಿಯೂ ಹಾರಿಸಬಹುದು.

‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಆಗಸ್ಟ್‌ 13ರಿಂದ 15ರವರೆಗೆ ನಡೆಯಲಿರುವ ‘ಹರ್‌ ಘರ್‌ ತಿರಂಗ’(ಪ್ರತಿಯೊಬ್ಬರ ಮನೆಯಲ್ಲಿ ತ್ರಿವರ್ಣ ಧ್ವಜ) ಅಭಿಯಾನದ ಅಂಗವಾಗಿ ಸರ್ಕಾರವು ಈ ಕ್ರಮ ಕೈಗೊಂಡಿದೆ.

ಧ್ವಜ ಸಂಹಿತೆಯಲ್ಲಿ ಬದಲಾವಣೆ ಮಾಡಿರುವುದರಿಂದ ರಾಷ್ಟ್ರಧ್ವಜವನ್ನು ರಾತ್ರಿಯೂ ಹಾರಿಸಬಹುದು. ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್‌ ಧ್ವಜಗಳನ್ನೂ ಬಳಸಬಹುದಾಗಿದೆ.

ಬದಲಾವಣೆಯಾಗಿರುವ ಧ್ವಜ ಸಂಹಿತೆಯ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಈ ಹಿಂದೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಮಾತ್ರ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಯಂತ್ರದಿಂದ ತಯಾರಿಸಿದ ಮತ್ತು ಪಾಲಿಸ್ಟರ್‌ ಧ್ವಜಗಳನ್ನು ಬಳಸಲು ಅನುಮತಿ ಇರಲಿಲ್ಲ.

ಹಿಂದಿನ ಲೇಖನಸಂಸತ್ತನ್ನು ಪ್ರಜಾಪ್ರಭುತ್ವದ ದೇಗುಲ: ಬೀಳ್ಕೊಡುಗೆ ಭಾಷಣದಲ್ಲಿ ನಿರ್ಗಮಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌
ಮುಂದಿನ ಲೇಖನಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವವರನ್ನು ಬೆಂಬಲಿಸಿ: ಮಲ್ಲಿಕಾರ್ಜುನ ‌ಖರ್ಗೆ