ಮನೆ ಅಪರಾಧ 2019ರ ಮಿಸ್ ಅಮೇರಿಕಾ ಚೆಸ್ಲಿ ಕ್ರಿಸ್ಟ್ ಆತ್ಮಹತ್ಯೆ

2019ರ ಮಿಸ್ ಅಮೇರಿಕಾ ಚೆಸ್ಲಿ ಕ್ರಿಸ್ಟ್ ಆತ್ಮಹತ್ಯೆ

0

ನ್ಯೂಯಾರ್ಕ್: ಜೀವನದಲ್ಲಿ ಜಿಗುಪ್ಸೆಗೊಂಡು ಮಾಜಿ ಮಿಸ್ ಅಮೆರಿಕ ಚೆಸ್ಲಿ ಕ್ರಿಸ್ಟ್ (30) ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ ಪ್ರದೇಶದ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು ಎಂದು ಕುಟುಂಬದವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಮಾಡೆಲ್ 2019 ರಲ್ಲಿ ಮಿಸ್ ಯುಎಸ್ಎ ಗೆದ್ದಿದ್ದರು‌. ‘ಚೆಸ್ಲಿ ನಿಧನದಿಂದ ನಮಗೆ ತೀವ್ರ ಆಘಾತವಾಗಿದೆ‘ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಚೆಸ್ಲಿ ಆತ್ಮಹತ್ಯೆಗೂ ಮುನ್ನ ಈ ದಿನ ನಿಮ್ಮ ಬಾಳಿನಲ್ಲಿ ಶಾಂತಿ ನೆಮ್ಮದಿ ತರಬಹುದು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ‌. ಚೆಸ್ಲಿ ಅವರು ಅಮೆರಿಕದ ಮನರಂಜನಾ ಚಾನೆಲ್ ಎಕ್ಸ್‌ಟ್ರಾ ಟಿವಿಗೆ ನಿರೂಪಕಿಯಾಗಿ ಗಮನ ಸೆಳೆದಿದ್ದರು.

ಹಿಂದಿನ ಲೇಖನಗ್ಯಾಸ್ ಪೈಪ್ ಲೈನ್ ಯೋಜನೆ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನ
ಮುಂದಿನ ಲೇಖನನನ್ನ ಮುಂದೆ ಮೂರು ಆಯ್ಕೆಗಳಿವೆ: ಸಿಎಂ ಇಬ್ರಾಹಿಂ