ಮನೆ ಸ್ಥಳೀಯ ಹೆಸರಿನಲ್ಲಿ ಇಂಗ್ಲೀಷ್ ನ ಅಕ್ಷರಗಳ ಬದಲಾವಣೆಗೂ ಚುನಾವಣೆಗೂ ಸಂಬಂಧವಿಲ್ಲ: ಪ್ರತಾಪ್ ಸಿಂಹ

ಹೆಸರಿನಲ್ಲಿ ಇಂಗ್ಲೀಷ್ ನ ಅಕ್ಷರಗಳ ಬದಲಾವಣೆಗೂ ಚುನಾವಣೆಗೂ ಸಂಬಂಧವಿಲ್ಲ: ಪ್ರತಾಪ್ ಸಿಂಹ

0

ಮೈಸೂರು: ಹೆಸರಿನಲ್ಲಿ ಇಂಗ್ಲೀಷ್ ನ ಅಕ್ಷರಗಳ ಬದಲಾವಣೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಅದು ಸಂಖ್ಯಾಶಾಸ್ತ್ರ ಎಂದೇನು ಅಲ್ಲ. ನೀವು ಸಂಖ್ಯಾಶಾಸ್ತ್ರ ಅಂದರೆ ಅದು ಸಂಖ್ಯಾಶಾಸ್ತ್ರ ಅಷ್ಟೇ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಹೆಸರು ಬರೆಯುವಾಗ ಅದು ಸಮಸ್ಯೆಯಾಗುತಿತ್ತು. ಹೀಗಾಗಿ ಕನ್ನಡದಲ್ಲಿ ಹೆಸರು ಇರುವಂತೆ ಯಥಾವತ್ತಾಗಿ ಇಂಗ್ಲೀಷ್ ನಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ ಅಷ್ಟೇ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬದಲಾವಣೆಗೂ ಚುನಾವಣೆಗೂ ಸಂಬಂಧವಿಲ್ಲ. ಅದೇ ಹೆಸರಿನಿಂದಲೆ ನಾನು ಎರಡು ಬಾರಿ ಗೆದ್ದಿದ್ದೇನೆ. ಮೈಸೂರು ಗೊತ್ತಿಲ್ಲದ ನನಗೆ ಮೊದಲ ಬಾರಿ ಮೈಸೂರಿನ ಜನ ನನ್ನನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.

ನನ್ನ ವಿರುದ್ಧ ಚುನಾವಣೆಯಲ್ಲಿ ಕಾಂಗ್ರೆಸ್ ನ ಯಾವುದೇ ಅಭ್ಯರ್ಥಿ ನಿಂತರೂ ಎರಡು ಲಕ್ಷ ಮತಗಳ ಅಂತದಿಂದ ಗೆಲ್ಲುತ್ತೇನೆ. ನಾನು ಒಂಥರಾ ಎಲ್ಲಾ ಪಕ್ಷಗಳ ಮತದಾರರ ಅಭ್ಯರ್ಥಿ ಇದ್ದಂತೆ. ಎಲ್ಲಾ ಪಕ್ಷದಲ್ಲೂ ಮೋದಿ ಅಭಿಮಾನಿಗಳಿದ್ದಾರೆ. ಅವರೆಲ್ಲ ನನಗೆ ಮತ ಹಾಕುತ್ತಾರೆ. ಈಗ ಜೆಡಿಎಸ್ ಕೂಡ ನಮ್ಮ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ನಮಗೆ ಹೆಚ್ಚಿನ ಬಲ ಬಂದಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಹಿಂದಿನ ಲೇಖನಜನವರಿ 1 ರಿಂದ 15ರವರೆಗೆ “ರಾಮ ಸಂದೇಶ ಮನೆಯಿಂದ ಮನೆಗೆ” ಅಭಿಯಾನ ಆರಂಭಿಸಲಿರುವ ಆರ್ ಎಸ್ ಎಸ್
ಮುಂದಿನ ಲೇಖನವಿಜಯಪುರ: ಮೂರು ಮಕ್ಕಳ ಮೇಲೆ  ಬೀದಿ ನಾಯಿಗಳ ದಾಳಿ