ಮನೆ ದೇವರ ನಾಮ ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ

ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ

0

ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ

ಉಮೇಶ ಮೊದಲಾದ ಅಮರನಿಖರವೋ ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ

ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಡಲೇ ಜಗವ

ಕೋಪಾರಹಿತಳಾಗಿ ಶ್ರೀಪತಿಯೊಳು ನಮ್ಮ ತಾಪತ್ರಯವ ಪೇಳಿ ಪೋಷಿಸಬೇಕೆಂದು

ಕರುಣಾ ವಾರಿಧಿಯೆಂದು ಶರಣಜನರು ನಿಮ್ಮ ಸ್ಮರಣೆಯ ಮಾಡುತಿಹರೆ

ಮರಣ ಕಾಲದಿ ಅಘಹರಣಗೊಳಿಸಿ ನಮ್ಮ ಕರುಣದಿಂದಲಿ ನಿಮ್ಮ ಚರಣದೊಳಿರಿಸಮ್ಮ

ವಾಸವಂದಿತ ಸಿರಿ ಶೇಷವಿಠಲನೊಳು ವಾಸವ ಮಾಡುತಿಹರೆ

ಘಾಸಿಪಡಿಪನಮ್ಮ ಈ ಸಮದಲಿ ವಾಸವಾತ್ಮಗೆ ಪೇಳಿ ಪೋಷಿಸಬೇಕೆಂದು

ಹಿಂದಿನ ಲೇಖನಮನರಂಜನಾ ಚಟುವಟಿಕೆ ನಡೆಸಲು ಕ್ಲಬ್, ಸಂಘ ಸಂಸ್ಥೆಗಳು ಪೊಲೀಸ್ ಕಾಯಿದೆ ಅನುಮತಿ ಪಡೆಯುವ ಅಗತ್ಯವಿಲ್ಲ: ಹೈಕೋರ್ಟ್
ಮುಂದಿನ ಲೇಖನಕಣ್ಣಿನ ಆರೋಗ್ಯಕ್ಕೆ ಈ ಯೋಗಾಸನಗಳನ್ನು ಟ್ರೈ ಮಾಡಿ ನೋಡಿ