ಮನೆ ರಾಜ್ಯ ಲಿಂಗಾಂಬುಧಿ ವೃಕ್ಷೋದ್ಯಾನದಲ್ಲಿ ನಾಗರಿಕರ ಪ್ರವೇಶಕ್ಕೆ ಶುಲ್ಕ: ಪ್ರತಿಭಟನೆ

ಲಿಂಗಾಂಬುಧಿ ವೃಕ್ಷೋದ್ಯಾನದಲ್ಲಿ ನಾಗರಿಕರ ಪ್ರವೇಶಕ್ಕೆ ಶುಲ್ಕ: ಪ್ರತಿಭಟನೆ

0

ಮೈಸೂರು(Mysuru): ಲಿಂಗಾಂಬುಧಿ ವೃಕ್ಷೋದ್ಯಾನದಲ್ಲಿ ನಾಗರಿಕರ ಪ್ರವೇಶಕ್ಕೆ ಅರಣ್ಯ ಇಲಾಖೆಯು ಶುಲ್ಕ ವಿಧಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ‘ಲಿಂಗಾಂಬುಧಿ ನಗರ ಉದ್ಯಾನವನ ವಾಯುವಿಹಾರಿಗಳ ಸಮಿತಿ’ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ರಾಮಕೃಷ್ಣನಗರದಲ್ಲಿರುವ ಕೆರೆಯ ಉತ್ತರ ದ್ವಾರದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು.

ಸಮಿತಿಯ ಸದಸ್ಯ ಸಿದ್ದೇಶ್‌ ಮಾತನಾಡಿ, ಸಾರ್ವಜನಿಕರಿಗೆ ಕಲ್ಪಿಸಬೇಕಾದ ಕನಿಷ್ಠ ಅಗತ್ಯ ಸೌಲಭ್ಯಗಳಿಗೂ ಶುಲ್ಕವನ್ನು ವಿಧಿಸಿ ಸುಲಿಗೆ ಮಾಡುಲಾಗುತ್ತಿದೆ. ಉಸಿರಾಡುವ ಗಾಳಿಗೂ, ವ್ಯಾಯಾಮಕ್ಕೂ ಶುಲ್ಕ ವಿಧಿಸುವಂತಾದರೆ ನಾಗರಿಕರು ಎಲ್ಲಿಗೆ ಹೋಗಬೇಕು? ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ತೆರಿಗೆ ಕಟ್ಟಬೇಕೆ? ಎಂದು ಕಿಡಿಕಾರಿದರು.

ಕೆರೆ, ಕಟ್ಟೆ, ಸರೋವರಗಳು ಸಾರ್ವಜನಿಕರ ಆಸ್ತಿ. ಅರಣ್ಯ ಇಲಾಖೆಯು ರಾಷ್ಟ್ರೀಯ ಉದ್ಯಾನಗಳಿಗೆ, ಮೀಸಲು ಅರಣ್ಯಗಳಿಗೆ, ಸಫಾರಿಗಳಿಗೆ ತೆರಿಗೆ ವಿಧಿಸಲಿ. ಆದರೆ, ನಗರದ ಉದ್ಯಾನಗಳಿಗೂ ನಿರ್ವಹಣೆಯ ನೆಪದಲ್ಲಿ ಶುಲ್ಕ ವಿಧಿಸಲು ಮುಂದಾಗುವುದು ಅನ್ಯಾಯ ಕ್ರಮ ಎಂದರು.

ನಾಗರಿಕರ ಮನವಿ ಪತ್ರ ಸ್ವೀಕರಿಸಿ ಪ್ರತಿಕ್ರಿಯಿಸಿದ ಎಸಿಎಫ್ ಲಕ್ಷ್ಮಿಕಾಂತ್, ಪ್ರವೇಶ ಶುಲ್ಕ ವಿಧಿಸುವುದರ ಕುರಿತು ಯಾವುದೇ ಪ್ರಸ್ತಾವ ಸಲ್ಲಿಸಲು ಇಲಾಖೆಯು ಮುಂದಾಗುವುದಿಲ್ಲ. ಎಂದಿನಂತೆ ಮುಕ್ತ ಪ್ರವೇಶ ಇರಲಿದೆ. ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಸಮಿತಿ ಸದಸ್ಯರಾದ ನಾಗೇಶ್, ಪಿ.ಎಸ್‌.ಸಂಧ್ಯಾ, ಅವಿನಾಶ್, ಕಿನಿ, ಲಕ್ಕಿಮಾರ್, ನರಕೇಸರಿ, ಶಿವಕುಮಾರ್ ಬಸವಣ್ಣ, ಲೋಕೇಶ್ ಅಪ್ಪ, ಸುಮತಿ, ಜನಾರ್ಧನ್, ಯಶೋಧರ್‌, ನಿರಂಜನ್‌ ಇದ್ದರು.

ಹಿಂದಿನ ಲೇಖನರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು ಭಾರೀ ಮುನ್ನಡೆ
ಮುಂದಿನ ಲೇಖನಜವಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ವರ್ತಿಸುತ್ತಿಲ್ಲ: ಮಂಗಳಾ ಸೋಮಶೇಖರ್‌