ಮನೆ ಅಪರಾಧ ಮೈಸೂರಿನಲ್ಲೊಬ್ಬ ಖತರ್ನಾಕ್ ವಂಚಕ: ಕಸ್ಟಮ್ ಆಫೀಸರ್ ಅಂತ ವಂಚಿಸಿ ಲಕ್ಷಾಂತರ ರೂಪಾಯಿ ‘ಉಂಡೆ ನಾಮ’

ಮೈಸೂರಿನಲ್ಲೊಬ್ಬ ಖತರ್ನಾಕ್ ವಂಚಕ: ಕಸ್ಟಮ್ ಆಫೀಸರ್ ಅಂತ ವಂಚಿಸಿ ಲಕ್ಷಾಂತರ ರೂಪಾಯಿ ‘ಉಂಡೆ ನಾಮ’

0

ಮೈಸೂರು(Mysuru): ಖತರ್ನಾಕ್ ವ್ಯಕ್ತಿಯೊಬ್ಬ ತಾನು ಕಸ್ಟಮ್ ಆಫೀಸರ್ ಅಂತ ಸುಳ್ಳು ಹೇಳಿ ಮೈಸೂರು ಜನರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ನಡೆದಿದೆ.

ಗೂಗಲ್’ನಲ್ಲಿ ಸರ್ಚ್ ಮಾಡಿ ಮೈಸೂರಿನ ಸ್ಕೂಲ್’ಗಳಿಗೆ ಫೋನ್ ಮಾಡುತ್ತಿದ್ದ ಈತ ತಾನು ಶಾಲೆಯ ಹಳೆಯ ವಿದ್ಯಾರ್ಥಿ ಎಂದು ಶಿಕ್ಷಕರನ್ನುಪರಿಚಯ ಮಾಡಿಕೊಳ್ಳುತ್ತಿದ್ದನು. ಕಡಿಮೆ ಬೆಲೆಯಲ್ಲಿ ಚಿನ್ನ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಡಿಸುತ್ತೇನೆ ಎಂದು ಸುಮಾರು ‌7.48.800 ರುಪಾಯಿ ಲಪಟಾಯಿಸಿದ್ದನು.

ಈ ಬಗ್ಗೆ ಸೆನ್ ಪೋಲಿಸ್ ಸ್ಟೇಷನ್’ನಲ್ಲಿ ಆರು ಪ್ರಕರಣ ದಾಖಲಾಗಿದ್ದು, ಆರೋಪಿ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ.

ಈತ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋದಲ್ಲಿ ಹಾಗೂ ಅಮೇಜಾನ್ ಕಂಪನಿಯಲ್ಲಿ ಸ್ಕ್ಯಾನರ್ ಆಗಿ ಕೆಲಸ ಮಾಡುತ್ತಿದ್ದನು.