ಚಿಕ್ಕಮಗಳೂರು: ಅಡಿಕೆ ತೋಟ ನೋಡಲು ತೆರಳಿದ್ದ ಹೊಸಸಿದ್ರಳ್ಳಿ ಗ್ರಾಮದ ರೇವಮ್ಮ (62) ಸಾವು ಶವವಾಗಿ ಪತ್ತೆಯಾಗಿದ್ದಾರೆ. ಆ ಮೂಲಕ ಮಳೆಗೆ ಜಿಲ್ಲೆಯಲ್ಲಿ ಮೂರನೇ ಬಲಿಯಂತಾಗಿದೆ.
ಮಂಗಳವಾರ ಸಂಜೆ ಸಖರಾಯಪಟ್ಟಣ ಸಮೀಪದ ಹೊಸ ಸಿದ್ರಳ್ಳಿ ಗ್ರಾಮದ ರೇವಮ್ಮ ಮುಳುಗಡೆಯಾಗಿದ್ದ, ಅಡಿಕೆ ತೋಟವನ್ನು ನೋಡಲು ತೆರಳಿದ್ದರು. ರಾತ್ರಿಯಾದರೂ ವಾಪಾಸ್ ಆಗದ ಕಾರಣ ಅವರ ಹುಡುಕಾಟ ನಡೆಸಲಾಗಿತ್ತು.
ತಾಳಿ ಹಳ್ಳದ ಬಳಿ ವೃದ್ಧೆಯ ಚಪ್ಪಲಿ, ಉರುಗೋಲು ಪತ್ತೆಯಾಗಿತ್ತು. ತಾಳಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿತ್ತು. ಅದರಂತೆ ಅವರ ಶವ ಬುಧವಾರ ಮುಂಜಾನೆ ಪತ್ತೆಯಾಗಿದೆ.
ಭಾರೀ ಮಳೆಯಿಂದ ಅಕ್ಕಪಕ್ಕದ ತೋಟಗಳೆಲ್ಲ ಮುಳುಗಿದ್ದು, ಅದನ್ನು ನೋಡಲು ರೇವಮ್ಮ ತೆರಳಿದ್ದರು.














