ಮನೆ ಸಾಹಿತ್ಯ ಮಕ್ಕಳು ಚುರುಕಾಗಿರಬಲ್ಲರು

ಮಕ್ಕಳು ಚುರುಕಾಗಿರಬಲ್ಲರು

0

ಒಬ್ಬ, ಹೆಂಗಸು ಧಾರ್ಮಿಕ ಕಾರ್ಯ ಕ್ರಮವೊಂದರ ಸಂದರ್ಭದಲ್ಲಿ ತನ್ನ ಮನೆಯಲ್ಲಿ ಬಹಳಷ್ಟು ಲಾಡುಗಳನ್ನು ಮಾಡಿದ್ದಳು. ಅವಳ ಮಗ ಯಾವಾಗಲೂ ಅಡುಗೆ ಮನೆಯಿಂದ ಸಿಹಿ ತಿಂಡಿಗಳನ್ನು ಕದಿಯುವ ಅಭ್ಯಾಸ ಮಾಡಿಕೊಂಡಿದ್ದನು.

Join Our Whatsapp Group

ಆ ದಿನ ಅವಳು ಅವನು ತಿಂಡಿ ಕದಿಯುವಾಗ ಹಿಡಿದುಬಿಟ್ಟಳು. ಅವನನ್ನು ದೇವರ ವಿಗ್ರಹವಿರುವ ಕಡೆಗೆ ಕರೆದೊಯಯ್ದು ಹೀಗೆಂದು ಪ್ರಶ್ನಿಸಿದಳು. “ನೀನು ಲಾಡು ಕದಿಯುವಾಗ ದೇವರು ನೋಡುತ್ತಿದ್ದರೆಂದು ನಿನಗೆ ಗೊತ್ತೇ?”

“ಹೌದು” ಎಂದು ಹುಡುಗ ಉತ್ತರಿಸಿದನು.

“ಆಗ ಅವನು ನಿನ್ನನ್ನೇ ನೋಡುತ್ತಿದ್ದೆನೆಂದು ಗೊತ್ತೇ?”

“ಹೌದು” ಮತ್ತೆ ಹುಡುಗ ಉತ್ತರಿಸಿದನು.

“ನಿನಗೆ ಅವನು ಏನು ಹೇಳುತ್ತಿದ್ದನೆಂದು ಅಂದಿಕೊಂಡಿರುವೆ?”

ಅವನು ನೀಡಿದ ಉತ್ತರವು ತಾಯಿಯನ್ನು ದಿಗ್ಬ್ರಾಂತಳನ್ನಾಗಿ ಮಾಡಿತು.

ಪ್ರಶ್ನೆಗಳು

1.ಹುಡುಗನ ಉತ್ತರವೇನಾಗಿತ್ತು?

 2.ಈ ಕಥೆಯ ನೀತಿಯೇನು ?

ಉತ್ತರಗಳು

 1. “ನಮ್ಮಿಬ್ಬರನ್ನು ಬಿಟ್ಟರೆ ಇನ್ಯಾರೂ ಇಲ್ಲ, ಲಾಡು ತಿನ್ನು ಎಂದು ದೇವರು ಹೇಳಿದ್ದ”ಎಂದು ಹುಡುಗನು ಹೇಳಿದನು.

2.ಇಲ್ಲಿನ ಹಾಸ್ಯಪ್ರಜ್ಞೆಯನ್ನು ನೀವು ಇಷ್ಟಪಡಬಹುದು. ಆದರೆ ಇಲ್ಲಿ ನಾವು ದೇವರನ್ನು ನೋಡಿಲ್ಲವೆಂಬ ಗಾಢ ಸತ್ಯ ಅಡಕವಾಗಿದೆ. ಇದು ನಮ್ಮ ಮನಸ್ಸಿನ ಪರಿಕಲ್ಪನೆಯಷ್ಟೇ ಮಕ್ಕಳು ತಮಗೇನು ಕಾಣಿಸುತ್ತದೆ ಮತ್ತು ಕೇಳುತ್ತದೆ ಅದನ್ನು ಮಾತ್ರ ನಂಬುತ್ತಾರೆ. ಅವರು ಪ್ರತ್ಯಕ್ಷವಾಗಿ ಇರುವುದನ್ನು ಬಿಟ್ಟು ಇನ್ನೇನನ್ನೂ ಅರಿಯಲಾರರು. ದೇವರ ಬಗ್ಗೆ ಹೇಳುವುದು ಕೂಡ ಅವರಿಗೆ ಇಂತಹುದೇ ಕಾರಣಗಳಿಗೆ ರಾಕ್ಷಸರ ಬಗ್ಗೆ ಹೇಳುವುದು, ಇದನ್ನು ಮಾಡಬಾರದು ಅದನ್ನು ಮಾಡಬಾರದು ಎಂದು ಹೆದುರಿಸುವುದಕ್ಕೆ ಸಮಾನವಾಗಿರುತ್ತದೆ. ಅರ್ಥಮಾಡಿಕೊಳ್ಳಲಾಗದಷ್ಟು ಚಿಕ್ಕವರಿದ್ದಾಗ ಮಕ್ಕಳಿಗೆ ದೇವರು ಮತ್ತು ರಾಕ್ಷಸರ ಬಗ್ಗೆ ಹೇಳದಿರುವುದು ಉತ್ತಮ.