★ ನಮ್ಮ ಮಗನಿಗೆ ಇದೀಗ 10 ವರ್ಷ ತುಂಬಿದ್ದರೂ ಬೆರಳನ್ನು ಬಾಯಿಲ್ಲಿ ಟ್ಟುಕೊಂಡು Qualifications.
★ನಮ್ಮ ಮಗಳು ರಾತ್ರಿ ವೇಳೆಯಲ್ಲಿ ಹಾಸಿಗೆ ಒದ್ದೆ ಮಾಡುತ್ತಾಳೆ.
★ನಮ್ಮ ಸೋದರ ಸೊಸೆ ಯಾವಾಗ ನೋಡಿದರೂ ತನ್ನ ತಲೆಕೂದಲನ್ನು ಕಿತ್ತಿಕೊಳ್ಳುತ್ತಿರುತ್ತಾಳೆ.
★ ನಮ್ಮ ಮಗ ಇತ್ತೀಚಿಗೆ ಹುಡುಗಿಯರ ಹಾಗೆ ಮೇಕಪ್ ಮಾಡಿಕೊಳ್ಳುತ್ತಿದ್ದಾನೆ.
★ನಮ್ಮ ಹುಡುಗಿ ಗಂಡು ಹುಡುಗರ ಹಾಗೆ ಡ್ರೆಸ್ ಮಾಡಿ ಕೊಳ್ಳುತ್ತಾಳೆ.
★ನಮ್ಮ ಮಗ ಯಾವುದೇ ವಿಷಯದ ಮೇಲೆ ಶ್ರದ್ಧೆ ತೋರುತ್ತಿಲ್ಲ.
★ ನಮ್ಮವನ ಕೈಬರಹ ಸುಂದರವಾಗಿರದು.
★ ಇತ್ತೀಚೆಗೆ ನಮ್ಮ ಮಗಳು ಸರಿಯಾಗಿ ಊಟ, ತಿಂಡಿ ಮಾಡುತ್ತಿಲ್ಲ
★ ಇತ್ತೀಚಿಗೆ ನಮ್ಮ ಮಗನಿಗೆ ಏನಾಗಿದೆಯೋ ಏನು ಗೊತ್ತಿಲ್ಲ. ಒಳ್ಳೆಯ ಬಕಾಸುರನ ಹಾಗೆ ತಿನ್ನಲಾ ರಂಭಿಸಿದ್ದಾನೆ.
★ನಮ್ಮ ಮಗಳು ಯಾವಾಗ ನೋಡಿದರೂ ಗುರುಗಳನ್ನು ಕಚ್ಚುತ್ತಿರುತ್ತಾಳೆ.
★ ನಮ್ಮ ಮಗನು ನಿದ್ದೆಯಿಂದ ಎಬ್ಬಿಸದಿದ್ದರೆ 48ಗಳ ಕಾಲ ನಿದ್ದೆ ಮಾಡುತ್ತಾನೆ.
★ ನಮ್ಮ ಮಗನಿಗೆ ಸ್ನೇಹಿತರೆ ಇಲ್ಲ.ಸದಾ ಒಬ್ಬಂಟಿಯಾಗಿರುತ್ತಾನೆ.
★ ನಮ್ಮ ಮಗನಿಗೆ ಕತ್ತಲೆಂದರೆ ಎಲ್ಲಿಲ್ಲದ ಭಯ
★ನಮ್ಮ ಮಗನಿಗೆ ಗುಡುಗು, ಸಿಡಿಲೆಂದರೆ ತುಂಬಾ ಭಯ.
★ನಮ್ಮ ಮಗಳು ಜಿರಲೆಗಳನ್ನು ಹಲ್ಲಿಗಳನ್ನು ಕಂಡರೆ ಭಯದಿಂದ ತತ್ತರಿಸುತ್ತಾಳೆ.
★ನಮ್ಮ ಮಗಳಿಗೆ ಕೋಪ ಬಂದರೆ ಊಟ ಮಾಡುವುದಿಲ್ಲ.
★ನಮ್ಮ ಹುಡುಗ ಏನು ತಪ್ಪು ಮಾಡಿದರೂ ಒಪ್ಪಿಕೊಳ್ಳುವುದಿಲ್ಲ ಇಲ್ಲ.
★ಇತ್ತೀಚೆಗೆ ನಮ್ಮ ಮಗ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದಾನೆ.
★ನಮ್ಮ ಮಗ ಮೂಡ್ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿರುತ್ತವೆ.
ಇಂತಹ ಸಮಸ್ಯೆಗಳು ಕ್ಷುಲ್ಲಕ ವೇಯಾದರೂ, ಆಶ್ರದೆ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಇವು ಮಾನಸಿಕವಾಗಿ ಪ್ರಾರಂಭವಾಗಿ ಶಾರೀರಿಕವಾಗಿ ಬದಲಾಗಬಲ್ಲವು. ಇದಕ್ಕೆ ಯಾವುದೇ ರೀತಿಯ ಔಷಧಗಳಿಲ್ಲ. ಚಿಕಿತ್ಸೆಯಿಲ್ಲ. ಕೊನೆಗೆ ಸೈಕೋ ಸೊಮಾಟಿಕ್ ಡಿಜಾರ್ಡ್ ರ್ಸ್ ಆಗಿ ಬದಲಾಗಿ,ಅದೇ ಶಾಶ್ವತವಾಗಬಹುದು. ಅನಂತರ ಮಾನಸಿಕ ರೋಗಿಯಾಗಿ ಪರಿವರ್ತಿಸಾಗಬಹುದು. ತಾಯಿ ತಂದೆಯರು ಇಂತಹ ಸಮಸ್ಯೆಗಳಿಗೆ ಪ್ರಾರಂಭದಿಂದಲೇ ಜಾಗ್ರತೆವಹಿಸಿ ಪ್ರಮುಖ ಮಾನಸಿಕ ತಜ್ಞರನ್ನು ಭೇಟಿಯಾಗಿ ಗುಣಮುಖವಾಗುವಂತೆ ಮಾಡಬೇಕು. ಅವರ ಚಿಕಿತ್ಸೆಗಳಲ್ಲಿ ಔಷಧಿಗಳ ಜೊತೆಗೆ, ಕುಟುಂಬದ ಸದಸ್ಯರಿಗೆ ನೀಡುವ ಕೌನ್ಸಿಲ್ ಗಳು,ಕೂಡ ಸಾಕಷ್ಟಿವೆ. ಅಂತಹವುಗಳ ಪೈಕಿ ಕೆಲವೊಂದು ಇಲ್ಲಿ ನೀಡುತ್ತಿದ್ದೇನೆ.