ಮನೆ ಆರೋಗ್ಯ ಮಕ್ಕಳ ಆರೋಗ್ಯ ಸಮಸ್ಯೆಗಳು ಭಾಗ-3

ಮಕ್ಕಳ ಆರೋಗ್ಯ ಸಮಸ್ಯೆಗಳು ಭಾಗ-3

0

ಅವಧಿಗೂ ಮುನ್ನ ಮತ್ತು ಅವಧಿಯ ನಂತರ ಜನಿಸಿದ ಮಕ್ಕಳ ತೂಕ

    ಹುಟ್ಟುವ ಮಗು ತೂಕ ಕಡಿಮೆ ಹೊಂದಿದ್ದರೆ ಬಹಳ ಎಚ್ಚರವಹಿಸಬೇಕಾಗುತ್ತದೆ. ಇವತ್ತಿಗೂ ಬಹಳಷ್ಟು ಗರ್ಭಿಣಿಯರಿಗೆ ಮನೆಯಲ್ಲಿ ಹೆರಿಗೆಯಾಗುತ್ತದೆ. ಇಲ್ಲವೇ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲದೆ ಸಣ್ಣಪುಟ್ಟ ಆಸ್ಪತ್ರೆಗಳಲ್ಲಿ ಹೇಗೆ ಆಗುತ್ತದೆ ಇಂತಹ ಬಹಳಷ್ಟು ಜನರಿಗೆ ಕಡಿಮೆ ತೂಕದ ಮಕ್ಕಳ ಹುಟ್ಟುತ್ತಾರೆ.


    ಕಡಿಮೆ ತೂಕದ ಹೊಂದಿರುವ ಮಕ್ಕಳ ವಿಷಯದಲ್ಲಿ ಶ್ರದ್ಧೆ ವಹಿಸದಿದ್ದರೆ ಅವರ ಶರೀರಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಏರುಪೇರು ಆಗುತ್ತದೆ. ಹಲವಾರು ಮಕ್ಕಳು ಸಾವಿಗೀಡಾಗುತ್ತವೆ ಭಾರತದಲ್ಲಿ ಕಡಿಮೆ ತೂಕ ಹೊಂದಿ ಹುಟ್ಟುವ ಶೇಕಡ 30ರಷ್ಟು ಮಕ್ಕಳು ಸಾವಿಗೀಡಾಗುತ್ತಾರೆ ಹುಟ್ಟಿದ ತಿಂಗಳೊಳಗೆ ಸಾಯೋ ಮಕ್ಕಳಲ್ಲಿ ಶೇಕಡಾ 25 ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದವರಾಗಿರುತ್ತಾರೆ. ಸಾಕಷ್ಟು ಎಚ್ಚರ ವಹಿಸಿದರೆ ಕಡಿಮೆ ತೂಕ ಹೊಂದಿದ್ದರೂ ಅವರ ಬೆಳವಣಿಗೆ ಸೂಕ್ತವಾಗಿರುತ್ತದೆ
    ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಹುಟ್ಟಿದ ಮಗು 2500 ಗ್ರಾಮ್ (ಎರಡುವರೆ ಕೆಜಿ) ಗಳಿಗಿಂತ ಕಡಿಮೆ ಇದ್ದರೆ ಲೋಬರರ್ತ್ ವೈಟ್ ಎಂದು ಪರಿಗಣಿಸುತ್ತದೆ. ಹುಟ್ಟಿದ ಮಗು ಆರೋಗ್ಯವಾಗಿ ಬೆಳವಣಿಗೆ ಆಗಬೇಕಾದರೆ ಎರಡೂವರೆ ಕೆ.ಜಿ.ಗಿಂತಲೂ ಹೆಚ್ಚು ತೂಕವಿರಬೇಕು. ಹುಟ್ಟಿದ ಮಗು 1500 ಕೆಜಿಗಿಂತಲೂ ಕಡಿಮೆ ಇದ್ದರೆ “ವೆರಿ ಲೋ ಬರ್ತ್ ವೈಟ್” ಎಂದು ಪರಿಗಣಿಸಲಾಗುತ್ತದೆ.
    ಮಗು 37 ವಾರಕ್ಕೆ ಮುಂಚೆ ಹುಟ್ಟಿದರೆ ʼಪ್ರೀ ಮೆಚುರ್ಡ್ ಬೇಬಿʼ ಎನ್ನುತ್ತಾರೆ. 37 ರಿಂದ 42 ವಾರಗಳ ನಡುವೆ ಹುಟ್ಟಿದರೆ ಫುಲ್ ಟರ್ಮ್ ಬೇಬಿ ಎನ್ನುತ್ತಾರೆ. 42 ವಾರಗಳಂತೆ ಹುಟ್ಟಿದರೆ ಪೋಸ್ಟಂ ಬೇಬಿ ಎನ್ನುತ್ತಾರೆ
    ಫುಲ್ ಟರ್ಮ್ ಬೇಬಿ (ಅವಧಿ ಪೂರ್ಣಗೊಳಿಸಿದ ಮಗು) ಹೌದೋ, ಅಲ್ಲವೋ ಎಂಬುದನ್ನು ಕೆಲವು ಲಕ್ಷಣಗಳಿಗನುಗುಣವಾಗಿ ನಿರ್ಧರಿಸಬಹುದು ಫುಲ್ ಟರ್ಮ್ ಬೇಬಿ ಹುಟ್ಟಿದ ನಂತರ ಕೈಕಾಲುಗಳ ಎರಡನ್ನು ಸೂಕ್ತವಾಗಿ ಮಡಚಿಕೊಳ್ಳುತ್ತವೆ, ಪ್ರೀ ಮೆಚೂರ್ಡ್ ಬೇಬಿಯಾ ಸ್ನಾಯುಗಳ ಬಿಗಿ ಕಡಿಮೆ ಇದ್ದು, ಜೋತುಬೀಳುತ್ತದೆ. 30 ವಾರಗಳಿಗೆ ಹುಟ್ಟಿದರೆ ಕೈಕಾಲುಗಳ ನಿಯಂತ್ರಣದಲ್ಲಿರುವುದಿ,ಲ್ಲ 34 ವಾರಗಳಿಗೆ ಹುಟ್ಟಿದರೆ ಕಾಲುಗಳು ನಿಯಂತ್ರಣದಲ್ಲಿದ್ದು ಕೈಗಳಲ್ಲಿ ಇನ್ನೂ ಆ ಬೆಳವಣಿಗೆ ಆಗಿರುವುದಿಲ್ಲ
    ಫುಲ್ ಟರ್ಮ್ ಬೇಬಿ ಅಂಗಾಲುಗಳಲ್ಲಿ ಅಂಗೈಗಳಲ್ಲಿ ಅಂತೆ ಗೆರೆಗಳು ಮಡಿಕೆಗಳು ಇರುತ್ತವೆ. ಪ್ರಿ ಮೆಚ್ಯುಡ್ ಬೇಬಿಯಲ್ಲಿ ಮಡಿಕೆಗಳು ಬಹಳ ಕಡಿಮೆ ಇರುತ್ತದೆ.
    ಫುಲ್ ಟರ್ಮ್ ಬೇಬಿಯ ಎದೆ ಭಾಗವನ್ನು ಬೆರಳುಗಳಿಂದ ಹಿಡಿದುಕೊಂಡರೆ, ಕನಿಷ್ಠ 5 cm ಇರುತ್ತದೆ. ಇದನ್ನು ಬ್ರೆಸ್ಟ್ ನಾಡ್ಯೂಲ್ ಎನ್ನುತ್ತಾರೆ. ಪ್ರಿ ಮೆಚ್ಯೂರ್ ಬೇಬಿಗಳಲ್ಲಿ ಬ್ರೆಸ್ಟ್ ನಾಡ್ಯೂಲ್ 5 cm ಗಿಂತಲೂ ಕಡಿಮೆ ಇರುತ್ತದೆ
    ಫುಲ್ ಟರ್ಮ್ ಬೇಬಿಯ ಕಿವಿಯನ್ನು ಸ್ವಲ್ಪ ಹಿಂಡಿ ಬಿಟ್ಟು ಬಿಟ್ಟರೆ ತಕ್ಷಣ ಯಥಾಸ್ಥಿತಿಗೆ ಬರುತ್ತದೆ. ಪ್ರಿ ಮೆಚ್ಯೂರ್ ಬೇಬಿಗಳಲ್ಲಿ ಅಷ್ಟು ಬೇಗ ಯಥಾ ಸ್ಥಿತಿಗೆ ಬರುವುದಿಲ್ಲ.
    ಫುಲ್ ಟರ್ಮ್ ಬೇಬಿಯ ತಲೆಯ ಮೇಲೆ ಕೂದಲು ಒತ್ತತ್ತಾಗಿರುತ್ತದೆ, ಪ್ರೀ ಮೆಚ್ಯೂರ್ ಬೇಬಿಗೆ ತೆಳುವಾಗಿ ಸಣ್ಣಗಿರುತ್ತದೆ
    ಅವಧಿ ಪೂರ್ಣಗೊಳಿಸಿದ ನಂತರ ಜನಿಸಿದ ಗಂಡು ಮಗುವಿನಲ್ಲಿ ವೃಷಣ ಚೀಲ ಬೆಳವಣಿಗೆ ಆಗಿರುತ್ತದೆ. ಅದರಲ್ಲಿ ವೃಷಣಗಳೆರಡು ಕೆಳಕ್ಕೆ ಇಳಿದಿರುತ್ತದೆ ಪ್ರೀ ಮೆಚ್ಯೂರ್ ಬೇಬಿಯ ವೃಷಣಗಲು ಕೆಳಗೆ ಇಳಿಯದೆ ಮೇಲೆಯೇ ಇರುತ್ತದೆ
    ಫುಲ್ ಟರ್ಮ್ ಬೇಬಿಯಾ ಚರ್ಮ ಪಕ್ವವಾಗಿರುತ್ತದೆ, ಪ್ರೀ ಮಡಚ್ಯೂರ್ ಬೇಬಿಗಳಲ್ಲಿ ಚರ್ಮ ಬಹಳ ತೆಳು ಇರುತ್ತದೆ ಅದರ ಕೆಳಗಿನ ನರಗಳು ಕಾಣುತ್ತಿರುತ್ತದೆ
    ಮೊದಲ ಹೆರಿಗೆಯಲ್ಲಿ ಕಡಿಮೆ ತೂಕದ ಮಗು ಹುಟ್ಟಿದರೆ, ನಂತರದ ಹೆರಿಗೆಯಲ್ಲೂ ಕಡಿಮೆ ತೂಕದ ಮಗು ಹುಟ್ಟುವ ಸಾಧ್ಯತೆಗಳಿವೆ ಹಾಗಾಗಿ ಮೊದಲಿನಿಂದಲೇ ಜಾಗೃತ ವಹಿಸಬೇಕು
    ಕಡಿಮೆ ತೂಕದ ಮಗು ಹುಟ್ಟುವುದಕ್ಕೆ ಕೆಲವು ಕಾರಣಗಳಿವೆ ತಾಯಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರುವುದು. 40 ಕೆಜಿಗಿಂತಲೂ ಕಡಿಮೆ ತೂಕ ಇರುವುದು. ಗರ್ಭಿಣಿಯಾಗಿದ್ದರೆ 6.5 ಕೆಜಿಗಿಂತಲೂ ತೂಕ ಹೆಚ್ಚಾಗಿರುವುದು ಇವೆಲ್ಲಾ ಕಾರಣಗಳಿಂದ ಮಗುವಿನ ತೂಕ ಕಡಿಮೆಯಾಗುತ್ತದೆ.
    ತಾಯಿಗೆ ರಕ್ತ ಹೀನತೆ, ರಕ್ತದೊತ್ತಡ ಇದ್ದರೂ ಕೂಡ ಕಡಿಮೆ ತೂಕದ ಮಗು ಹುಟ್ಟಿರಬಹುದು. ಗರ್ಭಿಣಿಯಲ್ಲಿ ಉಮ್ಮುನೀರು ಹೆಚ್ಚಾಗಿದ್ದರು ತಾಯಿಯಿಂದ ಮಾಸು ಸ್ವಲ್ಪ ಪಕ್ಕಕ್ಕೆ ಸರಿದು ರಕ್ತಸ್ರಾವವಾಗಿದ್ದರೂ, ಅವಳಿ ಮಕ್ಕಳ ಅವ್ಯವಸ್ಥೆಯಿಂದಲೂ, ಬೆಳವಣಿಗೆ ಆಗುತ್ತಿದ್ದರು, ಗರ್ಭಿಣಿಯಾಗಿದ್ದಾಗ ಸೋಂಕು ತಗಲಿದ್ದರೂ, ಹುಟ್ಟುವ ಮಗುವಿನ ತೂಕ ಕಡಿಮೆ ಆಗಿರುತ್ತದೆ… ಕ್ರೋಮೋಸೋಮ್ಸ್ ಗಳ ವ್ಯವಸ್ಥೆ ಕೂಡ ಕಡಿಮೆ ತೂಕದ ಮಗುವಿನ ಜೀವನಕ್ಕೆ ಕಾರಣವಾಗುತ್ತದೆ ಬಹಳ ಕಡಿಮೆ ತೂಕದ ಮಗುವಿಗೆ ಆಹಾರ ನೀರು ಕೊಡುವ ವಿಷಯದಲ್ಲಿ ಅತ್ಯಂತ ಜಾಗೃತಿಯಾಗಿರಬೇಕು ಕಡಿಮೆ ತೂಕದ ಮಗುವಿನ ಶರೀರದಿಂದ ಹೆಚ್ಚು ನೀರು ಹೊರ ಹೋಗುತ್ತದೆ ಅದನ್ನು ಎಚ್ಚರಿಕೆಯಿಂದ ಗುರುತಿಸಿ ಮಗುವಿಗೆ ಕ್ರಮಬದ್ಧವಾಗಿ ನೀರು ಕೊಡುತ್ತಿರಬೇಕು.
    ಮಗುವಿನ ಪ್ರೋಟೀನ್ ಕಾರ್ಬೋಹೈಡ್ರೇಟ್ಸ್, ಕೊಬ್ಬು, ವಿಟಮಿನ್ಗಳ ಅಗತ್ಯಬಹಳವಿರುತ್ತದೆ. ಅದನ್ನು ಸರಿಯಾದ ಪ್ರಮಾಣದಲ್ಲಿ ಕೊಡಬೇಕು ಕಡಿಮೆ ತೂಕದ ಮಕ್ಕಳನ್ನು ಬಾಯಿಯ ಮೂಲಕ ಸೇವಿಸಲಾರದು. ಅಂತಹ ಸಂದರ್ಭದಲ್ಲಿ ನಿಗದಿತ ಪ್ರಮಾಣದಲ್ಲಿ ಪೂರೈಸಬೇಕು. ಬಾಯಿಯ ಮೂಲಕ ಸೇವಿಸಲಾರಂಭಿಸಿದ ಮೇಲೆ ತಾಯಿಯ ಹಾಲಿಗಿಂತ ಮಿಗಿಲಾದದ್ದು ಯಾವುದು ಇಲ್ಲ. ಮಗು ತಾಯಿಯ ಮೂಲೆಯನ್ನು ಹಿಡಿಯಲಾಗದಿದ್ದಾಗ ಸ್ಟೈನ್ ಲೇಸ್ ಸ್ಟೀಲ್ ಬಟ್ಟಲಿಗೆ ಹಾಲನ್ನು ಹಿಂಡಿ ಕುಡಿಸಬೇಕು. ಗಾಜಿನ ಬಟ್ಟಲನ್ನು ಬಳಸಬಾರದು ತಾಯಿಯ ಹಾಲಿನಲ್ಲಿರುವ ಕೊಬ್ಬು ಗಾಜಿನ ಬಟ್ಟಲಿಗೆ ಅಂಟಿಕೊಳ್ಳುತ್ತದೆ ತಾಯಿಯಿಂದ ಹಿಂಡಿದ ಹಾಲನ್ನು ಫ್ರಿಜ್ನಲ್ಲಿ 24 ಗಂಟೆಗಳ ಕಾಲ ಕಾಯ್ದಿರಿಸಬಹುದು.
    ಕಡಿಮೆ ತೂಕ ಇರುವ ಮಗು 1800 ಗ್ರಾಮ್ ಗಳಿಗಿಂತಲೂ ಹೆಚ್ಚು ತೂಕವಿದ್ದು, 34 ವಾರಗಳ ತುಂಬಿದ ನಂತರ ಹುಟ್ಟಿದರೆ ಮೊಲೆ ಹಿಡಿದುಕೊಂಡು ಚಪ್ಪಡಿಸುತ್ತಾ ಹಾಲು ಕುಡಿಯುತ್ತದೆ.
    ಎಷ್ಟು ಸಮಯಕ್ಕೆ ಆಹಾರ ಕೊಡಬೇಕೆಂಬುದು ಮಗುವಿನ ತೂಕದ ಮೇಲೆ ಅವಲಂಬಿಸಿರುತ್ತದೆ. ಒಂದುವರೆ ಕೆಜಿಗಿಂತಲೂ ಹೆಚ್ಚು ತೂಕವಿದ್ದರೆ ಪ್ರತಿ ಮೂರು ಗಂಟೆಗೊಮ್ಮೆ ಆಹಾರ ಕೊಡಬೇಕು. ಒಂದೂವರೆ ಕೆಜಿಗಿಂತಲೂ ಕಡಿಮೆ ತೂಕವಿದ್ದರೆ ಪ್ರತಿ ಎರಡು ಗಂಟೆ ಒಮ್ಮೆ ಆಹಾರ ಕೊಡಬೇಕು. ಬಹಳ ಕಡಿಮೆ ತೂಕ ಇದ್ದರೆ ಹುಟ್ಟಿದ ಮಕ್ಕಳು ಸುಮಾರು 20 ದಿನಗಳಲ್ಲಿ ಯಥಾಸ್ಥಿತಿಗೆ ಬರುತ್ತಾರೆ. ಕಡಿಮೆ ತೂಕದ ಮಕ್ಕಳಿಗೆ ಹಾಲು ಕುಡಿಯಲಾಗದಿರುವುದೇ ಅಲ್ಲದೆ ಕುಡಿದ ಹಾಲನ್ನು ಸದಾ ಕಕ್ಕುತಿರುತ್ತದೆ. ಅಲ್ಲದೆ ಒಮ್ಮೊಮ್ಮೆ ಶ್ವಾಸಕೋಶಗಳ ಒಳಗೆ ಹೋಗುವುದು ಉಂಟು.. ಹೊಟ್ಟೆಉಬ್ಬರಿಸುತ್ತದೆ. ಅರಿಶಿನಕಾಮಲೆ ಕಂಡು ಬರುತ್ತದೆ ಲಿವರ್ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಹಾಗಾಗಿ ಮೈಗೆ ನೀರು ಸೇರುತ್ತದೆ ನಾಡಿಮಂಡಲ ಶ್ವಾಸಕೋಶದ ಸಮಸ್ಯೆಗಳು ಉದ್ಭವಿಸುತ್ತದೆ.
    ಕಡಿಮೆ ತೂಕದ ಮಕ್ಕಳಿಂದ ತಾಯಿಯನ್ನು ಗಾಬರಿಗೋಳಪಡಿಸುವ “ಎಪ್ನಿಯಾ” ಸ್ಥಿತಿಗತಿಗಳು ಸದಾ ಎದುರಾಗುತ್ತಿರುತ್ತದೆ. ಮಗುವಿನ ಉಸಿರಾಟ ಇದ್ದಕ್ಕಿದ್ದಂತೆ ನಿಂತುಬಿಡುತ್ತದೆ. ಹೀಗೆ ಉಸಿರಾಟ ನಿಲ್ಲುವುದು ಕಡಿಮೆ ತೂಕದೊಂದಿಗೆ ಹುಟ್ಟಿದ ಮಕ್ಕಳಿಗೆ 20 ಸೆಕೆಂಡುಗಳ ಕಾಲ ಉಸಿರಾಟ ನಿಲ್ಲುವ ಸಂಭವವಿದೆ ಆಗ ಮೈಬಣ್ಣ ನೀಲಿ ಆಗುತ್ತದೆ. ಹೃದಯ ಬಡಿತ ನಿಧಾನವಾಗುತ್ತದೆ
    ಎಳೆಯ ಮಕ್ಕಳಿಗೆ ಎಪ್ನಿಯಾ ಬರಲು ಜ್ವರ ರಕ್ತದಲ್ಲಿ ಗ್ಲುಕೋಸ್ ಮತ್ತು ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುತ್ತದೆ ಸಾಮಾನ್ಯವಾಗಿ ಅವಧಿ ತುಂಬಿದ ನಂತರದ ಮಕ್ಕಳಿಗೆ ಎಪ್ನಿಯಾ ಇರುವುದಿಲ್ಲ.
    ಎಪ್ನಿಯಾ ಸ್ಥಿತಿಯಲ್ಲಿದ್ದಾಗ ಮಗುವನ್ನು ಸ್ವಲ್ಪ ಅಲ್ಲಾಡಿಸಿದರೆ, ಕುಲುಕಿದರೆ ಮತ್ತೆ ಉಸಿರಾಟ ಆರಂಭವಾಗುತ್ತದೆ. ಅದು ಹಾಗೆ ಇದ್ದರೆ ಬೀಸಣಿಗೆಯಿಂದ ಗಾಳಿ ಬೀಸಬೇಕಾಗುತ್ತದೆ ಅಗತ್ಯವಾದರೆ ಥೀಯೊ ಪೆಟ್ಲಿಕ್ ಮತ್ತು ಇತರ ಚುಚ್ಚುಮದ್ದುಗಳನ್ನು ನೀಡಬೇಕಾಗುತ್ತದೆ.
    ಕಡಿಮೆ ತೂಕದೊಂದಿಗೆ ಹುಟ್ಟುವ ಮಕ್ಕಳು ವಿಷಯದಲ್ಲಿ ಶ್ರದ್ಧೆ ಕಾಳಜಿ ವಹಿಸಬೇಕಾಗಿರುವುದು. ಬಹಳ ಅಗತ್ಯವಾದುದರಿಂದ ಒಂದೂವರೆ ಕೆಜಿಗಿಂತಲೂ ಕಡಿಮೆ ತೂಕದ ಮಕ್ಕಳು ಇಲ್ಲವೇ ಇರುವವರನ್ನು ತಕ್ಷಣ ಎಲ್ಲಾ ಸೌಲಭ್ಯಗಳಿರುವ ಆಸ್ಪತ್ರೆಯಲ್ಲಿ ಸೇರಿಸಬೇಕು. ನಿರ್ಲಕ್ಷಿಸಿದರೆ ಗಂಡಾಂತರ ತಪ್ಪಿದ್ದಲ್ಲ.

    ಹಿಂದಿನ ಲೇಖನಮನಸ್ಸಿಗೇಕೆ ಕಾಯಿಲೆ..?
    ಮುಂದಿನ ಲೇಖನಮಂಡ್ಯದಲ್ಲಿ ಎನ್​.ಚಲುವರಾಯಸ್ವಾಮಿ ವಿರುದ್ಧ ಬಿಜೆಪಿ ‘ಪೇಸಿಎಸ್’ ಅಭಿಯಾನ: ಕಾಂಗ್ರೆಸ್​’ನಿಂದಲೂ ಪ್ರತಿಭಟನೆ