ಮನೆ ಭಾವನಾತ್ಮಕ ಲೇಖನ ಮನಸ್ಸಿಗೇಕೆ ಕಾಯಿಲೆ..?

ಮನಸ್ಸಿಗೇಕೆ ಕಾಯಿಲೆ..?

0

ಜನಸಂಖ್ಯಾ ಶೇಖಡ 25% ರಷ್ಟು ಜನ ಒಂದಲ್ಲ ಒಂದು ರೀತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆಂದು ಸರ್ವೇಕ್ಷಣಗಳು ತಿಳಿಸುತ್ತದೆ. ಈ ಮಾನಸಿಕ ಸ್ಥಿತಿ ಕ್ರಮೇಣ ಆ ವ್ಯಕ್ತಿಗಳ ದೈಹಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಆಮೇಲೆ ಬಹುತೇಕ ಮಂದಿಗೆ ಶಾರೀರಿಕ ನೋವು, ಆಯಾಸ, ಬಳಲಿಕೆ, ನಿದ್ರಾಹೀನತೆ, ಆಹಾರಸೇವನೆ ಸಮಸ್ಯೆ, ಜೀರ್ಣ ಮತ್ತು ಮಲವಿಸರ್ಜನೆ ಸಂಬಂಧಿತ ತೊಂದರೆಗಳು ಲೈಂಗಿಕ ಅನಾಸಕ್ತಿ ಮತ್ತು ದುರ್ಬಲತೆಗಳು, ಏಕಾಗ್ರತೆ ಕೊರತೆ, ಮರೆವು, ಸಿಟ್ಟು, ಟೆನ್ಶನ್ ನಿರುತ್ಸಾಹ ಕಾಡಲು ಆರಂಭಿಸುತ್ತದೆ. ಇದೆಲ್ಲ ಮನಸ್ಸಿನ ಮಾಯೆ!

ಚಂಚಲತೆ ಮತ್ತೊಂದು ಹೆಸರು ಮನಸ್ಸು. ಈ ಮನಸ್ಸಿರೋದು ನಮ್ಮ ಮೆದುಳಿನಲ್ಲಿ ಪ್ರತಿ ಸೆಕೆಂಡಿಗೆ 10 ಸಾವಿರ ಮಾಹಿತಿಗಳು ಈ ಮೆದುಳಿನೊಳಗೆ ಬರುತ್ತಿರುತ್ತದೆ. ಅವನು ಕೂಡ್ರಿಕರಿಸಿ ಅರ್ಥೈಸಿ ಪ್ರತಿಕ್ರಿಸಲು 10,000 ಕೋಟಿ ನರ ಕೋಶಗಳು ಸದಾ ದುಡಿಯುತ್ತವೆ ಒಳ ಅಂಗಾಂಗಗಳಿಂದ ಬರುವ ಸೂಚನೆ ಮಾಹಿತಿಗಳು ನಮ್ಮ ಅರವಿಗೆ ಬರುವುದಿಲ್ಲ ನೋಡಿಕೊಳ್ಳುತ್ತದೆ ಆದರೆ ಕಣ್ಣು, ಕಿವಿ ,ಮೂಗು, ನಾಲಿಗೆ, ಚರ್ಮದಿಂದ ಒಳ ಬರುವ ವಿವಿಧ ಮಾಹಿತಿ ಪ್ರಚೋದನೆಗಳು ನಮ್ಮ ಅರಿವಿಗೆ ಬರಲೇಬೇಕು ಈ ಮಾಹಿತಿ ಪ್ರಕಾರ ನಮ್ಮ ಮನಸ್ಸು ಆಕರ್ಷಿಸಬಹುದು, ವಿಕರ್ಷಿಸಬಹುದು. ಜೊತೆಗೆ ಆಲೋಚನೆಗಳನ್ನು ಮಾಡುವಂತಹ ಮೆದುಳಿನ ಭಾಗ ಸದಾ ಚಟುವಟಿಕೆ ಹಿಂದಿರುತ್ತದೆ. ಒಂದಲ್ಲ ಒಂದು ವಿಚಾರದ ಬಗ್ಗೆ ಅದು ಚಿಂತನೆ ಮಾಡುತ್ತಲೇ ಇರುತ್ತದೆ. ಅದರಲ್ಲೂ ಮುಖ್ಯವಾಗಿ ನೆನ್ನೆಯ ಬಗ್ಗೆ ನಾಳಿನ ಬಗ್ಗೆ ನಾವು ಮಾಡಿದ, ಮಾಡಬೇಕಾದ ಕೆಲಸದ ಬಗ್ಗೆ, ನಮ್ಮ ಆಸೆ ಆಕಾಂಕ್ಷೆಗಳ ಬಗ್ಗೆ ನಮಗಾದ ಕಷ್ಟ, ನಷ್ಟ, ನೋವು, ನಿರಾಶೆ, ಅವಮಾನಗಳ ಬಗ್ಗೆ ಸಾಮಾನ್ಯ ಮತ್ತು ವಿಶೇಷ ಅಗತ್ಯಗಳ ಬಗ್ಗೆ ಚಿಂತೆ ಮಾಡುತ್ತಲೇ ಇರುತ್ತದೆ ಹೀಗೆ ಪಂಚೇಂದ್ರಿಯಗಳಿಂದ ಮನಸ್ಸಿನೊಳಗೆ ಬರುವ ವಿಷಯಗಳು ಅನುಭವಗಳು ಅವುಗಳ ಆಧಾರದ ಮೇಲೆ ಎಡ ಮೆದುಳು ಮಾಡುವ ಚಿಂತೆಗಳು ಕಲ್ಪನೆಗಳು ಮನಸ್ಸಿನ ಏಕಾಗ್ರತೆಯನ್ನು ಏರುಪೇರು ಮಾಡುತ್ತದೆ ರಾಗದ್ವೇಷಗಳನ್ನು ಸೃಷ್ಟಿಸಿ ಭಾವೋದ್ವೇಗಗಳನ್ನು ಮೂಡಿಸಿ, ಮನಸ್ಸಿನ ನೆಮ್ಮದಿಯನ್ನು ಕಲಕುತ್ತದೆ.

ಈ ವಿಷಯಗಳು ನಮ್ಮನ್ನು ತೀವ್ರವಾಗಿ ಅಥವಾ ದೀರ್ಘಕಾಲ ಕಾಡಿದರೆ, ನಮಗೆ ವಿವಿಧ ಬಗೆ ಮಾನಸಿಕ ಅಸ್ವಸ್ಥತೆಗಳನ್ನು ಕಾಣಿಸಿಕೊಳ್ಳಬಹುದು ಮೊದಲೇ ಹೇಳಿದಂತೆ ಒಟ್ಟು ಜನಸಂಖ್ಯೆ ಶೇಕಡ 25ರಷ್ಟು ಜನ ಈ ರೀತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಸರ್ವೇಕ್ಷಣಗಳು ತಿಳಿಸುತ್ತವೆ. ನೋವು, ಆಯಾಸ, ಬಳಲಿಕೆ, ನಿದ್ರಾಹೀನತೆ, ಆಹಾರಸೇವನೆ, ಜೀರ್ಣ ಮತ್ತು ಮಲ ವಿಸರ್ಜನೆಗೆ ಸಂಬಂಧಿಸಿದ ಕೊರತೆಗಳು ಲೈಂಗಿಕಆಸಕ್ತಿ ಮತ್ತು ದುರ್ಬಲತೆಗಳು ಅಥವಾ ಮಾನಸಿಕ ತೊಂದರೆಗಳಾದ…. ಏಕಾಗ್ರತೆ, ಕೊರತೆ, ಮರೆವು, ಸಿಟ್ಟು, ಟೆನ್ಶನ್, ನಿರುತ್ಸಹಗಳಿಂದ ಬಳಲುತ್ತಿದ್ದಾರೆ. ನಮಗೆ ಚಿಕಿತ್ಸೆ ಕೊಡಿ ಒಳ್ಳೆ ಟಾನಿಕ್ ಕೊಡಿ ಎಂದು ಸಾಮಾನ್ಯ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಹೋಗುತ್ತಾರೆ ಯಾವುದೇ ವೈದ್ಯರು ಮತ್ತು ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಶರೀರದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಈ ರೋಗಲಕ್ಷಣಗಳು ಅವರಲ್ಲಿರುವ ಅವರ ಪ್ರಕ್ಷಿಪ್ತಮನಸ್ಸು ಕಾರಣ ಅವರ ಮನಸ್ಸನ್ನು ಕಾಡುವ ನಕಾರಾತ್ಮಕ ಭಾಗಗಳೆ ಕಾರಣ ಎಂದು ಅಧ್ಯಯನಗಳು ತಿಳಿಸುತ್ತದೆ.

ಹಾಗೆಯೇ ಮೆದುಳಿನಲ್ಲಿರುವ 10,000 ಕೋಟಿಗೂ ಮಿಕ್ಕಿನ ನರಕೋಶಗಳಲ್ಲಿ ಆಗುವ ರಾಸಾಯನಿಕ ಏರುಪೇರುಗಳು ನರಕೋಶಗಳಲ್ಲಿ ಆಗುವ ಹಾನಿಗಳಿಂದಾಗಿ ತೀವ್ರ ರೀತಿಯ ಮಾನಸಿಕ ಕಾಯಿಲೆಗಳಾದ ಸ್ಕಿನ್ ಸ್ಕಿಜೋಫ್ರೀನಿಯಾ,ಮೇನಿಯಾ, ಅಕ್ಯೂಟ್ ಸೈಕೊಸಿಸ್ ಮತ್ತು ಡೆಮೆನ್ಷಿಯ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗಳಲ್ಲಿ ನರವಾಹಕ ವಸ್ತುಗಳ ಉತ್ಪಾದನೆ ಮತ್ತು ಕಾರ್ಯವೈಕರಿ ತಾಳ ತಪ್ಪಿರುತ್ತದೆ.

ಮಾನಸಿಕ ಕಾಯಿಲೆಗಳಿಂದ ಬಳಲುವವರು ಶೇಕಡ. 25 ರಷ್ಟು ಆದರೆ ಭಾವನಾತ್ಮಕ ಒತ್ತಡ ಸಮಸ್ಯೆಗಳಿಂದ ಬಳಲುವವರು 90ರಷ್ಟು ಜನ. ನಮ್ಮಲ್ಲಿ ಹದಿವಯಸ್ಸಿಗೆ ಬಂದಾದ ಮೇಲೆ ನಕಾರಾತ್ಮಕ ಭಾವನೆಗಳಾದ ದುಃಖ, ಕೋಪ, ಭಯ, ಮತ್ಸರ ,ಕೀಳರಿಮೆಗಳನ್ನು ಪ್ರಕಟಿಸುವುದು, ಮನೋ ದೌರ್ಬಲ್ಯದ ಸಂಕೇತವನ್ನು ತಿಳಿಯಲಾಗುತ್ತದೆ. ಅಳುವ ಹುಡುಗನನ್ನು ʼಹೇಡಿʼ ಅಂತಲೂ, ಕೋಪಿಸಿಕೊಳ್ಳುವ ಹುಡುಗಿಯನ್ನು ʼಬಜಾರಿʼ ಅಂತಲೂ ಭಯಪಡುವ ಹರೆಯದವರನ್ನು ʼಪುಕ್ಕಲರುʼಎಂತಲೂ, ಹೊಟ್ಟೆಕಿಚ್ಚು ಪಡುವರನ್ನು ʼಕೆಟ್ಟ ಹಾಗೂ ಸಂಕುಚಿತ ಮನೋಭಾವದವರೆಂತಲೂʼ ಹೀನಾಯವಾಗಿ ನೋಡಲಾಗುತ್ತದೆ. ಹೀಗಾಗಿ ಎಲ್ಲಾ ಭಾವನೆಗಳನ್ನು ನಾವು ಅದುಮಿಡುತ್ತೇವೆ. ಅದುಮಿಟ್ಟ ಈ ಭಾವನೆಗಳಿಂದಾಗಿ ದೇಹದಲ್ಲಿ ಹೆಚ್ಚು ಆಂಡ್ರಿನಲಿನ್ ಕಾರ್ಟಿಸಲ್ ಹಾರ್ಮೋನುಗಳು ಉತ್ಪತ್ತಿಯಾಗುತ್ತದೆ. ದೇಹದ ಒಳ ಅಂಗಾಂಗಗಳು ಹೆಚ್ಚು ಸೇವೆಯುತ್ತದೆ. ರೋಗಗ್ರಸ್ತವಾಗುತ್ತದೆ. ಸಿಹಿ ಮೂತ್ರ ರೋಗ, ಅಧಿಕ ರಕ್ತದೊತ್ತಡ, ಮೈಗ್ರೇನ್ ಅಥವಾ ಟೆನ್ಶನ್ ತಲೆನೋವು, ಉಸಿರಾಟದ ತೊಂದರೆ,ಚರ್ಮದ ಕಾಯಿಲೆಗಳು, ಅಸಿಡಿಟಿ-ಅಲ್ಸರ್,ಮಲಮೂತ್ರ ವಿಸರ್ಜನೆಗಳ ತೊಂದರೆಗಳು, ಲೈಂಗಿಕ ದುರ್ಬಲತೆ, ಕೀಲುಗಳ ಉರಿತ ಇತ್ಯಾದಿ ಮನೋ ದೈಹಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ಭಾವನಾತ್ಮಕ ಸಮಸ್ಯೆಗಳಿಗೆ ಕಾರಣಗಳು,…

1.ನಮಗೆ ಅಗತ್ಯಗಳು ಹೆಚ್ಚಾಗಿರುವುದು ಮತ್ತು ಅವುಗಳನ್ನು ಪೂರೈಸಿಕೊಳ್ಳಲು ನಮಗೆ ಸಾಧ್ಯವಾಗದಿರುವುದು : ಆಹಾರ ವಸತಿ ಐಷಾರಾಮ ಜೀವನಕ್ಕೆ ಬೇಕಾದ ವಸ್ತು ವಿಶೇಷಗಳು, ಪ್ರೀತಿ, ಕೀರ್ತಿ, ಸ್ಥಾನ,ಮಾನ ಅಧಿಕಾರದ ವಿಚಾರದಲ್ಲಿ ಸಾಕು ಎನ್ನುವವರು ವಿರಳವಾಗುತ್ತಿದ್ದಾರೆ ಬೇಕು ಇನ್ನಷ್ಟು ಬೇಕು ಎನ್ನುವವರೇ ಜಾಸ್ತಿ!

2. ವ್ಯಕ್ತಿ ವ್ಯಕ್ತಿ ನಡುವಿನ ಸಂಬಂಧ ಚೆನ್ನಿಲ್ಲದಿರುವುದು : ಮನೆ ಒಳಗೆ ಮತ್ತು ಹೊರಗೆ ವ್ಯಕ್ತಿ ವ್ಯಕ್ತಿಗಳ ನಡುವಿನ ಬಾಂಧವ್ಯ ಸ್ನೇಹ ಪರಸ್ಪರ ಗೌರವ ವಿಶ್ವಾಸ ಕಡಿಮೆಯಾಗುತ್ತಿದೆ. ಯಾರು ಯಾರನ್ನು ನಂಬದಂತಿರುವಂತಾಗಿದೆ. ಪ್ರತಿಯೊಬ್ಬರೂ ಮೋಸ ಮಾಡಿ ಘೋಷಿಸುವುದೇ ಇಂದಿನ ಜೀವನ ಶೈಲಿಯಾಗಿದೆ

3. ಕುಟುಂಬ ಚಿಕ್ಕದಾಗುತ್ತಿರುವುದು : ಶೇಕಡ 80ರಷ್ಟು ಕುಟುಂಬಗಳು ಈಗ ವಿಭಜಿತ ಗಂಡ ಹೆಂಡತಿ ಒಂದು ಅಥವಾ ಎರಡು ಮಕ್ಕಳು ದೊಡ್ಡವರಾಗುತ್ತಿದ್ದಂತೆ ಮನೆಯಿಂದ ದೂರವಾಗುತ್ತಾರೆ. ಉದ್ಯೋಗ ನಿಮಿತ್ತ ಗಂಡ ಒಂದು ಕಡೆ, ಹೆಂಡತಿ ಇನ್ನೊಂದು ಕಡೆ ಒಂಟಿತನದ ಈಗ ಎಲ್ಲರನ್ನು ಕಾಡುತ್ತಿದೆ

4. ವಿಪರೀತ ಸ್ಪರ್ಧೆ : ಎಲ್.ಕೆ.ಜಿ ಇರಲಿ ಪೋಸ್ಟ್ ಗ್ರಾಜುಯೇಟ್ ಕೋರ್ಸ್ ಇರಲಿ, ಹಣ ಸಂಪಾದನೆ ಇರಲಿ, ಅದನ್ನು ಖರ್ಚು ಮಾಡುವುದಿಲ್ಲ. ವಿಪರೀತ ಸ್ಪರ್ಧೆ ಅತ್ಯಲ್ಪಕಾಲದಲ್ಲಿ, ಎಲ್ಲರಿಗಿಂತ ತಾನು ಮುಂದಿರಬೇಕು ಅಥವಾ ಮೇಲಿರಬೇಕೆಂದು ಪ್ರತಿ ವ್ಯಕ್ತಿ ಬಯಸುತ್ತಾನೆ. ಅಥವಾ ಆತನ ಮೇಲೆ ಮನೆಯವರು ಒತ್ತಡ ಹಾಕುತ್ತಾರೆ.

5.ಸಾಮಾಜಿಕ ಅಸಮಾನತೆ-ಅವ್ಯವಸ್ಥೆ-ಅಭದ್ರತೆ : ಲಿಂಗ ವಯಸ್ಸು ಜಾತಿ ವರ್ಗಹಳ್ಳಿ ಪಟ್ಟಣ ನಿಕ್ಷಿತ ಅನಿಕ್ಷಿತ ಬಡವ ಶ್ರೀಮಂತರಿಗೆ ಹಲವು ರೀತಿಗಳಲ್ಲಿ ವ್ಯಕ್ತಿಯನ್ನು ಪಕ್ಷಪಾತಕ್ಕೆ ಒಳ ಮಾಡುತ್ತಾರೆ ಎಲ್ಲಾ ಕಡೆ ಎಲ್ಲಾ ಸಮಸ್ಯೆಗಳಲ್ಲಿ ಅವ್ಯವಸ್ಥೆ ಇದೆ. ಯಾರಿಗೂ ಭದ್ರತೆ ಇಲ್ಲ ಯಾವಾಗ ಎಲ್ಲಿ ಏನು ತೊಂದರೆ ಹಾನಿಯಾಗುತ್ತದೆ ಎಲ್ಲಿ ಹೇಗೆ ಅಪಾಯಕಾದಿದೆಯೋ ಯಾರಿಗೂ ಗೊತ್ತಿಲ್ಲ.

6. ಉದ್ಯೋಗದಲ್ಲಿ ಅತೃಪ್ತಿ, ಅನ್ಯಾಯಗಳು : ಉದ್ಯೋಗಗಳು ಈಗ ಹಣ ಸಂಪಾದನೆ ಮಾರ್ಗಗಳು ಅಷ್ಟೇ ಉದ್ಯೋಗ ಮಾಡಿ ಜನಕ್ಕೆ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತೇವೆ ಎಂಬ ಧೋರಣೆಯೂ ಯಾರಲ್ಲೂ ಇಲ್ಲ. ಅನಿವಾರ್ಯವಾಗಿ ಜೀವನೋಪಾಯಕ್ಕೆ ಕೀರ್ತಿ ಮರ್ಯಾದೆಗೆ ಒಂದು ಉದ್ಯೋಗ ಬೇಕೆನ್ನುತ್ತಾರೆ. ಹೊರತು ಆ ಉದ್ಯೋಗ ಮಾಡಿ ಸಂತೋಷಪಡುತ್ತೇನೆ ಸಮಾಜದ ಸೇವೆ ಮಾಡುತ್ತೇವೆ, ಎಂದು ಯಾರೂ ಹೇಳರು ! ಉದ್ಯೋಗದಲ್ಲಿ ಇಂಕ್ರಿಮೆಂಟ್ ಪ್ರಮೋಷನ್ ಟ್ರಾನ್ಸ್ಫರ್ ಮೇಲು ಸಂಪಾದನೆ ಕೆಲಸ ಮಾಡದೆ ಕಾಲ ಕಳೆಯುವುದು ಹೇಗೆ ಜವಾಬ್ದಾರಿಗಳನ್ನು ಹೇಗೆ ಇನ್ನೊಬ್ಬರ ಹೆಗಲಿಗೆ ವರ್ಗಾಯಿಸುವುದೆಂಬುದರ ಬಗ್ಗೆ ಚಿಂತಿಸುತ್ತಾರೆ.

7. ನೈತಿಕ ಮೌಲ್ಯಗಳ ಪತನ : ಶಿಸ್ತು, ಸಂಯಮ, ಪರಹಿತ, ಸಮಾಜದ ಹಿತ, ನೀತಿ ನಿಯಮಗಳ ಪಾಲನೆ, ದಾನ-ಧರ್ಮ, ಪರೋಪಕರ ಹೀಗೆ ಹೆಚ್ಚಿನ ಜನರಿಗೆ ಬೇಡವಾಗಿದೆ ಸ್ವಾರ್ಥಕ್ಕಾಗಿ ಅಡ್ಡದಾರಿ ಹಿಡಿಯ ಪ್ರವೃತ್ತಿ ಹೆಚ್ಚಿದೆ.                                                      

ಮುಂದುವರೆಯುತ್ತದೆ……

ಹಿಂದಿನ ಲೇಖನಅಡಿಕೆ ತೋಟದಲ್ಲಿ ಗಾಂಜಾ ಬೆಳೆದಿದ್ದ ಇಬ್ಬರ ಬಂಧನ: 2 ಕೆಜಿ 164 ಗ್ರಾಂ ಹಸಿ ಗಾಂಜಾ ವಶ
ಮುಂದಿನ ಲೇಖನಮಕ್ಕಳ ಆರೋಗ್ಯ ಸಮಸ್ಯೆಗಳು ಭಾಗ-3