ಮನೆ ಸುದ್ದಿ ಜಾಲ ಲಡಾಖ್  ಭಾಗದ ವಿದ್ಯುತ್ ಸರಬರಾಜು ಕೇಂದ್ರಗಳ ಮೇಲೆ ಚೀನಾ ಸೈಬರ್ ದಾಳಿ

ಲಡಾಖ್  ಭಾಗದ ವಿದ್ಯುತ್ ಸರಬರಾಜು ಕೇಂದ್ರಗಳ ಮೇಲೆ ಚೀನಾ ಸೈಬರ್ ದಾಳಿ

0

ನವದೆಹಲಿ: ಭಾರತದ ಲಡಾಖ್‌ ಭಾಗದಲ್ಲಿರುವ ವಿದ್ಯುತ್‌ ಸರಬರಾಜು ಕೇಂದ್ರಗಳನ್ನು ಗುರಿಯಾಗಿಸಿ ಚೀನಾ ಸರ್ಕಾರ ಬೆಂಬಲಿತ ಹ್ಯಾಕರ್‌ಗಳು ಸೈಬರ್‌ ದಾಳಿಗಳನ್ನು ನಡೆಸಿರುವ ಮಾಹಿತಿ ಲಭ್ಯವಾಗಿದೆ.

ಗಡಿ ಭಾಗಗಳಲ್ಲಿ ಭಾರತ ಮತ್ತು ಚೀನಾ ಸೇನಾ ಪಡೆಗಳ ನಿಯೋಜನೆಯು ಮುಂದುವರಿದಿದ್ದು, ಈ ನಡುವೆ ಕಳೆದ ಎಂಟು ತಿಂಗಳಲ್ಲಿ ಸೈಬರ್‌ ದಾಳಿಗಳು ನಡೆದಿರುವುದಾಗಿ ಸೈಬರ್‌ ಭದ್ರತೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆ ‘ರೆಕಾರ್ಡೆಡ್‌ ಫ್ಯೂಚರ್’ ಹೇಳಿದೆ.

ಭಾರತದ ಕನಿಷ್ಠ 7 ರಾಜ್ಯ ವಿದ್ಯುತ್‌ ರವಾನೆ ಕೇಂದ್ರಗಳನ್ನು (ಎಸ್‌ಎಲ್‌ಡಿಸಿ) ಹ್ಯಾಕರ್‌ಗಳು ಗುರಿಯಾಗಿಸಿಕೊಂಡಿರುವುದನ್ನು ಗಮನಿಸಲಾಗಿದೆ. ಪವರ್‌ ಗ್ರಿಡ್‌ಗಳು ಮತ್ತು ವಿದ್ಯುತ್‌ ಸರಬರಾಜಿನ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಲಾಗಿದೆ. ಲಡಾಖ್‌ಗೆ ಸಮೀಪದ ಉತ್ತರ ಭಾರತದ ವಿದ್ಯುತ್‌ ರವಾನೆ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ. ಕಳೆದ ವರ್ಷ ಆಗಸ್ಟ್ ನಿಂದ ಈ ವರ್ಷ ಮಾರ್ಚ್‌ ವರೆಗೂ ಸೈಬರ್‌ ದಾಳಿ ನಡೆದಿರುವುದು ತಿಳಿದು ಬಂದಿದೆ.