ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದ ಮನೆಯೊಂದರ ಮೇಲೆ ಪೋಲಿಸರು ದಾಳಿಮಾಡಿದ್ದು, 81 ನಾಡಬಾಂಬ್ ವಶಪಡಿಸಿಕೊಂಡಿದ್ದಾರೆ.
ದೇವಸಮುದ್ರದ ಸುಮನ್ ಎಂಬುವರ ಮನೆ ಮೇಲೆ ಪೋಲಿಸರು ದಾಳಿಮಾಡಿದ್ದು, ಈ ವೇಳೆ ಕಾಡು ಪ್ರಾಣಿ ಬೇಟೆಗೆ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಪತ್ತೆಯಾಗಿದೆ. ನಾಡಬಾಂಬ್ ಸಂಗ್ರಹಿಸಿಟ್ಟಿದ್ದ ಆರೋಪಿ ಸುಮನ್, ಆಂಧ್ರ ಮೂಲದ ಗಂಗಣ್ಣ ಎಂಬುವವರನ್ನು ಪೋಲಿಸರು ಬಂಧಿಸಿದ್ದಾರೆ.
ಇನ್ನು ಸಿಕ್ಕಿರುವ ನಾಡಬಾಂಬ್ ಗಳನ್ನು ಬಾಂಬ್ ಸ್ಕ್ವಾಡ್ ದಳವು ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ನಿಷ್ಕಿಯಗೊಳಿಸಿದೆ. ಮೊಳಕಾಲ್ಮೂರು ಸಿಸಿಐ ಸತೀಶ್ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದ್ದು, ಈ ಸಂಬಂಧ ರಾಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














