ಮನೆ ರಾಜ್ಯ ನಾಲೆಗಳಿಗೆ ನೀರು ಹರಿಸಲು ಒತ್ತಾಯ: ಮಂಡ್ಯ ಜಿಲ್ಲೆಯಲ್ಲಿ ಮೈ-ಬೆಂ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ನಾಲೆಗಳಿಗೆ ನೀರು ಹರಿಸಲು ಒತ್ತಾಯ: ಮಂಡ್ಯ ಜಿಲ್ಲೆಯಲ್ಲಿ ಮೈ-ಬೆಂ ಹೆದ್ದಾರಿ ತಡೆದು ರೈತರ ಪ್ರತಿಭಟನೆ

0

ಮಂಡ್ಯ: ನಾಲೆಗಳಿಗೆ ನೀರು ಹರಿಸುವಂತೆ‌ ಒತ್ತಾಯಿಸಿ ಮಂಡ್ಯದ ಸಂಜಯ್ ವೃತ್ತದಲ್ಲಿ ಮೈ-ಬೆಂ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ.

Join Our Whatsapp Group

ರಾಜ್ಯ ಸರ್ಕಾರ ಹಾಗೂ ಕಾವೇರಿ‌ ನೀರಾವರಿ‌ ನಿಗಮದ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳೆದ ಬೆಳೆ ಉಳಿಸಿಕೊಳ್ಳಲು ರೈತರ ಹೋರಾಟ ಕೈಗೆತ್ತಿಕೊಂಡಿದ್ದು, ಕಾವೇರಿ ನೀರು ನಂಬಿಕೊಂಡು 45 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಅದರಲ್ಲಿ 3000 ಟನ್ ಕಬ್ಬು ಕಟಾವಿಗೆ ಬಂದಿದೆ. ಆದರೆ ಕೆ.ಆರ್.ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ನಾಲೆಗೆ ನೀರು ನಿಲ್ಲಿಸಲಾಗಿದೆ. ಇದರಿಂದ ಬೆಳೆದು ನಿಂತ ಕಬ್ಬು ಒಣಗುತ್ತಿದ್ದು, ಎರಡು ಮೂರು ದಿನದಲ್ಲಿ ನೀರು ಬಿಡದಿದ್ದರೆ ಬೆಳೆ ನಾಶವಾಗುತ್ತೆ. ಬೆಳೆ ನಷ್ಟವಾದರೆ 3000 ಕೋಟಿ ಬೆಳೆ ನಾಶವಾಗುತ್ತೆ. ಆದ್ದರಿಂದ ಈ ಕೂಡಲೇ ಡ್ಯಾಂನಿಂದ ನಾಲೆಗಳ ಮೂಲಕ ರೈತರ ಬೆಳೆಗೆ ನೀರು ಹರಿಸಿ ಎಂದು ಪ್ರತಿಭಟನಾಕಾರರು  ಒತ್ತಾಯಿಸಿದ್ದಾರೆ.

ಕೆ.ಆರ್.ಎಸ್ ಡ್ಯಾಂನಲ್ಲಿ ಡ್ಯಾಂನಲ್ಲಿ ಸದ್ಯ 90 ಅಡಿ ನೀರಿದೆ. 74 ಅಡಿ ವರೆಗೂ ರೈತರ ಬೆಳೆಗೆ ನೀರು ಹರಿಸಬಹುದು. ನಾಲೆಗೆ ನೀರು ಹರಿಸದಿದ್ದರೇ ಮುಂದಿನ ದಿನದಲ್ಲಿ ಉಗ್ರಹೋರಾಟ ಮಾಡ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಶ್ರೀರಂಗಪಟ್ಟಣದಲ್ಲೂ ಪ್ರತಿಭಟನೆ:

ನಾಲೆ ನೀರು ಹರಿಸಲು ಒತ್ತಾಯಿಸಿ ಶ್ರೀರಂಗಪಟ್ಟಣದ ಕುವೆಂಪು ವೃತ್ತದ ಬಳಿಯ ಮೈ- ಬೆಂ ಹೆದ್ದಾರಿ ತಡೆದು ಜಿಲ್ಲಾ ರೈತ ಸಂಘದ ವತಿಯಿಂದ ರೈತರು ಪ್ರತಿಭಟನೆ ನಡೆಸಿದ್ದಾರೆ.

ರೈತರ ಬೆಳೆಗೆ ನೀರು ಹರಿಸದ ಸರ್ಕಾರದ ವಿರುದ್ಧ ಹೆದ್ದಾರಿ ತಡೆದು ರಸ್ತೆಯಲ್ಲಿ ಧರಣಿ ಕುಳಿತು ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಬೆಳೆಗೆ ನೀರು ಹರಿಸದಿದ್ರೆ ವಿಧಾನಸೌಧಕ್ಕೆ ರೈತರ ಮುತ್ತಿಗೆ ಹಾಕುವುದಾಗಿ ಇದೇ ಸಂದರ್ಭದಲ್ಲಿ ರೈತರು ಎಚ್ಚರಿಕೆ ನೀಡಿದ್ದಾರೆ.

ರೈತರ ಪ್ರತಿಭಟನೆ ಹಿನ್ನಲೆ ವಾಹನ ಸವಾರರು ಪರದಾಡುವಂತಾಗಿದೆ. ಮೈ-ಬೆಂ ಹೆದ್ದಾರಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಹಿಂದಿನ ಲೇಖನಚಿತ್ರದುರ್ಗ: ಮನೆಯೊಂದರಲ್ಲಿ ಸಂಗ್ರಹಿಟ್ಟಿದ್ದ 81 ನಾಡಬಾಂಬ್ ಪೊಲೀಸ್ ವಶಕ್ಕೆ
ಮುಂದಿನ ಲೇಖನರಾಜ್ಯದ ಪರ ಧ್ವನಿ ಎತ್ತುವ ಶಕ್ತಿ ಇರೋದು ಜೆಡಿಎಸ್ ಗೆ ಮಾತ್ರ: ಹೆಚ್.ಡಿ ಕುಮಾರಸ್ವಾಮಿ