ಮನೆ ಆರೋಗ್ಯ ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

0

ಈಗ ಬಿ.ಪಿ ಹೃದ್ರೋಗ ಸ್ಥೂಲ ಶರೀರ ಕೊಲೆಸ್ಟ್ರಾಲ್  ಇತ್ಯಾದಿ ಪದಗಳು ವೈದ್ಯಕೀಯ ರಂಗದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ತಿಳಿವಳಿಕಸ್ಥರೂ ತಿಳಿವಳಿಕೆ ಯಿಲ್ಲದವರೂ  ಕೊಲೆಸ್ಟ್ರಾಲ್ ಒಂದು ಪೆಡಂಭೊತವೆಂಬಂತೆ ಭಾವಿಸುತ್ತಾರೆ. ಕೊಲೆಸ್ಟ್ರಾಲ್ ಅದರಲ್ಲಿದೆ, ಅದನ್ನು ತಿನ್ನಬೇಡಿ ಇದನ್ನು ತಿನ್ನಿ ಇನ್ನೂ ಏನೇನೋ ಕಲ್ಪನೆಗಳು ವಾಸ್ತವದಲ್ಲಿ ಕೊಲೆಸ್ಟ್ರಾಲ್ ಎಂದರೇನು? ಮನುಷ್ಯನಿಗೆ ಅದು ಹೇಗೆ ಹಾನಿಕರ ವಂದು ತಿಳಿದುಕೊಳ್ಳಬೇಕಾದ ವಿಷಯ.

ಕೊಲೆಸ್ಟ್ರಾಲ್  ಎನ್ನುವುದು ಒಂದು ಮೃದುವಾದ ಮೇಣದಂತಹ ವಸ್ತು.ಲಿವರ್ ನಲ್ಲಿ ತಯಾರಾಗುವ ಇದು ರಕ್ತದಲ್ಲಿ ವಿಲೀನ ವಾಗಿ, ಶರೀರದಲ್ಲೆಲ್ಲಾ ಪ್ರವಹಿಸಿ ಹಲವಾರು ಹಾರ್ಮೋನ್ ಗಳು  ಪಿತ್ತ ರಸ (Bile) ವಿಟಮಿನ್ ‘ಡಿ’ ಮುಂತಾದವುಗಳ ಉತ್ಪತ್ತಿಗೆ ಕಾರಣವಾಗಿದೆ.

ಆದರೆ ಕೊಲೆಸ್ಟ್ರಾಲ್  ನಮ್ಮ ದೇಹದಲ್ಲಿ ಹೆಚ್ಚಾದರೆ, ರಕ್ತನಾಳಗಳಲ್ಲಿ ಶೇಖರಣೆಯಾಗಿ ರಕ್ತ ಸಂಚಾರಕ್ಕೆ ಆಡಚಣೆ ಉಂಟು ಮಾಡುವ ಎಥಿರೋಸ್ಕೖರೋಸಿಸ್ (Antherosclerosis) ನಿಂದಾಗಿ ಹೃದಯಾಘಾತಕ್ಕೂ ಆಕಸ್ಮಿಕ ಮರಣಕ್ಕೂ ಕಾರಣವಾಗುತ್ತದೆ.

ಕೊಲೆಸ್ಟ್ರಾಲ್ ಸಂಬಂಧಿಸಿದಂತೆ ಹಲವಾರು ಪರ್ಯಾಯ ಪದಗಳು ಕೇಳಿ ಬರುತ್ತವೆ, ಬ್ಲಡ್ ಕೊಲೆಸ್ಟ್ರಾಲ್ ಆಹಾರಕ್ಕೆ ಸಂಬಂಧವುಳ್ಳ ಕೊಲೆಸ್ಟಾರಾಲ್: ಫ್ಲ್ಯಾಟ್ ( ಕೊಬ್ಬು) ಅನ್ ಸ್ಯಾಚ್ಯುರೇಟೆಡ್ ಪ್ಲಾಟ್, ಲಿಪೋ ಪ್ರೋಟೀನ್ಸ್,ಹೈಡೆನ್ಸಿಟಿ ಲಿಪೋ ಪ್ರೋಟೀನ್ಸ್ ಇತ್ಯಾದಿ.

    ರಕ್ತದ ಕೊಲೆಸ್ಟ್ರಾಲ್ (Blood cholesterol)

  ರಕ್ತದ ಮೂಲಕ ಹರಡುವ ಕೊಲೆಸ್ಟ್ರಾಲ್ ಅನ್ನು ಬ್ಲಡ್ ಕೊಲೆಸ್ಟ್ರಾಲ್ ಎನ್ನುತ್ತಾರೆ.ಇದು ಲಿವರ್ ನಲ್ಲಿ  ಉತ್ಪತ್ತಿಯಾಗಿ, ರಕ್ತದೊಂದಿಗೆ ಸೇರಿಕೊಂಡು ದೇಹದಲ್ಲೆಲ್ಲಾ ಪರಸರಿಸುತ್ತದೆ. ನಾವು ತಿನ್ನುವ ಆಹಾರದಿಂದಲೂ, ಪಿತ್ತ ಜನಾಂಗ ಗ್ರಹಿಸುವ  ಕೊಲೆಸ್ಟ್ರಾಲ್ ನಮ್ಮ ರಕ್ತದಲ್ಲಿ ಸೇರಿಕೊಳ್ಳುತ್ತದೆ. ರಕ್ತದಲ್ಲಿ ಇರಬೇಕಾದ ಪ್ರಮಾಣಕ್ಕಿಂತ ಅಧಿಕ ಕೊಲೆಸ್ಟ್ರಾಲ್ ಸೇರ್ಪಡೆಯಾದಾಗ ಬೇರೆ ಕೊಬ್ಬು ಪದಾರ್ಥಗಳೊಂದಿಗೆ ರಕ್ತನಾಳಗಳ ಒಳಭಾಗದಲ್ಲಿ ಶೇಖರವಾಗುತ್ತದೆ ಹೀಗೆ ಹಲವಾರು ವರ್ಷದವರೆಗೆ ಶೇಖರವಾಗಿ ರಕ್ತ ಸಂಚಾರಕ್ಕೆ ಅಡಚಣೆಯಾಗಿ (ರಕ್ತನಾಳದ ಮಾರ್ಗ ಕಿರಿದಾಗಿ ) ಅಧಿಕ ರಕ್ತ ದೂತ್ತಡ, ಹೃದಯಘಾತ ಆಗಬಹುದು ಮೆದಳಿಗೆ ರಕ್ತ ಸಂಚರಿಸದೆ ಆಮ್ಲಜನಕ ಕೊರತೆಯಾಗಿ ಕಣ್ಣು ಸುತ್ತುವುದು. ಕಣ್ಣು ಮುಂಜಾಗುವುದು ಉಂಟಾಗಿ. ಕೊನೆಯದಾಗಿ ಪಾರ್ಶ್ವ ವಾಯು  ಉಂಟಾಗಬಹುದು.

ಆಹಾರಕ್ಕೆ ಸಂಬಂಧಿಸಿದ ಕೊಲೆಸ್ಟ್ರಾಲ್ (Dietary cholesterol)

ಪ್ರಾಣಿಗಳ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅವುಗಳ ಶರೀರದ ಕಣಗಳಲ್ಲಿ ಸೇರಿಕೊಂಡು ಕೊಬ್ಬಿನ ರೂಪದಲ್ಲಿ ಶೇಖರಿಸಲ್ಪಟ್ಟಿರುತ್ತದೆ ಮಾಂಸವನ್ನು ನಾವು ತಿಂದಾಗ, ಆ ಕೊಬ್ಬು ನಮ್ಮ ಶರೀರವನ್ನು ಸೇರುತ್ತದೆ. ಇದನ್ನು ಆಹಾರದ ಕೊಲೆಸ್ಟ್ರಾಲ್ ಎನ್ನುತ್ತೇವೆ ನಾವು ತಿನ್ನುವ ಮಾಂಸ. ಮೊಟ್ಟೆ, ಹಾಲು,ಬೆಣ್ಣೆ ಮುಂತಾದವುಗಳಲ್ಲಿ ಈ ವಿಧವಾದ (Dietary Cholesterol )ಇರುತ್ತದೆ.

 (ಕೊಬ್ಬು)

 ಕೊಬ್ಬು ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುವುದಲ್ಲದೆ, ಶರೀರ ವಿಟಮಿನ್ ಗಳನ್ನು ತನ್ನಲ್ಲಿ ಸೇರಿಸಿಕೊಳ್ಳಲು ಸಹಾಯ ಮಾಡುತ್ತದೆ ಇದರಲ್ಲಿ ಎರಡು ವಿಧ ಸ್ಯಾಚ್ಯುರೇಟೆಡ್ ಮತ್ತು ಅನ್ ಸ್ಯಾಚುರೇಟೆಡ್.

  ( ಸ್ಯಾಚುರೇಟೆಡ್ ಕೊಬ್ಬು )

      ಇದು ರಕ್ತದ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಮಾಂಸ,ಹಾಲು, ಚಿಕನ್, ಬೆಣ್ಣೆಗಳಂತಹ ಡೈರಿ ಉತ್ಪನ್ನಗಳಲ್ಲಿ. ಮೊಟ್ಟೆ ತೆಂಗಿನ ಎಣ್ಣೆ  ಪಾನ್ ಇಯಿಲ್, ಮೊದಲಾದವುಗಳಲ್ಲಿರುತ್ತದೆ ಸಾಮಾನ್ಯ ರಿಫ್ರಿಜರೇಟರ್ ನ ಉಷ್ಣತೆಯಲ್ಲಿ ಹೆಪ್ಪುಗಟ್ಟುತ್ತದೆ.

 ಅನ್ ಸಾಚ್ಯರೇಟೆಡ್ (ಫ್ಯಾಟ್ Unsaturated Fat)

ಇದು ರೆಫ್ರಿಜರೇಟರ್ ಟೆಂಪರೇಚರ್ನಲ್ಲಿ ಹೆಪ್ಪುಗಟ್ಟಿದೆ ದ್ರವರೂಪದಲ್ಲಿರುತ್ತದೆ ಸ್ಯಾಚುರೇಟೆಡ ಫ್ಯಾಟ್ಘಗಿಂತ ಉತ್ತಮ ಇದರಲ್ಲಿ ಮತ್ತೆ ಎರಡು ವಿಧಗಳಿವೆ.

  ಪಾಲಿ ಆನ್ ಸ್ಯಾಚುರೇಟೆಡ್ ಫ್ಯಾಟ್, ಮತ್ತು ಮನೋ  ಆನ್ ಸ್ಯಾಚುರೇಟೆಡ್ ಫ್ಯಾಟ್ ಸೂರ್ಯಕಾಂತಿ ಎಣ್ಣೆ(Sun flower)ಸೋಯಾಬಿನಾ ಎಣ್ಣೆ ಮುಂತಾದವುಗಳಲ್ಲಿ ಅನ್ ಸ್ಯಾಚುರೇಟೆಡ್ ಪ್ಲಾಟ್ ಇರುತ್ತದೆ. ಕಡಲೆಕಾಯಿ ಎಣ್ಣೆ ಸಾಸಿವೆ ಎಣ್ಣೆ ಆಲಿವ್ ಆಯಿಲ್ ಗಳಲ್ಲಿ ಮೋನೋ ಅನ್ ಸ್ಯಾಚುರೇಟೆಡ್ ಫ್ಯಾಟ್ ಇರುತ್ತದೆ. ದೖನಂದಿನ ಜೀವನದಲ್ಲಿ ಸ್ಯಾಚುರೇಟೆಡ್ ಪ್ಯಾಡ್ ಗಿಂತ  ಅನ್ ಸ್ಯಾಚುರೇಟೆಡ್ ಫ್ಯಾಟ್ ಅನ್ನು ಉಪಯೋಗಿಸಿದರೆ. ನಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೂ ತೊಂದರೆ ಇಲ್ಲ.

ಲಿಪ್ರೋ ಪ್ರೋಟಿನ್ಸ್   (Lipoproteins)

 ಪ್ರೊಟೀನ್  ಕೋಟಿಂಗ್ ಇರುವ ಈ ಪ್ಯಾಕೇಜ್ ಗಳು ನಮ್ಮ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಗ್ರಹಿಸುತ್ತಾ ಓಡಾಡಿತ್ತಿರುತ್ತವೆ.ಇದರಲ್ಲಿ ಮತ್ತೆ ಎರಡು ವಿಧಗಳಿವೆ ಹೈಡೆನ್ಸಿಟಿ ಲಿಪೊ ಪ್ರೋಟೀನ್ಸ್(HDL) ಲೊಡೆನ್ಸಿಟಿ ಲಿಪೊಪ್ರೊಟೀನ್ಸ್ (LDL).

       ಹೈಡೆನ್ಸಿಟಿ  ಲಿಪೊಪ್ರೋಟೀನ್ಸ್ (HDL)ನಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಅನ್ನು ನಿರ್ಮೂಲ ಮಾಡಲು ಸಹಾಯ ಮಾಡುತ್ತವೆ.ಇವು ರಕ್ತದಲ್ಲಿರುವ ಹೆಚ್ಚು ಕೊಲೆಸ್ಟ್ರಾಲ್ ನ್ನು ಲಿವರಿಗೆ (Liver)ವರ್ಗಾಯಿಸುತ್ತದೆ  ಲಿವರ್ ಅದನ್ನು ಶರೀರದಿಂದ ಹೋಗುವಂತೆ ಮಾಡುತ್ತದೆ. ಇದು ರಕ್ತದಲ್ಲಿ(HDL) ಎಷ್ಟು ಹೆಚ್ಚಾಗುತ್ತದೋ ಅಷ್ಟು ಹೃದ್ರೋರೋಗಗಳಿಂದ ದೂರ ವಿರಬಹುದು.

ಲೋ ಡೆನ್ಸಿಟಿ ಲಿಪೋ ಪ್ರೋಟೀನ್ (LDL) ಗಳು ರಕ್ತದಲ್ಲಿನ ಹೆಚ್ಚು ಭಾಗ ಕೊಲೆಸ್ಟ್ರಾಲ್ ನ್ನು ತಾವೇ ಹೊತ್ತು ತೆಗೆದುಕೊಂಡು ಹೋಗುತ್ತವೆ. ಹಾಗೆ ಒಯ್ಯುವಾಗ ಅಲ್ಲಲ್ಲಿ ರಕ್ತನಾಳಗಳಲ್ಲಿ ಕೆಳಭಾಗ ಕೊರಸ್ಟರಾಲ್ ನ್ನು ಬಿಟ್ಟು ಹೋಗುತ್ತವೆ. ಹಾಗೆ ಬಿಡಲ್ಪಟ್ಟ ಕೊಲೆಸ್ಟ್ರಾಲ್ ರಕ್ತನಾಳದ ಒಳಭಾಗದಲ್ಲಿ ಅಂಟಿಕೊಂಡು ರಕ್ತ ಸಂಚಾರಕ್ಕೆ ಅಡ್ಡಿಯಾಗಿ ಹೃದಯದ ರೋಗಿಗಳಿಗೆ, ಪಾರ್ಶ್ವವಾಯುವಿಗೆ ದಾರಿಯಾಗುತ್ತದೆ. ನಿಮ್ಮ ರಕ್ತದಲ್ಲಿ ಲೋಡೆನ್ಸಿಟಿ ಲಿಪೋ ಪ್ರೋಟೀನ್ ಗಳು (LDL)  ಎಷ್ಟು ಹೆಚ್ಚಾಗಿರುವುದೋ,  ಅಷ್ಟು ನೀವು ಹೃದಯ ರೋಗಿಗಳಿಗೆ ಹತ್ತಿರವಾಗಿವಿರಿ.

(HDL, LDLಗಳೆರಡೊ ಕೊಲೆಸ್ಟ್ರಾಲ್ ನಲ್ಲಿನ ಎರಡು ಉಪಭಾಗಗಳು ಒಳ್ಳೆಯ ಮತ್ತು ಕೆಟ್ಟ ಕೊಲೆಸಸ್ಟರಾಲ್ )

  ಹೈಡೆನ್ಸಿಟಿ ಲಿಪ್ರೋಟೀನ್ ಗಳು( HDL)ರಕ್ತದಲ್ಲಿನ ಕೊಲೆಸ್ಟ್ರಾಲ್ ನ್ನು  ಕಡಿಮೆ ಮಾಡುವುದರಿಂದ,ಇವುಗಳನ್ನು ಗುಡ್ ಕೊಲೆಸ್ಟ್ರಾಲ್ ಎಂದೂ,ಲೋಡೆನ್ಸಿಟಿ ಲಿಪೋ ಪ್ರೋಟೀನ್ ಗಳು  (LDL)ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಶೇಖರವಾಗುವಂತೆ ಮಾಡುವುದರಿಂದ ಇವುಗಳನ್ನು ಬ್ಯಾಡ್ ಕೊಲೆಸ್ಟ್ರಾಲ್ ಎಂದೂ ಕರೆಯುತ್ತಾರೆ.

ನಾವು ಸೇವಿಸುವ ಆಹಾರದಲ್ಲಿ ಕೊಬ್ಬು ಅಧಿಕವಾಗಿದ್ದಾಗ, ಉದಾಹರಣೆಗೆ ಮೊಟ್ಟೆಯ ಹಳದಿ ಭಾಗ,ಕಿಡ್ನಿ, ಬ್ರೈನ್, ಲಿವರ್, ಹಾಲು,ಬೆಣ್ಣೆ ಮೊದಲಾದವುಗಳನ್ನು ಸೇರಿಸಿದಾಗ (Dietary Colesterol)ಇವೆಲ್ಲವುಗಳಿಂದ ನಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ (Blood Cholesterol)

ಹೆಚ್ಚಾಗುತ್ತದೆ.    ರಕ್ತದಲ್ಲಿ ಅಧಿಕವಾದ  ಕೊಲೆಸ್ಟ್ರಾಲ್ ನ್ನು ಒಂದು ಕಡೆಹೈಡೆನ್ಸಿಟಿ ಲಿಪೋ  ಪ್ರೋಟೀನ್ ಗಳು (HDL)ಲಿವರಿಗೆ ಕಳಿಸಿ ತ್ಯಜಿಸಲು ಪ್ರಯತ್ನಿಸುತ್ತವೆ. ಮತ್ತೊಂದೆಡೆ ಲೋಡೆನ್ಸಿಟಿ  ಲಿಪೋ ಪ್ರೋಟೀನ್ಗಳು(LDL)  ರಕ್ತನಾಳಗಳಲ್ಲಿ ಶೇಖರವಾಗಲು ಪ್ರೀತಿಸುತ್ತವೆ.  ಹಾಗೆ ರಕ್ತನಾಳಗಳಲ್ಲಿ ಶೇಖರಿಸಲ್ಪಟ್ಟ ಕೊಲೆಸ್ಟರಾಲ್ ನ್ನು ಹೆಪ್ಪುಗಟ್ಟಿರಕ್ತ ಪ್ರವಾಹಕ್ಕೆ ಅಡ್ಡಿಯಾಗಿ ಹೃದಯ ರೋಗವನ್ನೂ  ಪಾರ್ಶ್ವವಾಯುವನೋ ಉಂಟು ಮಾಡುತ್ತದೆ. ರಕ್ತನಾಳಗಳಲ್ಲಿ ಎಷ್ಟು ಕೊಲೆಸ್ಟ್ರಾಲ್ ಶೇಖರವಾಗುದೆಂಬುದನ್ನು  ಆಹಾರದ ಮೂಲಕ ಎಷ್ಟು ಕೊಬ್ಬು ಪದಾರ್ಥಗಳನ್ನು ತೆಗೆದುಕೊಂಡಿರಿ, ನಿಮ್ಮ ರಕ್ತದಲ್ಲಿ HDL ಮತ್ತು LDL ಯಾವ ಪ್ರಮಾಣದಲ್ಲಿ ಇದೆ: ಎಂಬುದನ್ನು ಅವಲಂಬಿಸಿರುತ್ತದೆ.

ರಕ್ತದಲ್ಲಿ ಕೊಲೆಸ್ಟ್ರಾಲ್ ಎಷ್ಟಿರಬೇಕು?

ಅಮೇರಿಕದ ನ್ಯಾಷನಲ್ ಕೊಲೆಸ್ಟ್ರಾಲ್ ಎಜುಕೇಶನ್ ಪೋಗ್ರಾಮ್(National cholesterol Education programme)ನವರು ಪ್ರಕಟಿಸಿದ ಗೈ ಡ್ ಲೈನ್ಸ್  ಪ್ರಕಾರ,ನಮ್ಮ ರಕ್ತದ ಲ್ಲಿನ ಕೊಲೆಸ್ಟ್ರಾಲ್, ಅಂದರೆ ಬ್ಲಡ್ ಕೊಲೆಸ್ಟ್ರಾಲ್ ಒಂದು ಡೆಸಿ ಲೀಟರ್ 200  ಮಿಲಿ ಗ್ರಾಮಗಳಿಗಿಂತ  200 mg/dl) ಮೀರಿರಬಾರದು.

200 ರಿಂದ 239ರ ಮಧ್ಯೆ ಇರುವುದು ಅಪಾಯದ ಮುನ್ಸೂಚನೆ 240., ಅನಂತರ ಇರುವುದು ಅಪಾಯದ ಸೂಚನೆ.

HDL, LDLಗಳು ಎಷ್ಟಿರಬೇಕು?

     ರಕ್ತದಲ್ಲಿ ಕೊಲೆಸ್ಟರಾಲ್, ಅಂದರೆ ಬ್ಲಡ್ ಕೊಲೆಸ್ಟ್ರಾಲ್ 200mg /dl ಗಿಂತ ಹೆಚ್ಚಾಗಿದ್ದರೆ, ಡಾಕ್ಟರ್ ಅದರಲ್ಲಿ ಲಿಪೋ ಪ್ರೋಟೀನ್ ಗಳ ವಿಶ್ಲೇಷಣೆಗಾಗಿ ರಕ್ತದ ಮಾದರಿಯನ್ನು ಲ್ಯಾಬೋರೇಟರಿಗೆ ಕಳಿಸುತ್ತಾರೆ.ಲ್ಯಾಬೋರೇಟರಿಯವರು ಒಂದು ಡಿಸಿ ಲೀಟರ್ ರಕ್ತದಲ್ಲಿ HDL  ಎಷ್ಟಿದೆ. LDL ರಷ್ಟಿದೆ ಎಂದು ವಿಶ್ಲೇಷಣೆ ಮಾಡಿ ವರದಿ ಕಳಿಸುತ್ತಾರೆ.

  ಫಲಿತಾಂಶದ ವರದಿಯಲ್ಲಿ LDL  130 ಆಗಿದ್ದರೆ ಒಳ್ಳೆಯದು.  ವ್ಯಕ್ತಿ ಕ್ಷೇಮವಾಗಿರುವನೆಂದು ಅರ್ಥ ಹಾಗಲ್ಲದೆ 130ಕ್ಕೆ  ಮೇಲಿದ್ದರೆ ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ಜಾಗರೂಕತೆಯಿಂದರ ಬೇಕೆಂದು ಎಚ್ಚರಿಕೆ ಕೊಡುತ್ತಾರೆ. 160ಕ್ಕೂ ಹೆಚ್ಚಾಗಿದ್ದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಔಷಧಿಯನ್ನು ಸೂಚಿಸುತ್ತಾರೆ.

    ರಕ್ತದಲ್ಲಿನ HDL ಕುರಿತು ಪರಿಶೀಲಿಸಿದಾಗ   HDLb ಎಷ್ಟು ಅಧಿಕವಾಗಿದ್ದರೂ ನೀವು ಚಿಂತಿಸುವ ಕಾರಣವಿಲ್ಲ ಆದರೆ 35mg/dl ಗಿಂತ ಕಡಿಮೆಯಿದ್ದರೆ ಮಾತ್ರ ಬಹಳ ಕಡಿಮೆಯಿರುವುದೆಂದು ಅರ್ಥ ಆದರೆ ಶರೀರಕ್ಕೆ ಉಪಕಾರಿಯಾ ಗುಡ್ ಕೋಲಸ್ಟರಾಲ್ ಅಷ್ಟುಕಡಿಮೆಯಾಗುವುದು ಕ್ಷೇಮಕರವಲ್ಲ

ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವ ಸೂಚನೆಗಳು

ಅಡಿಗೆಗೆ ಬಳಸುವ ಎಣ್ಣೆಯಲ್ಲಿ. ಸ್ಯಾಚ್ಯುರೇಟ್ಡ್ ಪ್ಯಾಂಟ್ ಇರುವ ಎಣ್ಣೆಗಾಳಿರದಂತೆ  ಎಚ್ಚರಿಕೆ ವಹಿಸಬೇಕು ಉದಾಹರಣೆಗೆ ಪಾಮ್ ಆಯಿಲ್, ಕೊಬ್ಬರಿ ಎಣ್ಣೆ, ಡಾಲ್ಡಾ ಮೊದಲಾದವು.

ಬೇಯಿಸುವಾಗ ಎಣ್ಣೆಯನ್ನು  ಅತಿಯಾಗಿ ಬಳಸಬೇಡಿ ಎಷ್ಟು ಕಡಿಮೆ ಬಳಸಿದರೆ ಅಷ್ಟು ಒಳ್ಳೆಯದು ಬೇಕಾಗುವಷ್ಟು ಮಾತ್ರ ಎಣ್ಣೆ ಬಳಸಲು ಉಪಯುಕ್ತವಾದವು. ನಾನ್ ಸ್ಟಿಕಿಂಗ್ ಫೈಯಿಂಗ್ ಪ್ಯಾನ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ

* ತರಕಾರಿ ಹೆಚ್ಚು ಬೇಯಿಸಬಾರದು

(Half boiled ಒಳ್ಳೆಯದು) *ಕಾಫಿ ಟೀಗಳಲ್ಲಿ ಕೆನೆರಹಿತ ಹಾಲನ್ನು ಮಾತ್ರ ಉಪಯೋಗಿಸಬೇಕು

*  ಕಾಫಿಟೀಗಳಲ್ಲಿ    ಎರಡು ಚಮಚಗಿಂತ ಹೆಚ್ಚು ಸಕ್ಕರೆ ಬಳಸಬಾರದು.

 *ಪಲ್ಯಗಳಿಗೆ ಬೆಣ್ಣೆ,ತುಪ್ಪ,

ಡಾಲ್ಡಾ ಬಳಸಬಾರದು

 *ವರಕ್ಕೆ 2ಇಲ್ಲವೇ 3ಕ್ಕೆ ಮೀರಿ ಕೋಳಿ ಮೊಟ್ಟೆ ಸೇವಿಸಬಾರದು.

 *ಮಾಂಸಹಾರದಲ್ಲಿ ಮೀನುಗಳನ್ನು ಹೆಚ್ಚು ಬಳಸಿ

*ಮಾಂಸದಲ್ಲಿ ಲಿವರ್ ಕಿಡ್ನಿ ಬ್ರೈನ್ ನಂತಹವುಗಳಿರದಂತೆ ನೋಡಿಕೊಳ್ಳಿ ಹಾಗೆಯೇ  ಕೊಬ್ಬು ಸಹ.

* ದಿನಕ್ಕೆ ತೆಗೆದುಕೊಳ್ಳುವ ಒಟ್ಟು ಕ್ಯಾಲರಿಗಳಲ್ಲಿ ಕೊಬ್ಬಿಗೆ ಸಂಬಂಧಿಸಿದ ಕ್ಯಾಲರಿಗಳು ಪ್ರತಿಶತ30ಕ್ಕಿಂತ ಕಡಿಮೆಯಿರುವಂತೆ ನೋಡಿಕೊಳ್ಳಬೇಕು.

 *ನಿಮ್ಮ ತೂಕ ಗಾತ್ರstandard ಶರೀರಕ್ಕೆ ತಕ್ಕಂತೆ ಹೇಳಿರುವಂತೆ ನೋಡಿಕೊಳಳ್ಳಿ ನಿಮ್ಮ ತೂಕ2.2 ಪೌಂಡುಗಳು ಹೆಚ್ಚಿದ್ದರೆ, ನಿಮ್ಮ ರಕ್ತದ ಕೊಲೆಸ್ಟ್ರಾಲ್ 2ಪಾಯಿಂಟುಗಳಷ್ಟು ಏರುತ್ತದೆ.

* ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.ಹಣ್ಣುಗಳಲ್ಲಿರುವ ಪೆಕ್ಟಿನ್ (pectin)ಎಂಬ ಪದಾರ್ಥ ಕ್ಯಾಬೇಜ್, ಈರುಳ್ಳಿಗಳಲ್ಲಿಯೂ ಇರುತ್ತದೆ. ಆದ್ದರಿಂದ ತರಕಾರಿಗಳಲ್ಲಿ ನೀವುಗಳನ್ನು ಹೆಚ್ಚು ಬಳಸುವುದು ಒಳ್ಳೆಯದು.

 ದಿನವೂ ವ್ಯಾಯಾಮ ಮಾಡಿ. ವ್ಯಾಯಾಮ ರಕ್ತದಲ್ಲಿನ ಗುಡ್ ಕೊಲೆಸ್ಟ್ರಾಲ್ (HDL )ಹೆಚ್ಚಿಸಿ ಬ್ಯಾಡ್ ಕೊಲೆಸ್ಟರಾಲ್(LDL) ತಗ್ಗಿಸುತ್ತದೆ.

 *ದಿನವೂ ಸ್ಕಿಮ್ಡ್ ಹಾಲನ್ನು ಕುಡಿಯಿರಿ.ಈ ಹಾಲಿನಲ್ಲಿ ಕೊಬ್ಬಿಲ್ಲದ ಭಾಗ ನಮ್ಮ ಲಿವರ್ ನಿಂದ  ಕೊಲೆಸ್ಟರಾಲನ್ನು ಕಡಿಮೆ ಉತ್ಪಾದನೆ ಮಾಡಿಸುತ್ತದೆ.

 *ಬೆಳ್ಳುಳ್ಳಿ ರಸದಲ್ಲಿ ಕೊಲಸ್ಟರಾಲ್ ನ್ನು ತಗ್ಗಿಸುವ ಗುಣವಿದೆ. ರಕ್ತದಲ್ಲಿ ಅಧಿಕ ಕೊಲೆಸ್ಟ್ರಾಲ್ ನಿಂದ ಬಾಧೆಪಡುವ ರೋಗಿಗಳಿಗೆ  1ಗ್ರಾ(1ಟೀ ಸ್ಪೂನ್ )ಬೆಳ್ಳುಳ್ಳಿ ರಸವನ್ನು ಕುಡಿಸಿದಾಗ, ಆರು ತಿಂಗಳಲ್ಲಿ ಅವರಲ್ಲಿ 44 ಪಾಯಿಂಟ್ಗಗಳ  ಬ್ಲಡ್ ಕೋಲೆ ಸ್ಟರಾಲ್ ಕಡಿಮೆಯಾಗುವುದೆಂದು ರುಜುವಾದಾಗಿದೆ. 

ಇನ್ನು ಕೊನೆಯದಾಗಿ

 *ಕಾಫಿ, ಟೀಗಳನ್ನು ಕಡಿಮೆ ಮಾಡಿಕೊಳ್ಳಿ. ಸಿಗರೇಟ್ ಸಂಪೂರ್ಣ ನಿಲ್ಲಿಸಿ.

*. ರಿಲ್ಯಾಕ್ಸ್ ಆಗಿ. ರಿಲ್ಯಾಕ್ಸೇಷನ್ ಕೂಡಾ ರಕ್ತದಲ್ಲಿನ ಕೊಲೆಸ್ಟ್ರಾಲ್ ನ್ನು  ಕಡಿಮೆಗೊಳಿಸುವುದೆಂದು ರುಜುವಾತಾಗಿದೆ.

ಹಿಂದಿನ ಲೇಖನತುಮಕೂರು: ಸುಟ್ಟ ಸ್ಥಿತಿಯಲ್ಲಿ ಮೂವರ ಶವ ಪತ್ತೆ
ಮುಂದಿನ ಲೇಖನಮಾರ್ಚ್ 24ರಂದು ಕೆ.ಆರ್.ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸೆಕ್ಯೂರಿಟಿ, ಹೌಸ್ ಕೀಪಿಂಗ್ ಕಾರ್ಮಿಕರ ಕುಂದುಕೊರತೆ ಸಭೆ